News Karnataka Kannada
Monday, May 06 2024
ವಿಶೇಷ

ಇಂದು ʼನೈಟಿಂಗೇಲ್ ಆಫ್ ಇಂಡಿಯಾʼ ಲತಾ ಮಂಗೇಶ್ಕರ್ ಅವರ ಜನ್ಮದಿನ

Lata Mangeshkar
Photo Credit : News Kannada

ಇಂದು ʼನೈಟಿಂಗೇಲ್ ಆಫ್ ಇಂಡಿಯಾʼ ಲತಾ ಮಂಗೇಶ್ಕರ್ ಅವರ ಜನ್ಮದಿನ(ಸೆ.28). ಲತಾ ಮಂಗೇಶ್ಕರ್ ಅವರು 2022ರಲ್ಲಿ ನಮ್ಮನ್ನು ಅಗಲಿದರು. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.  ಅಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಗಾಯಕಿ ಲತಾ ಮಂಗೇಶ್ಕರ್. ‘ನೈಟಿಂಗೇಲ್ ಆಫ್ ಇಂಡಿಯಾ’, ‘ವಾಯ್ಸ್ ಆಫ್ ದಿ ಮಿಲ್ಲೇನಿಯಂ’, ‘ಕ್ವೀನ್ ಆಫ್ ಮೆಲೋಡಿ’ ಅಂತೆಲ್ಲಾ ಕರೆಯಿಸಿಕೊಂಡವರು ಲತಾ ಮಂಗೇಶ್ಕರ್.

36ಕ್ಕೂ ಅಧಿಕ ಭಾಷೆಗಳಲ್ಲಿ ಹಾಡಿರುವ ಖ್ಯಾತಿ ಲತಾ ಮಂಗೇಶ್ಕರ್ ಅವರದ್ದು. 30 ಸಾವಿರಕ್ಕೂ ಅಧಿಕ ಹಾಡುಗಳಿಗೆ ದನಿಯಾಗಿರುವ ಲತಾ ಮಂಗೇಶ್ಕರ್ ತಮ್ಮ 13ನೇ ವಯಸ್ಸಿಗೆ ಸಿನಿಮಾಗಳಲ್ಲಿ ಹಾಡಲು ಶುರು ಮಾಡಿದರು. ಲತಾ ಮಂಗೇಶ್ಕರ್ ಅವರು ಸಿನಿಮಾಗಾಗಿ ಹಾಡಿದ ಮೊದಲ ಸಾಂಗ್ ‘ನಾಚು ಯಾ..’. ಮರಾಠಿ ಸಿನಿಮಾ ‘ಕಿತಿ ಹಾಸಲ್’ ಚಿತ್ರದ ಹಾಡು ಇದು.

ತಾವೇ ಹಾಡಿದ ಹಾಡನ್ನು ಲತಾ ಅವರು ಎಂದಿಗೂ ಕೇಳುವುದಿಲ್ಲ. ಇದಕ್ಕೆ ಕಾರಣವೂ ಇದೆ. “ನಾನು ಹಾಡಿದ ಹಾಡನ್ನು ಕೇಳಿದರೆ ನನಗೆ ಸಾಕಷ್ಟು ತಪ್ಪುಗಳು ಕಾಣಿಸುತ್ತವೆ” ಎಂದು  ಕಾರ್ಯಕ್ರಮವೊಂದರಲ್ಲಿ ಲತಾ ಹೇಳಿದ್ದರು. ಲತಾ ಮಂಗೇಶ್ಕರ್ ಅವರು ಕೊನೆಯದಾಗಿ ರೆಕಾರ್ಡ್ ಮಾಡಿದ್ದು ಮಾರ್ಚ್​ 30, 2019ರಲ್ಲಿ. ‘ಸೌಗಂಧ್ ಮುಜೆ ಇಸ್ ಮಿಟ್ಟೀ ಕಿ’ ಅವರು ರೆಕಾರ್ಡ್ ಮಾಡಿದ ಕೊನೆಯ ಹಾಡು.

ಲತಾ ಅವರು ರಾಜ್ಯ ಸಭೆಯ ಸದಸ್ಯರು ಆಗಿದ್ದು 1999 ರಿಂದ 2005ರ ವರೆಗೆ ಸೇವೆ ಸಲ್ಲಿಸಿದ್ದರು. ಇನ್ನು ಇಲ್ಲಿ ಗಮನಿಸಬೇಕಾದ ಅಂಶವೆಂದರೇ, ತಮ್ಮ ಎಂಟು ದಶಕಗಳ ಸುದೀರ್ಘ ವೃತ್ತಿ ಜೀವನದಲ್ಲಿ ಗಾಯಕಿ ಲತಾ ಮಂಗೇಶ್ಕರ್ ಎರಡು ಕನ್ನಡ ಹಾಡುಗಳಿಗೆ ಮಾತ್ರ ದನಿಯಾಗಿದ್ದರು. ಆ ಎರಡೂ ಹಾಡುಗಳು 1967ರಲ್ಲಿ ತೆರೆಕಂಡ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ್ದು. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾದ ‘ಬೆಳ್ಳನೆ ಬೆಳಗಾಯಿತು’ ಮತ್ತು ‘ಎಲ್ಲಾರೆ ಇರತೀರೋ ಎಂದಾರೆ ಬರತೀರೋ’ ಹಾಡುಗಳಿಗೆ ಲತಾ ಮಂಗೇಶ್ಕರ್ ದನಿಯಾಗಿದ್ದರು.

1969ರಲ್ಲಿ ಪದ್ಮಭೂಷಣ, 1989ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, 1999ರಲ್ಲಿ ಪದ್ಮವಿಭೂಷಣ, 2001ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಲತಾ ಮಂಗೇಶ್ಕರ್ ಪಡೆದಿದ್ದಾರೆ. ಮೂರು ಬಾರಿ ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ, ಮಹಾರಾಷ್ಟ್ರ ಭೂಷಣ ಪ್ರಶಸ್ತಿ, ಮಹಾರಾಷ್ಟ್ರ ರತ್ನ ಪ್ರಶಸ್ತಿಗೂ ಲತಾ ಮಂಗೇಶ್ಕರ್ ಭಾಜನರಾಗಿದ್ದಾರೆ. ಅತಿ ಹೆಚ್ಚು ಹಾಡುಗಳನ್ನು ಹಾಡಿರುವುದಕ್ಕೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಕೂಡ ಲತಾ ಮಂಗೇಶ್ಕರ್ ಹೆಸರಿನಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು