News Karnataka Kannada
Thursday, May 02 2024
ಲೇಖನ

ರಕ್ತ ಸಂಬಂಧಗಳನ್ನು ಮೀರಿದ ನವಿರಾದ ಬಂಧ ಗೆಳೆತನ

It is a bond beyond blood relations.
Photo Credit : Pexels

ಹೇ ಮಗಾ ತುಂಬಾ ಹಸಿವಾಗ್‍ತ್ತಿದೆ ಕ್ಯಾಂಟೀನ್‍ಗೆ ಹೋಗೋಣವಾ? ನನ್ನ ಹತ್ರ ದುಡೇ ಇಲ್ಲ ಕಣೋ ಏನ್ ಮಾಡೋದು? ಹೇ ನಾನ್ ಕೋಡ್‍ತ್ತಿನೋ. ಅನ್ನೋ ಮಾತುಗಳು ಇನ್ನು ಕಿವಿ ತುಂಬಾ ಕೇಳಿಸುತ್ತಿದೆ. ಆ ಕಾಲೇಜು ದಿನಗಳೇ ಹಾಗೆ ಅದೆಷ್ಟು ಬೇಗೆ ಮುಗಿದು ಹೋಯಿತೋ ಅಂತ ತಿಳಿದಿಲ್ಲ. ನಮ್ಮ ಗೆಳೆಯರನ್ನ ಅದೆಷ್ಟು ಬೇಗ ಅಗಲಿ ದೂರಾಗಿದ್ದಿವೋ ತಿಳಿಯಲಿಲ್ಲ. ಎಲ್ಲವು ಒಂದು ಕನಸಿನಂತೆ ಕಣ್ಣ ಮುಂದೆ ಬಂದು ಮಾಯವಾಗಿಬಿಟ್ಟಿತ್ತು.

ಮನುಷ್ಯನಿಗೆ ಬುದ್ದಿ ಬಂದಾಗಿನಿಂದ ತನ್ನನ್ನು ಅರ್ಥಮಾಡಿಕೊಳ್ಳುವ ಒಂದು ಮನಸ್ಸು ಬೇಕೆಂದು ಪರಿತಪಿಸುತ್ತಾನೆ. ಅದು ಹೆತ್ತವರ ಆಗಿರಬೇಕೆಂದೇನು ಇಲ್ಲ. ನಮ್ಮ ಒಡ ಹುಟ್ಟಿದವರೇ ಆಗಬೇಕೆಂದೇನಿಲ್ಲ ಅದು ಯಾರಾದರು ಆಗಿರಬಹುದು.

ಎಲ್ಲೊ ಇದ್ದವರು ಯಾವುದೋ ಒಂದು ಕಾಲೇಜಿನಲ್ಲಿ ಪರಿಚಯವಾಗಿ ಆ ಪರಿಚಯ ಗೆಳೆತನಕ್ಕೆ ಪರಿವರ್ತನೆಯಾಗುವುದು ಒಂದು ಅದ್ಬುತವೇ ಸರಿ. ಪಿಯುಸಿ ವರೆಗೂ ಒಂದು ಪ್ರಪಂಚವಾದರೆ ಪದವಿ ಶಿಕ್ಷಣ ಕಲಿಯುವಾಗ ಮತ್ತೊಂದು ಪ್ರಪಂಚ ಶುರುವಾಗುತ್ತದೆ.

ಗಳಿಸಿದ ಹಣವಾದರು ಕರಗಿಹೋಗಬಹುದು ಆದರೆ ಗಳಿಸಿದ ಗೆಳೆತನವಲ್ಲ. ತಾನು ಕಷ್ಟದಲ್ಲಿದ್ದರೂ ತನ್ನ ಗೆಳೆಯನ ಕಷ್ಟಕ್ಕೆ ಸ್ಪಂದಿಸುವವನು ನಿಜವಾದ ಸ್ನೇಹಿತ ಎನ್ನುತ್ತಾರೆ. ನನ್ನ ಗೆಳೆತನವೂ ಕೂಡ ಹಾಗೇ.

ನಾನು ನನ್ನ 3 ಸ್ನೇಹಿತರ ಪುಟ್ಟ ಪ್ರಪಂಚ ತರಗತಿಯಲ್ಲಿ ನಮ್ಮದೇ ಹವಾ ಎಂದರೂ ತಪ್ಪಾಗಲಾರದು. ನಾಲ್ಕೂ ಜನ ಒಂದೇ ಬೆಂಚಿನಲ್ಲಿ ಕುಳಿತು ಕ್ಲಾಸ್ ಕೇಳುತ್ತಿದ್ದೇವು. ಆದರೆ ನಾವು ಬ್ಯಾಕ್ ಬೆಂಚ್ ಸ್ಟುಡೆಂಟ್‍ಗಳಲ್ಲ ಫಸ್ಟ್ ಬೆಂಚ್ ಸ್ಟುಡೆಂಟ್. ಕಲಿಕೆಯಲ್ಲು ಚೆನ್ನಾಗಿದ್ದ ನಾವು ತರಗತಿ ನಡೆಯುವಾಗ ಲೆಕ್ಚರ್‍ ಗಳಿಗೆ ತೊಂದರೆ ನೀಡುವುದರಲ್ಲೂ  ಎತ್ತಿದ ಕೈ.

ತರಗತಿಯಲ್ಲಿ ಅಕ್ಕ ಪಕ್ಕ ಕುಳಿತುಕೊಂಡು ಮಾತುಕತೆ ನಡೆಸಿ ಅದೆಷ್ಟೋ ಬಾರಿ ಲೆಕ್ಚರರ್ ಕೈಯಲ್ಲಿ ಸಿಕ್ಕಿ ಬಿದ್ದು ತರಗತಿಯ ಹೊರನಡೆದಿದ್ದೇವೆ, ಅದೆಷ್ಟೋ ಬಾರಿ ಕ್ಲಾಸ್ ಬಂಕ್ ಮಾಡಿ ಕ್ಯಾಂಟೀನ್ ಸುತ್ತುತ್ತಿದ್ದಾಗ ಲೆಕ್ಚರರ್ ನಮ್ಮನು ನೋಡಿ ವಾಪಸ್ ತರಗತಿಗೆ ಕಳಿಸಿದ್ದಿದೆ . ಅಷ್ಟೇ ಯಾಕೆ ಕ್ಲಾಸ್‍ನಲ್ಲಿ ಮುಂದಿನ ಬೆಂಚ್‍ನಲ್ಲಿ ಕುಳಿತು ತರಗತಿ ನಡೆಯುವಾಗ ಸ್ನೇಹಿತರ ಟಿಫಿನ್ ತೆರದು ತಿಂಡಿ ತಿಂದಿದ್ದಿವೀ ಅದೂ ಲೆಕ್ಚರರ್ ಕೈಗೆ ಸಿಕ್ಕಿ ಬೀಳದೆ. ಈಗ ಅದನ್ನೆಲ್ಲಾ ನೆನಪಿಸುವಾಗ ಕಣ್ಣಂಚು ಒದ್ದೆಯಾಗುವುದು ಖಂಡಿತ.

ನಮ್ಮ ಈ ಪುಟ್ಟ ಪ್ರಪಂಚ ಅದೆಷ್ಟು ಬೇಗ ಕೊನೆಗೊಂಡಿತು ಎನ್ನುವುದು ಗೊತ್ತೆ ಆಗಲಿಲ್ಲ. ಕಾಲೇಜು ಕೊನೆ ದಿನ ಬಂದದ್ದು ತಿಳಿಯಲೇ ಇಲ್ಲ ರಿಸರ್ಚ್, ಅಸೈನ್‍ಮೆಂಟ್, ಪ್ರೆಸೆಂಟೇಶನ್ ಪರೀಕ್ಷೆಗಳ ನಡುವೆ ನಾವು ಸೆರೆಹಿಡಿದ ಕೆಲವೊಂದು ಸುಂದರ ಅನುಭವಗಳು ಇಂದು ಕೇವಲ ನೆನಪುಗಳಾಗಿ ಮಾತ್ರ ಉಳಿದಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು