News Karnataka Kannada
Friday, May 10 2024
ವಿಶೇಷ

ದೇಶದ ಮಾಜಿ ಪ್ರಧಾನಿ ʼಧರ್ಮಪುತ್ರʼ ಅಜಾತಶತ್ರು ವಾಜಪೇಯಿ ಜನ್ಮದಿನ

Vajipai
Photo Credit : News Kannada

ದೆಹಲಿ: ಇಂದು ಭಾರತದ ಮಾಜಿ ಪ್ರಧಾನಿ ಹಾಗೂ ಬಿಜೆಪಿ ನಾಯಕ ಅಜಾತಶತ್ರು ಅಟಲ್​​​ ಬಿಹಾರಿ ವಾಜಪೇಯಿ ಅವರ 99ನೇ ಜನ್ಮದಿನವನ್ನು ಸ್ಮರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಭಾರತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ‘ಸದೈವ್ ಅಟಲ್’ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ರಾಷ್ಟ್ರ ಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸ್ಮಾರಕದಲ್ಲಿ ಉಪಸ್ಥಿತರಿದ್ದರು. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಮುಂತಾದ ನಾಯಕರು ಈ ಸಂದರ್ಭದಲ್ಲಿ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

ಮಹಾನ್ ವಾಗ್ಮಿ, ವಾಜಪೇಯಿ ಅವರು ಭಾರತೀಯ ಜನಸಂಘ ಮತ್ತು ನಂತರ ಭಾರತೀಯ ಜನತಾ ಪಕ್ಷದ ಜನಪ್ರಿಯ ಮುಖವಾಗಿದ್ದರು. ಅವರು 1999 ರಿಂದ 2004 ರವರೆಗೆ ಯಶಸ್ವಿ ಸಮ್ಮಿಶ್ರ ಸರ್ಕಾರವನ್ನು ನಡೆಸುತ್ತಿದ್ದಾಗ ಬಿಜೆಪಿಯು ಅನೇಕ ಪಕ್ಷಗಳಿಂದ ಬೆಂಬಲವನ್ನು ಸೆಳೆಯಲು ಸೈದ್ಧಾಂತಿಕ ಗಡಿಗಳನ್ನು ಮೀರಿ ಅವರ ಸ್ವೀಕಾರಾರ್ಹತೆಯು ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ವಾಜಪೇಯಿಯವರ ವ್ಯಕ್ತಿತ್ವ, ಪ್ರೀತಿಯ ಸ್ವಭಾವ, ಹಾಸ್ಯಪ್ರಜ್ಞೆಗೆ ಹೆಸರುವಾಸಿಯಾದವರು. ಅಜಾತ ಶತ್ರು ಎಂದೇ ಖ್ಯಾತರಾದವರು. ವಾಜಪೇಯಿಯವರ ಸ್ಮರಣಾರ್ಥ ಸದೈವ್ ಅಟಲ್ ಸ್ಮಾರಕವನ್ನು ನಿರ್ಮಿಸಲಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿಯವರು ಆಗಸ್ಟ್ 16, 2018 ರಂದು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ನಿಧನರಾದರು.

ವಾಜಪೇಯಿ ಅವರಿಗೆ 2015 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಲಾಯಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಪ್ರಸಿದ್ದ ಕಥೆಗಳಿವೆ. ತಮ್ಮ ಸೋಲಿನಲ್ಲೂ ನಕ್ಕು ಸೋಲೇ ಗೆಲುವಿನ ಸೋಪಾನ ಎಂಬ ಉಪಖ್ಯಾನವನ್ನು ನಿಜಗೊಳಿಸಿದ ಅಜಾತ ಶತ್ರು ಇವರು.
ಚುನಾವಣೆಯಲ್ಲಿ ಅಟಲ್ ಸೋತರೂ ಸೋತ ದುಃಖ ಅವರಲ್ಲಿ ಒಂದಿನಿತೂ ಇಲ್ಲದಂತೆ ಬಾಯ್ತುಂಬಾ ನಕ್ಕರು. ಈ ನಗುವಿಗೆ ಕಾರಣವೇನು ಎಂದು ಅಟಲ್ ಅವರನ್ನು ಪ್ರಶ್ನಿಸಿದಾಗ, ನನ್ನ ಸೋಲಿಗೆ ನಾನು ಪಶ್ಚತ್ತಾಪ ಪಡುತ್ತಿಲ್ಲ. ಏಕೆಂದರೆ ತಾಯಿ-ಮಗನ ಬಂಡಾಯವು ಬೀದಿಗೆ ಬರುವುದನ್ನು ತಪ್ಪಿಸಿದ್ದೇನೆ. ಗ್ವಾಲಿಯರ್‌ನಿಂದ ನಾನು ಸ್ಪರ್ಧಿಸದೇ ಇದ್ದಿದ್ದರೆ ಮಾಧವರಾವ್ ಸಿಂಧಿಯಾ ವಿರುದ್ಧ ಅವರ ತಾಯಿ ರಾಜಮಾತೆ ಸ್ಪರ್ಧಿಸುತ್ತಿದ್ದರು ಹಾಗಾಗುವುದು ನನಗೆ ಇಷ್ಟವಿರಲಿಲ್ಲ ಎಂದು ಅಟಲ್ ತಿಳಿಸಿದರು.

ರಾಜಮಾತೆಯವರು ಅಟಲ್ ಅವರನ್ನು ಧರ್ಮಪುತ್ರ ಎಂದು ಪರಿಗಣಿಸಿದ್ದಾರೆ. 2005 ರ ಗ್ವಾಲಿಯರ್ ಸೋಲಿನ ಕುರಿತು ಮತ್ತೊಮ್ಮೆ ಪ್ರಸ್ತಾಪಿಸಿದ ಅಟಲ್ ಜೀಯವರು, ಗ್ವಾಲಿಯರ್‌ನ ನನ್ನ ಸೋಲಿನ ಹಿಂದೆ ಇತಿಹಾಸವೊಂದು ಅಡಗಿದೆ. ಈ ಇತಿಹಾಸ ನನ್ನ ಜೊತೆಗೇ ನಿರ್ಗಮಿಸುತ್ತದೆ ಎಂಬುದಾಗಿ ಸಾಹಿತ್ಯ ಸಭೆಯಲ್ಲಿ ಒಂದೊಮ್ಮೆ ತಿಳಿಸಿದ್ದರು.

ವಾಸ್ತವವಾಗಿ, ವಿಜಯ ರಾಜೇ ಸಿಂಧಿಯಾ, ಗ್ವಾಲಿಯರ್‌ನ ಸಿಂಧಿಯಾ ಘರಾನಾದ ರಾಜಮಾತೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಸಂಘದ ಕಾಲದಿಂದಲೂ ಜೊತೆಯಾಗಿ ಕೆಲಸ ಮಾಡಿದವರು. ವಿಜಯ ರಾಜೇ ಸಿಂಧಿಯಾ ಅಟಲ್‌ಜಿಯನ್ನು ತನ್ನ ಧರ್ಮ ಪುತ್ರನೆಂದೇ ಉಲ್ಲೇಖಿಸಿದ್ದಾರೆ. ಈ ಕಾರಣದಿಂದಾಗಿ ವಾಜಪೇಯಿ ರಾಜಮಾತೆ ಹಾಗೂ ಮಾಧವರಾವ್ ಸಿಂಧಿಯಾ ಅವರ ನಡುವಿನ ಜಗಳ ನನಗೆ ಇಷ್ಟವಿಲ್ಲ ಎಂದು ತಿಳಿಸಿದ್ದರು ಎಂಬ ಮಾತನ್ನು ಪುಷ್ಟೀಕರಿಸುತ್ತದೆ.

ಇನ್ನು ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ, ಅಟಲ್ ಬಿಹಾರಿ ವಾಜಪೇಯಿ ಮದುವೆಯಾಗಿಲ್ಲ ಎಂಬುದು ಬಹುತೇಕರಿಗೆ ಗೊತ್ತು. ಆದರೆ ಶ್ರೀಮತಿ ಕೌಲ್ ಅವರೊಂದಿಗೆ ಪ್ರಧಾನಿ ನಿವಾಸದಲ್ಲಿ ವಾಸಿಸುತ್ತಿದ್ದರು, ಆದರೆ ಅವರ ಪತ್ನಿಯಾಗಿ ಅಲ್ಲ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಈ ಪ್ರೇಮಕಥೆಗೆ ಯಾವ ಹೆಸರೂ ಸಿಗಲಿಲ್ಲ ಎನ್ನಲಾಗಿದೆ. 1978ರಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾಗಿದ್ದರು. ಚೀನಾ ಮತ್ತು ಪಾಕಿಸ್ತಾನದಿಂದ ವಾಪಸಾದ ಬಳಿಕ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು.

ಕೌಲ್ ಬಗ್ಗೆ ಕೇಳಿದ ಪ್ರಶ್ನೆ ಕೇಳಿ ಎಲ್ಲರೂ ಸುಮ್ಮನಾದರು. ಎಲ್ಲರ ದೃಷ್ಟಿ ಈಗ ಅಟಲ್ ಬಿಹಾರಿ ವಾಜಪೇಯಿ ಅವರ ಮೇಲೆ ನೆಟ್ಟಿತ್ತು. ವಾಜಪೇಯಿ ಜೀ, ಪಾಕಿಸ್ತಾನ, ಕಾಶ್ಮೀರ, ಚೀನಾದ ಮಾತು ಬಿಟ್ಟು ಮಿಸೆಸ್ ಕೌಲ್ ವಿಷಯ ಏನಾಗಿದೆ ಹೇಳಿ ಎಂದು ಪ್ರಶ್ನೆ ಕೇಳಿದ್ದರು. ಸ್ವಲ್ಪ ಸಮಯ ಮೌನವಾಗಿದ್ದ ಅಟಲ್ ಬಿಹಾರಿ, ‘ಇದು ಕಾಶ್ಮೀರದಂತಹ ಸಮಸ್ಯೆ’ ಎಂದು ನಗುತ್ತಲೇ ಉತ್ತರಿಸಿದ್ದರು.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು