News Karnataka Kannada
Friday, May 10 2024
ವಿಶೇಷ

ಜೂನ್ 30: ಇಂದು ವಿಶ್ವ ಸಾಮಾಜಿಕ ಮಾಧ್ಯಮಗಳ ದಿನ

social media day
Photo Credit : Pexels

ಸಾಮಾಜಿಕ ಮಾಧ್ಯಮವಿಲ್ಲದೆ ನಮ್ಮಲ್ಲಿ ಯಾರೂ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮವು ನಮ್ಮ ಮನಸ್ಸು ಮತ್ತು ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.ಸಾಮಾಜಿಕ ಮಾಧ್ಯಮದ ಸಾಧಕ ಬಾಧಕಗಳು ಮತ್ತು ಅದರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಇಂದು (ಜೂನ್ 30) ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಆಚರಿಸಲಾಗುತ್ತದೆ. 1997ರಲ್ಲಿ ಸಿಕ್ಸ್‌ಡಿಗ್ರೀಸ್‌ನ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಪರಿಚಯಿಸಿತ್ತು. 2010 ರಲ್ಲಿ ಮೊದಲ ಬಾರಿಗೆ ‘Mashable’ ಸುದ್ದಿ ವೆಬ್ ಸೈಟ್ನಿಂದ ಸಾಮಾಜಿಕ ಮಾಧ್ಯಮ ದಿನವನ್ನು ಆಚರಿಸಲಾಯಿತು.

ಸಾಮಾಜಿಕ ಮಾಧ್ಯಮ ಒಬ್ಬರೊಬ್ಬರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು, ಸಮೂಹ ಸಂವಹನ ನಡೆಸಲು ಮತ್ತು ಸಾಮಾಜಿಕ ಬದಲಾವಣೆಗೆ ಪ್ರಮುಖ ಸಾಧನವು ಹೌದು. ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರಪಂಚದಾದ್ಯಂತ ನಾವು ಸಂವಹನ ನಡೆಸುವ ಇದು ಸಂಪರ್ಕ ಸೇತುವೆ ಆಗಿದೆ.

ವಾಷಿಂಗ್ಟನ್ ಡಿಸಿ ಮೂಲದ ಸಂಸ್ಥೆಯಾದ ‘ಸೇಪಿಯನ್ ಲ್ಯಾಬ್ಸ್’ ನಡೆಸಿದ ಇತ್ತೀಚಿನ ಅಧ್ಯಯನವು ಹದಿಹರೆಯದವರಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಅವರ ಆರೋಗ್ಯದ ಮತ್ತು ಮಾನಸಿಕ ವಿಚಾರಗಳ ಮೇಲೆ ದೊಡ್ಡ ಪರಿಣಾಮವನ್ನು ಹದಗೆಡಿಸುತ್ತದೆ ಎಂದು ಹೇಳಿದೆ.

ಒಂದು ಕಡೆ ಸಾಮಾಜಿಕ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿದೆ. ಒಳ್ಳೆಯ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡುತ್ತಿದೆ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸುಧಾರಿತ ವಿಚಾರಗಳು, ಹೊಸ ಹೊಸ ಮತ್ತು ಆಸಕ್ತಿದಾಯಕ ವಿಚಾರಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ. ಇದರ ಜತೆ ಜತೆಗೆ ಸಾಮಾಜಿಕ ಜಾಲತಾಣಗಳು ಕೆಟ್ಟ ವಿಚಾರಗಳನ್ನು ವೇಗವಾಗಿ ಗ್ರಹಿಸಿಕೊಳ್ಳುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು