News Karnataka Kannada
Friday, May 03 2024
ಲೇಖನ

ಚುನಾವಣೆಗಾಗಿ ಇತಿಹಾಸ ತಿರುಚುವಿಕೆ ಪ್ರಕ್ರಿಯೆ ಅಸಿಂಧು

ಭಾರತ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯನ್ನು ಮಾ.16ರಂದು ಘೋಷಿಸಿದ್ದು, ಅದರಂತೆ  ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಿಗಧಿಯಾಗಿರುತ್ತದೆ. ಏ.26, ಶುಕ್ರವಾರ ದಂದು  ಮೊದಲನೆಯ ಹಂತ ಹಾಗೂ ಮೇ.7 ಮಂಗಳವಾರ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಯಾದಗಿರಿ ಜಿಲ್ಲೆಯ 36-ಶೋರಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಮೇ.7ರಂದು ನಡೆಯಲಿದೆ.
Photo Credit :

“ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ” ಎಂಬ ನಾಡ್ನುಡಿಯನ್ನು ಅರಿಯದ ಇಂದಿನ ಬಿಜೆಪಿಯ ಪ್ರಮುಖರು ಮುಂದೆ ಇತಿಹಾಸ ಸೃಷ್ಟಿಸುತ್ತಾರೆಯೇ?. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಉರಿ ಗೌಡ ಹಾಗೂ ನಂಜೇಗೌಡ ಎಂಬ ಹೆಸರುಗಳು ತೀವ್ರ ಸದ್ದು ಮಾಡುತ್ತಿದ್ದೆ. ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಡ್ಡ ಕಾರ್ಯಪ್ಪ ಅವರು ರಚಿಸಿರುವ ಟಿಪ್ಪು ನಿಜ ಕನಸುಗಳಲ್ಲಿ ಇವರ ಪಾತ್ರ ಬಂದಮೇಲೆ ಉರಿ ಗೌಡ ಹಾಗೂ ನಂಜೇಗೌಡ ಅನ್ನೋ ಹೆಸರು ಸಾಮಾನ್ಯವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಎಲ್ಲಾ ಕ್ಷೇತ್ರದಲ್ಲೂ ದೊಡ್ಡ ಸುದ್ದಿಯಾಗುತ್ತಿದೆ.

ಇತ್ತೀಚಿಗೆ ಉನ್ನತ ಶಿಕ್ಷಣ ಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಹೇಳಿಕೆ ಕೊಡುವಾಗ ‘ ಟಿಪ್ಪು ಸುಲ್ತಾನನನ್ನು ಉರಿ ಗೌಡ ಮತ್ತು ನಂಜೇಗೌಡ ಹೊಡೆದಾಕಿದಂತೆ ನಾವು ಕೂಡ ಹೊಡೆಯಬೇಕು ಎಂದು ಹೇಳಿದ್ದು ಸಿದ್ದು ಅವರನ್ನು ಹೊಡೆದು ಹಾಕಬೇಕು ಅನ್ನೋ ರೀತಿ ಹೇಳಿಕೆ ಕೊಟ್ಟದ್ದು ದೇವರ ವಿವಾದವಾಗಿತ್ತು. ತದನಂತರ ರಾಜಕೀಯವಾಗಿ ಹೊಡೆಯಬೇಕು ಎಂದು ಹೇಳಿ ಸಮಜಾಯಿಸಿ ನೀಡಿ ವಿಷಾದ ವ್ಯಕ್ತಪಡಿಸಿದರು.

ಉರಿ ಗೌಡ ಮತ್ತು ನಂಜೇಗೌಡರ ಯಾರು? : ಉರಿ ಗೌಡ ಮತ್ತು ನಂಜೇಗೌಡ ಇಬ್ಬರು ಚುನಾವಣೆ ಹತ್ತಿ ಬಂದ ಕಾರಣ ರಾಜಕೀಯದ ಕೆಲಸ ಸಚಿವರು ಹಾಗೂ ಪ್ರಮುಖ ವ್ಯಕ್ತಿಗಳು ಸೃಷ್ಟಿಸಿರುವ ಕಾಲ್ಪನಿಕ ವ್ಯಕ್ತಿಗಳು. ಬೆಂಗಳೂರನ್ನು ಕಟ್ಟಿ ಬೆಳೆಸಿದ್ದು ನಾಡಪ್ರಭು ಕೆಂಪೇಗೌಡರು ಅದಕ್ಕೆ ಅವರು ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಿದರು ಹಾಗೂ ರಾಜಶ್ರೀ ಎಂದು ಬಿರುದನ್ನು ರಾಜ್ಯ ಸರ್ಕಾರ ನೀಡಿತು. ಆದರೆ ಹಳೆ ಮೈಸೂರು ಭಾಗದಲ್ಲಿ ಇತ್ತೀಚಿನ ದಿನ ಮುಸ್ಲಿಂ ಸಮುದಾಯವನ್ನು ಮತ್ತು ಟಿಪ್ಪು ಸುಲ್ತಾನನನ್ನು ಖಳನಾಯಕರಾಗಿ ಬಿಂಬಿಸುತ್ತಿದ್ದಾರೆ, ನಾಯಕನಿಲ್ಲದ ಕಾರಣ ಉರಿ ಗೌಡ ಮತ್ತು ನಂಜೇಗೌಡ ಟಿಪ್ಪುವನ್ನು ಕೊಂದರು ಎಂದು ಕಾಲ್ಪನಿಕವಾಗಿ ಕಥೆ ಕಟ್ಟಿದರು.

ಉರಿ ಗೌಡ ಮತ್ತು ನಂಜೇಗೌಡ ಇಬ್ಬರು ಮಳವಳ್ಳಿಯವರು, ಅಂದಿನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಅವರಿಗೆ ಬಲಗೈ ಬಂಟರಾಗಿದ್ದರು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು. ಆದರೆ ಮಹಾರಾಣಿಯವರಿಗೆ ನಿಜವಾಗಿ ಬಂಟರಾಗಿದ್ದವರು ತಿರುಮಲ ರಾವ್ (ತಿರುಮಲ ಅಯ್ಯಂಗಾರ್) ಮತ್ತು ನಾರಾಯಣರಾವ್ ಎಂಬ ಇಬ್ಬರು ಸಹೋದರರು.

ಟಿಪ್ಪು ಸುಲ್ತಾನ ಯುದ್ಧ ಮಾಡುತ್ತಿದ್ದಾಗ ಉರಿ ಗೌಡ ಮತ್ತು ನಂಜೇಗೌಡರ ಸೇನೆಗೆ ತಿಳಿದು ಅವರ ಮೇಲೆ ದಾಳಿ ನಡೆಸಿದರು. ಅದನ್ನು ನೋಡಿ ಹೆದರಿ ಓಡಿ ಹೋದ ಟಿಪ್ಪು ನನ್ನು ಹಿಮ್ಮೆಟ್ಟಿ ಕೊಂದರು ಎಂದು ಕಥೆ ಸೃಷ್ಟಿಸಿದರು. 1790-92 ರ 3ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ತಾನು ಸೋತು ತನ್ನ ಎರಡು ಮಕ್ಕಳನ್ನು ಒತ್ತೆ ಇಡುತ್ತಾನೆ. ಆ ಯುದ್ಧದ ಸಮಯದಲ್ಲಿ ಟಿಪ್ಪು 12 ದಿನಗಳ ಕಾಲ ಬೀಡು ಬಿಟ್ಟಿರುತ್ತಾನೆ, ಆಗಲಾದರೂ ಉರಿ ಗೌಡ ಮತ್ತು ನಂಜೇಗೌಡರ ಸೇನೆಯು ದಾಳಿ ಮಾಡಿ ಕೊಲ್ಲಬಹುದಿತ್ತು ಅಥವಾ ಶ್ರೀರಂಗಪಟ್ಟಣಕ್ಕೆ ಹಿಂದಿರುಗುವಾಗಲಾದರೂ ಹೊಡೆಯಬಹುದಿತ್ತು. ಆದರೆ 4ನೇ ಆಂಗ್ಲೋ ಮೈಸೂರು ಯುದ್ಧವಾಗುವಾಗ ಜ್ಞಾನೋದಯವಾಯಿತೇನು?.

ನಾಲ್ಕನೇ ಆಂಗ್ಲೋ ಮೈಸೂರು ಮಹಾಯುದ್ಧ ಮೈಸೂರಿನಲ್ಲಿ ನೆಡೆದಾಗ ಬ್ರಿಟೀಷರು ತಮ್ಮ ಆಸ್ತಿಗಳೆನ್ನಲ್ಲಾ ಹೂಡಿಕೆ ಮಾಡಿದಲ್ಲದೇ, ಲಂಡನ್ನಿನಿಂದ ಸಾಲ ತಂದಿದ್ದರು. ಅಂದಿನ ಇಡೀ ವಿಶ್ವ (ಚೈನಾ, ಯುರೋಪ್ ಮತ್ತು ಭಾರತ) ಮತ್ತು ಭಾರತದ ಸಂಸ್ಥಾನಗಳು ಈ ಯುದ್ದದ ಮೇಲೆ ದೃಷ್ಠಿ ಇಟ್ಟಿದ್ದರು, ಹೇಗೆ ವಿಶ್ವಕಪ್ ಫೈನಲ್ ನೋಡುವ ಹಾಗೆ ನೋಡುತ್ತಿದ್ದರು. ಒಂದೊಮ್ಮೆ ಬ್ರಿಟಿಷರು ಸೋತ್ತಿದಿದ್ದರೆ ಇಂಗ್ಲೆಂಡ್ ದಿವಾಳಿಯಾಗಿರುತ್ತಿತ್ತು ಹಾಗೂ ಸ್ವಾತಂತ್ರ್ಯ ಆಗಲೇ ದೊರಕುತ್ತಿತ್ತು. 40 ಸಾವಿರ ಸೈನಿಕರನ್ನು ಸೋಲಿಸಲು ಬ್ರಿಟಿಷರು 2 ಲಕ್ಷ ಸೈನಿಕರನ್ನು ಕರೆತರಲಾಯಿತು. ಆಗ ಅಸವರು ಮಾಡು ಇಲ್ಲ ಮಡಿ ಎಂಬ ಪರಿಸ್ಥಿತಿ ಒದಗಿತ್ತು. ಭಾರತ ದೇಶದ ಯಾವ ಸಂಸ್ಥಾನಕ್ಕೂ ತಲೆ ಕೆಡಿಸಿಕೊಳ್ಳದ ಹಾಗೂ ಹೆದರದ ಅವರು ಟಿಪ್ಪು ಮತ್ತು ತನ್ನ ಸೈನ್ಯಕ್ಕೆ ಹೆದರಿದ್ದರು.

ಬ್ರಿಟಿಷರೊಬ್ಬರ ಕೈಯಲ್ಲಿ ಸಾಧ್ಯವಾಗದ ಕಾರಣ ಹೈದರಾಬಾದಿನ ನಿಜಾಮ, ಮರಾಠ ಸಂಸ್ಥಾನ, ಕರ್ನಾಟಿಕ್ ನವಾಬರ ಬೆಂಬಲವನ್ನು ಪಡೆಯುವುದರ ಜೊತೆಗೆ ಬೆನ್ನಿಗೆ ಚೂರಿ ಹಾಕೋ ಟಿಪ್ಪು ಆತ್ಮೀಯರಾದ ಪೂರ್ಣಯ್ಯ ಮತ್ತು ಮೀರ್ ಸಾಧಕ್ ಎಂಬುವರ ಸಹಾಯ ಪಡೆದು ನೇರ ನೇರ ಯುದ್ಧ ಮಾಡಲಾಗದೆ ನರಿಯ ಹಾಗೆ ಮೋಸದಿಂದ ತುಪಾಕಿನಿಂದ ಬುಲೆಟ್ ಹಾರಿಸಿ ಸಾಯಿಸಲಾಯಿತು. ಟಿಪ್ಪು ಸುಲ್ತಾನನ ಹೆಣವನ್ನು ಅಂದಿನ ಬ್ರಿಟಿಷ್ ಜನರಲ್ ಹ್ಯಾರಿಸ್ ಗೆ ತೋರಿಸಿದಾಗ “Today we won India, Now India is ours” ಎಂದು ಪೋಷಿಸುತ್ತಾನೆ. ಈ ಘೋಷಣೆಯ ಅರ್ಥ ಭಾರತದ ಎಲ್ಲಾ ರಾಜ್ಯಗಳ ಸಂಸ್ಥಾನವು ಬ್ರಿಟಿಷರ ಸ್ವಾಧೀನದಲ್ಲಿತ್ತು. ಆದರೆ ಮೈಸೂರು 1799ರ ನಂತರ ತಮ್ಮದಾಗಿಸಿಕೊಂಡರು, ಅಲ್ಲಿಯವರೆಗೆ ಒಡೆಯರು, ಹೈದರಲ್ಲಿ ಹಾಗೂ ಟಿಪ್ಪು ಸುಸೂತ್ರವಾಗಿ ಆಳುತ್ತಿದ್ದರು. ಟಿಪ್ಪು ಸುಲ್ತಾನನ ಆಡಳಿತಾವಧಿಯಲ್ಲಿ ಶಾನುಭೋಗರ ಬದಲಿಗೆ ಒಕ್ಕಲಿಗ ಸಮುದಾಯದ ಜನರನ್ನು ಊರಿನ ಪಟೇಲರನ್ನಾಗಿ ನೇಮಿಸಿ ಗ್ರಾಮವನ್ನು ನೋಡಿಕೊಳ್ಳುವ ಅಧಿಕಾರವನ್ನು ನೀಡಿದ.

ಟಿಪ್ಪು ಸುಲ್ತಾನನ ಬಗ್ಗೆ ಇತಿಹಾಸವನ್ನು ಬ್ರಿಟಿಷರು, ಪರ್ಷಿಯನ್ನಿನ ಕಿರ್ಮಾನಿ, 4ನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಭಾಗವಹಿಸಿದ್ದ ಕರ್ನಲ್ ಮಾರ್ಕ್ ವಿಲ್ಕ್ಸ್ 1810ರಲ್ಲಿ ‘History of Mysore (ಮೈಸೂರಿನ ಇತಿಹಾಸ)’ ಎಂಬ ಶೀರ್ಷಿಕೆಯಡಿ ಟಿಪ್ಪು ಜೊತೆ ಯುದ್ಧ ಮಾಡಿದ ಕುರಿತು ತನ್ನ ಅನುಭವವನ್ನು ಹಂಚಿಕೊಂಡ, ಅದೇ ಯುದ್ಧದಲ್ಲಿ ಭಾಗವಹಿಸಿದ್ದ ಬೇಸನ್ ಮುಂತಾದ ಪರಕೀಯರು ಬರೆದಿರುತ್ತಾರೆ. ಇದನ್ನು ಓದಿ 150 ವರ್ಷಗಳ ನಂತರ ಹಯವದನ ರಾವ್ ಎಂಬುವರು ಮೈಸೂರು ಗೆಜೆಟ್ಟಿನಲ್ಲಿ ಬರೆಯುತ್ತಾರೆ. ಹೀಗೆ ಹಲವಾರು ಬ್ರಿಟಿಷರು ಪರಿಶಿಯನ್ನರು ಹಾಗೂ ಭಾರತದ ಇತಿಹಾಸಕಾರರು ಬರೆದ ಯಾವುದೇ ಪುಸ್ತಕದಲ್ಲಿ ಉರಿ ಗೌಡ ಹಾಗೂ ನಂಜೇಗೌಡರು ಇದ್ದರೆ ಎಂಬುದು ಆಗಲಿ ಅಥವಾ ಟಿಪ್ಪು ಸುಲ್ತಾನನನ್ನು ಕೊಂಡರು ಎಂಬ ಉಲ್ಲೇಖ ಎಲ್ಲೂ ಇಲ್ಲ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಉರಿ ಗೌಡ ಮತ್ತು ನಂಜೇಗೌಡರ ಅಸ್ತಿತ್ವವನ್ನು 1994ರಲ್ಲಿ ದೇಜಗೌ ಅವರ ಸಂಪಾದಕೀಯತ್ವದಲ್ಲಿ ಪ್ರಕಟವಾಗಿರುವ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಾಧ್ಯಮದ ಮುಂದೆ ಹೇಳಿದರು. ಅದು ಕಾದಂಬರಿಯೇ ಹೊರತು ಗೆಜೆಟ್ ಅಲ್ಲ, ಕಾದಂಬರಿ ಪುಸ್ತಕವು ಕಾಲ್ಪನಿಕವಾಗಿಯೇ ಇರುತ್ತದೆ. ಅದನ್ನು ನಂಬಬೇಕು, ಅದೇ ಸರ್ವಶ್ರೇಷ್ಠವೆಂದು ಹೇಳುವುದು ಸಲ್ಲದ ಹಾಗೂ ನಂಬಲಾರದ ಮಾತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು