News Karnataka Kannada
Sunday, April 28 2024
ಲೇಖನ

ನಿಜವಾಗಿಯೂ ಪ್ರೇಮ ಅಂದ್ರೆ ಏನು ಗೊತ್ತಾ?

ಪಾರ್ಕ್, ಹೋಟೆಲ್, ಮಾಲ್ ಹೀಗೆ ಎಲ್ಲೆಂದರಲ್ಲಿ ಕೈಕೈ ಹಿಡಿದುಕೊಂಡು ಓಡಾಡುವುದು, ಹರಟೆ ಹೊಡೆಯುವುದು, ಜತೆಜತೆಯಾಗಿ ಪಾರ್ಟಿ ಮಾಡುವುದು ಹೀಗೆ ಎಲ್ಲವನ್ನು ನೋಡಿದ ಮೇಲೆ ಇದೇನಾ ಪ್ರೇಮ? ಇವರೇನಾ ಪ್ರೇಮಿಗಳು? ಹೀಗೊಂದು ಪ್ರಶ್ನೆಗಳು ನಮ್ಮ ನಿಮ್ಮ ಮನದಲ್ಲಿ ಮೂಡಿಯೇ ಮೂಡುತ್ತದೆ.
Photo Credit : Pixabay

ಪಾರ್ಕ್, ಹೋಟೆಲ್, ಮಾಲ್ ಹೀಗೆ ಎಲ್ಲೆಂದರಲ್ಲಿ ಕೈಕೈ ಹಿಡಿದುಕೊಂಡು ಓಡಾಡುವುದು, ಹರಟೆ ಹೊಡೆಯುವುದು, ಜತೆಜತೆಯಾಗಿ ಪಾರ್ಟಿ ಮಾಡುವುದು ಹೀಗೆ ಎಲ್ಲವನ್ನು ನೋಡಿದ ಮೇಲೆ ಇದೇನಾ ಪ್ರೇಮ? ಇವರೇನಾ ಪ್ರೇಮಿಗಳು? ಹೀಗೊಂದು ಪ್ರಶ್ನೆಗಳು ನಮ್ಮ ನಿಮ್ಮ ಮನದಲ್ಲಿ ಮೂಡಿಯೇ ಮೂಡುತ್ತದೆ.

ಬದಲಾದ ಕಾಲಘಟ್ಟದಲ್ಲಿ ಪ್ರೀತಿ, ಪ್ರೇಮದ ಹೆಸರಲ್ಲಿ ನಡೆಯುತ್ತಿರುವ ವಂಚನೆಗಳನ್ನು ನೋಡಿದ ಮೇಲೆ ಪ್ರೇಮ ಅಂದ್ರೆ ಏನು? ಪ್ರೇಮಿಗಳು ಅಂದ್ರೆ ಯಾರು? ಎಂಬ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳುತ್ತವೆ. ಆದರೆ ನಿಜವಾದ ಪ್ರೇಮದ ಬಗ್ಗೆ ಹೇಳಬೇಕೆಂದರೆ ಅದು ಕಲ್ಪನೆಗೆ ನಿಲುಕದ್ದಾಗಿದ್ದು, ಹೃದಯಕ್ಕೆ ಸಂಬಂಧಿಸಿದ್ದಾಗಿದೆ.

ನಿಜ ಹೇಳಬೇಕೆಂದರ ಪ್ರೇಮವನ್ನು ವರ್ಣಿಸಲು ಪದವೇ ಇಲ್ಲ. ಈಗಾಗಲೇ ಕೋಟ್ಯಂತರ ಮಂದಿ ತಮ್ಮದೇ ಕಲ್ಪನೆಯಲ್ಲಿ ಪ್ರೇಮವನ್ನು ತೆರೆದಿಟ್ಟಿದ್ದಾರೆ. ಕೆಲವರು ಪ್ರೇಮ ಅಂದ್ರೆ ಅದೊಂದು ಸೂಕ್ಷ್ಮ ಸಂವೇದಿ. ಅದಕ್ಕೆ ಆಳ, ಗಾತ್ರ ಯಾವುದೂ ಇಲ್ಲ ಎಂದರೆ, ಮತ್ತೆ ಕೆಲವರು ಪ್ರೇಮ ಹೃದಯಾಂತರಾಳದಲ್ಲಿ ಅಂಕುರಿಸಿತೆಂದರೆ ಸಾಕು ಅದು ಜಾತಿಯ ಹಂಗು, ಬಡತನ, ವಯಸ್ಸು, ಸ್ಥಾನಮಾನ ಎಲ್ಲವನ್ನೂ ಧಿಕ್ಕರಿಸಿ ಬೆಳೆವ ವಿಸ್ಮಯ ಎಂದಿದ್ದಾರೆ ಅಷ್ಟೇ ಅಲ್ಲದೆ ವರ್ಣಿಸಿದಷ್ಟೂ ಮುಗಿಯದ ಸುಂದರ ಅದ್ಭುತ ಲೋಕವೆಂದು ಬಣ್ಣಿಸಿದ್ದಾರೆ.

ಪ್ರೇಮ ಅಂದ್ರೆ ಪ್ರಣಯ, ದೇಹ ಸಂಬಂಧ ಅರ್ಥಾತ್ ಕಾಮವನ್ನು ತ್ಯಜಿಸಿದ ಪ್ರೀತಿ, ಕರುಣೆ, ಅನುಕಂಪ ತುಂಬಿದ ಸಂಬಂಧ. ಪ್ರೀತಿ ಭವಸಾಗರ ದಾಟಿಸುವ ಹಡಗಾದರೆ ಪ್ರೇಮಿಗಳು ನಾವಿಕರಾಗಬೇಕಷ್ಟೆ. ಪ್ರೀತಿಯ ಹುಟ್ಟನ್ನು ಹುಡುಕಲು ಅದಕ್ಕೆ ಮೂಲವೂ ಇಲ್ಲ ಹೇಳಿಕೊಡೋದಕ್ಕೆ ಗುರುವೂ ಬೇಕಾಗಿಲ್ಲ. ನಿಷ್ಕಲ್ಮಶ ಮನಸ್ಸು, ನಿಷ್ಠೆ, ನಂಬಿಕೆ, ಪ್ರಾಮಾಣಿಕತೆ.

ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಪ್ರೇಮ ಕಥೆಗಳು ನೂರಾರು ಸಿಗುತ್ತವೆ. ಪ್ರೇಮಕ್ಕೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು ಸಾಕ್ಷಿಯಾಗಿ ನಿಲ್ಲುತ್ತಾರೆ. ಇಷ್ಟಕ್ಕೂ ಪ್ರೇಮ ಎನ್ನುವುದು ತೋರಿಕೆಯಲ್ಲ ಅದು ಎರಡು ಹೃದಯಗಳ ವಿಷಯ.. ಪ್ರೇಮ ಗಟ್ಟಿಯಾಗಬೇಕಾದರೆ ಪ್ರೇಮಿಗಳಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಅಗತ್ಯ. ಅದೆರಡು ಇಲ್ಲದೆ ಹೋದರೆ ಪ್ರೀತಿಸೋಕೆ ಆಗಲ್ಲ.

ಒಂದು ವೇಳೆ ಪ್ರೀತಿಸಿದರೂ ಹೆಚ್ಚು ದಿನ ಬಾಳುವುದಿಲ್ಲ. ಹಾಗೆ ಸುಮ್ಮನೆ ನಮ್ಮ-ನಿಮ್ಮ ಸುತ್ತಮುತ್ತ ದೃಷ್ಠಿ ಹಾಯಿಸಿ ನೋಡಿದರೆ ಗೆಳೆಯ-ಗೆಳೆಯರ ಪ್ರೀತಿ ಪ್ರೇಮಗಳೆಷ್ಟು ಯಶಸ್ವಿಯಾಗಿವೆ? ಇನ್ನೆಷ್ಟು ಮುರಿದುಬಿದ್ದಿವೆ ಎಂಬುದರ ಲೆಕ್ಕ ಸಿಗುತ್ತದೆ. ಜತೆಗೆ ಪ್ರೀತಿಸಿ, ಎಲ್ಲ ಸಮಸ್ಯೆಯನ್ನು ಎದುರಿಸಿ ಮದುವೆಯಾದವರೆಲ್ಲರೂ ಜತೆಯಾಗಿ, ಸುಖವಾಗಿದ್ದಾರಾ? ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಪ್ರೀತಿಯನ್ನು ಅಮರಾಗಿಸುವುದು ಪ್ರತಿ ಪ್ರೇಮಿಗಳಲ್ಲಿದೆ.

ಪ್ರೀತಿಸೋದು ಸುಲಭ ಆದರೆ ಹೊಂದಿ ಕೊಂಡು ಬಾಳ್ವೆ ಮಾಡಿ ಅದಕ್ಕೊಂದು ನ್ಯಾಯ ಒದಗಿಸೋದು ಕಷ್ಟವೇ.. ಇತರರಿಗೆ ಮಾದರಿಯಾಗಿ ಬದುಕೋದು ಪ್ರೇಮಿಗಳು ಪ್ರೇಮಕ್ಕೆ ಕೊಡುವ ದೊಡ್ಡ ಗೌರವವಾಗುತ್ತದೆ. ಅದನ್ನು ಪ್ರತಿಯೊಬ್ಬ ಪ್ರೇಮಿಯೂ ಮಾಡಿ ಎನ್ನುವುದೇ ನಮ್ಮ ಹಾರೈಕೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು