News Karnataka Kannada
Saturday, May 18 2024
ಮಂಗಳೂರು

ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಸಮಾಲೋಚನಾ ಸಭೆ

Consultative meeting of the Saint Mother Teresa's Forum
Photo Credit : By Author

ಮಂಗಳೂರು: ಮಹಾ ಮಾನವತಾವಾದಿಗಳಾದ ಸಂತ ಮದರ್ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆಯನ್ನು ವ್ಯವಸ್ಥಿತವಾಗಿ ನಡೆಸುವ ಅಂಗವಾಗಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಸಮಾಲೋಚನಾ ಸಭೆಯನ್ನು ನಗರದ ಸಂದೇಶ ಸಂಸ್ಥೆಯಲ್ಲಿ ವೇದಿಕೆಯ ಗೌರವಾಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಪ್ರೀತಿಯ ದ್ಯೋತಕವಾದ ಸಂತ ಮದರ್ ತೆರೇಸಾರವರ ನಿಸ್ವಾರ್ಥ ಸೇವೆ ಹಾಗೂ ಆದರ್ಶಗಳನ್ನು ಭವಿಷ್ಯದ ವಿದ್ಯಾರ್ಥಿ ಯುವಜನರಿಗೆ ತಿಳಿ ಹೇಳುವ ಮೂಲಕ ಸುಂದರ ಸಮಾಜದ ನಿರ್ಮಾಣಕ್ಕೆ ಕಟಿ ಬದ್ದರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜನ್ಮ ತಾಳಿದ ವೇದಿಕೆಯು ಕಳೆದ 5 ವರ್ಷಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗ್ರತಿ ಮೂಡಿಸಿದೆ.ಈ ವರ್ಷ ಮದರ್ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆಯನ್ನು ಜಿಲ್ಲಾ ಮಟ್ಟದ ವಿಚಾರ ಸಂಕಿರಣ,ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸಾಕ್ಷ್ಯಚಿತ್ರ ಪ್ರದರ್ಶನ, ಸೌಹಾರ್ದ ಗಾಯನದ ಮೂಲಕ ಅತ್ಯಂತ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂದೇಶ ಸಂಸ್ಥೆಯ ನಿರ್ದೇಶಕರಾದ ಫಾ.ಸುದೀಪ್ ಪೌಲ್, ದಲಿತ ಚಳುವಳಿಯ ಹಿರಿಯ ನೇತಾರ ಎಂ.ದೇವದಾಸ್,ಯುವ ನಾಯಕರಾದ ಮುನೀರ್ ಕಾಟಿಪಳ್ಳ,ಮಹಿಳಾ ಮುಖಂಡರಾದ ಸುಮತಿ ಎಸ್ ಹೆಗ್ಡೆ,ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಉಪಸ್ಥಿತರಿದ್ದರು.

ಸಭೆಯಲ್ಲಿ ಪ್ರಮುಖರಾದ ಫಾ.ರೂಪೇಶ್ ಮಾಡ್ತಾ, ಜೋಸೆಫ್ ಕ್ರಾಸ್ತಾ, ಫಾ.ಜೆ.ಬಿ.ಸಲ್ಡಾನಾ,ಸ್ಟಾನಿ ಲೋಬೋ,ರೊನಾಲ್ಡ್ ಗೋಮ್ಸ್,ಲ್ಯಾನ್ಸಿ ಕಾರ್ಲೋ, ಲ್ಯಾನ್ಸಿ ಡಿ ಕುನ್ಹಾ,ಸುಶೀಲ್ ನೊರೋನ್ಹಾ,ಜೈಸನ್ ಡಿಸೋಜ, ಆಲ್ವಿನ್ ಮೊಂತೆರೋ, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಮಹಮ್ಮದ್ ಕುಂಜತ್ತಬೈಲ್, ಡಾ.ಕ್ರಷ್ಣಪ್ಪ ಕೊಂಚಾಡಿ ಯಾದವ ಶೆಟ್ಟಿ, ಬಿ.ಕೆ.ಇಮ್ತಿಯಾಜ್,ಮನೋಜ್ ವಾಮಂಜೂರು,ಯೋಗೀಶ್ ಜಪ್ಪಿನಮೊಗರು,ರಘು ಎಕ್ಕಾರು,ವಿನೀತ್ ದೇವಾಡಿಗ, ರೇವಂತ್ ಕದ್ರಿ,ರೋಬಿನ್ ಪ್ರೀತಂ,ಶಾಂತಿ ಡಾಯಸ್, ಡಯಾನ ಡಿಸೋಜ, ಪ್ಲೋರಿನ್ ಡಿಸೋಜ, ಪ್ಲೇವಿ ಕ್ರಾಸ್ತಾ, ನ್ಯಾನ್ಸಿ ಅತ್ತಾವರ, ಹರಿಪ್ರಸಾದ್ ರೈ, ಕಿಶೋರ್ ಫರ್ನಾಂಡೀಸ್, ಪ್ಲೇವಿ ಡಿಮೆಲ್ಲೋ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು