News Karnataka Kannada
Monday, May 13 2024
ವಿಶೇಷ

ಇಂದು ಪ್ರಪಂಚದಾದ್ಯಂತದ ಬಕ್ರೀದ್​ ಹಬ್ಬದ ಸಂಭ್ರಮ

eid ul adha
Photo Credit : Pexels

ಇಂದು ಪ್ರಪಂಚದಾದ್ಯಂತದ ಬಕ್ರೀದ್​ ಹಬ್ಬದ ಸಂಭ್ರಮ. ಬಕ್ರೀದ್ ಹಬ್ಬವನ್ನ ತ್ಯಾಗದ ಹಬ್ಬ ಎಂದು ಕರೆಯಲಾಗುತ್ತದೆ. ಅಲ್ಲದೇ ಇದಕ್ಕೆ ಕುರ್ಬಾನ್ ಬಯಾರಾಮಿ ಎಂಬ ಮತ್ತೊಂದು ಹೆಸರು ಸಹ ಇದ್ದು, ರಂಜಾನ್​ ನಂತರ ಈ ಹಬ್ಬವನ್ನ ಆಚರಿಸಲಾಗುತ್ತದೆ. ಮುಸ್ಲಿಂ ಬಾಂಧವರಲ್ಲಿ ಈ ಹಬ್ಬಕ್ಕೆ ಬಹಳ ಮಹತ್ವವಿದೆ.

ಇಸ್ಲಾಮಿಕ್ ಅಥವಾ ಚಂದ್ರನ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ಜುಲ್ ಹಿಜ್ಜಾ/ದುಲ್ ಅಲ್-ಹಿಜ್ಜಾ ತಿಂಗಳಲ್ಲಿ ಈ ಹಬ್ಬವನ್ನ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಪ್ರವಾದಿ ಇಬ್ರಾಹಿಂ ಅವರ ಅಲ್ಲಾನಿಗೆ ತನ್ನದೆಲ್ಲವನ್ನ ಸಮರ್ಪಣೆ ಮಾಡಿಕೊಂಡಿದ್ದರು ಎನ್ನುವ ನಂಬಿಕೆ ಇದೆ. ಈ ದಿನ, ಈದ್ಗಾಗಳಲ್ಲಿ ಮತ್ತು ಮಸೀದಿಗಳಲ್ಲಿ ಜಮಾತ್ ಜೊತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಕ್ರೀದ್ ದಿನದಂದು ಬೆಳಗ್ಗೆ ನಮಾಝ್ ಅರ್ಪಿಸುವುದರೊಂದಿಗೆ ಆಚರಣೆ ಪ್ರಾರಂಭವಾಗುತ್ತದೆ. ಈ ಸಂತೋಷದ ಸಂದರ್ಭಗಳಲ್ಲಿ ಬಡವರಿಗೆ ಸಹಾಯ ಮಾಡಬೇಕೆಂದು ಇಸ್ಲಾಂನಲ್ಲಿ ಹೇಳಲಾಗಿದೆ.

ದುಲ್ ಅಜ್-ಹಿಜ್ಜಾದ ಹತ್ತನೇ ದಿನದಂದು, ಪ್ರಪಂಚದಾದ್ಯಂತದ ಮುಸ್ಲಿಮರು ಈದ್-ಉಲ್-ಅಧಾವನ್ನು ಒಂದು ಪ್ರಾಣಿಯನ್ನು .ಸಾಮಾನ್ಯವಾಗಿ ಸಾಮಾನ್ಯವಾಗಿ ಕುರಿ, ಮೇಕೆಯನ್ನ ದೇವರಿಗೆ ಸ್ಮರಣಾರ್ಥ ಬಲಿ ಕೊಡುವ ಮೂಲಕ ಆಚರಿಸಲಾಗುತ್ತದೆ.  ಈ ಹಬ್ಬವನ್ನ ಪ್ರಪಂಚದಾದ್ಯಂತ ವಿವಿಧ ಸಮಯದಲ್ಲಿ ಆಚರಿಸಲಾಗುತ್ತದೆ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ನಮಾಜ್​ ಸಮಯದ ವಿಭಿನ್ನವಾಗಿದೆ. ಕ್ರೀದ್‌ ಹಬ್ಬವು ಮುಸ್ಲಿಂ ಸಮುದಾಯದವರ ಪವಿತ್ರ ಹಬ್ಬವಾಗಿದ್ದು, ಇದು ಇಬ್ರಾಹಿಂನ ತ್ಯಾಗವನ್ನು ಮತ್ತು ಭಕ್ತರ ಮೇಲೆ ಅಲ್ಲಾಹುವಿಗಿದ್ದ ಭಕ್ತಿಯನ್ನು ನೆನೆಯುವ ದಿನವಾಗಿದೆ.

ಬಕ್ರೀದ್ ಹಬ್ಬ ಎಂದರೆ ಹಜ್ ಯಾತ್ರೆಯ ಸಂಭ್ರಮ. ಈ ಹಬ್ಬದ ಶುಭ ಸಂದರ್ಭದಲ್ಲಿಯೇ ಹಜ್ ಯಾತ್ರೆ ಭಕ್ತಿ ವೈಭವದಿಂಧ ನಡೆಯುತ್ತದೆ. ಆರೋಗ್ಯ ಹಾಗೂ ಆರ್ಥಿಕವಾಗಿ ಯೋಗ್ಯನಾಗಿರುವ ವ್ಯಕ್ತಿ ಜೀವನದಲ್ಲೊಮ್ಮೆ ಹಜ್ಜ್ ಯಾತ್ರೆ ಕೈಗೊಳ್ಳಬೇಕು. ವಿಶ್ವದೆಲ್ಲೆಡೆಯಿಂದ ಲಕ್ಷೋಪಲಕ್ಷ ಮುಸ್ಲಿಮರು ವರ್ಷಕ್ಕೊಮ್ಮೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮೆಕ್ಕಾ ನಗರದಲ್ಲಿ ಹೇಗೆ ಒಟ್ಟುಗೂಡುತ್ತಾರೆ, ಬಡವ, ಬಲ್ಲಿದ, ರಾಜ, ಮಂತ್ರಿ, ಸಚಿವ ಎಂಬ ಯಾವ ಬೇಧವೂ ಅಲ್ಲಿಲ್ಲ, ಅಲ್ಲಿ ಕೇವಲ ಎರಡು ತುಂಡು ಶುಭ್ರವಾದ ಶ್ವೇತ ಬಟ್ಟೆ (ಪವಿತ್ರ ಎಹರಾಮ್) ಧರಿಸಿ ಹಜ್ ಧಾರ್ಮಿಕ ವಿಧಾನದಲ್ಲಿ ಪಾಲ್ಗೊಳ್ಳುತ್ತಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು