ಮಹಿಳೆ ಒಬ್ಬಳು ತನ್ನ ಸೀಮಂತ ಶಾಸ್ತ್ರಕ್ಕೆ ಡ್ರೈ ಫ್ರೂಟ್ಸ್ಗಳಿಂದ ತಯಾರಿಸಿದ ಆಭರಣ ತೊಟ್ಟು ವಿಶೇಷ ರೀತಿಯಲ್ಲಿ ರೆಡಿ ಆದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗರ್ಭಿಣಿಯವಿಯೋಲೆ, ಸೊಂಟದ ಡಾಬು, ಸರ, ಕೈ ಪಟ್ಟಿ ಎಲ್ಲದರಲ್ಲೂ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಗೂ ಪಿಸ್ತಾಗಳನ್ನು ಕಾಣಬಹುದು.
ಈ ವಿಡಿಯೊವನ್ನು @vasudhaa_makeover ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದೀಗ ಈ ವಿಡಿಯೋಗೆ ಭಾರೀ ಕಮೆಂಟ್ ಗಳು ಬರ್ತಾ ಇದೆ.