News Karnataka Kannada
Monday, May 06 2024
ವಿಶೇಷ

ಚಳಿಗಾಲದಲ್ಲಿ ಸಂಧಿವಾತ ಕಾಡಬಹುದು ಹುಷಾರ್!

Beware that arthritis can suffer from in winters!
Photo Credit : By Author

ಈಗ ಚಳಿಗಾಲವಾಗಿರುವುದರಿಂದ ಹೆಚ್ಚಿನವರಲ್ಲಿ ಸಂಧಿವಾತಗಳು ಕಾಣಿಸಿಕೊಳ್ಳಬಹುದು ಆದುದರಿಂದ ಎಚ್ಚರಿಕೆಯಿಂದ ಇರುವುದು ಒಳಿತು.

ಈ ಸಂದಿವಾತದ ಬಗ್ಗೆ ವೈದ್ಯರು ಕೆಲವೊಂದು ಮಾಹಿತಿ ನೀಡಿದ್ದಾರೆ ಅದೇನೆಂದರೆ ಸಂಧಿವಾತ ಎನ್ನುವುದು ಕೀಲುಗಳ ಉರಿಯೂತವಾಗಿದೆ. ಇದನ್ನು ಆರಂಭದಿಂದಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದೆ ಹೋದರೆ ಕೈ, ಪಾದ, ಮಣಿಕಟ್ಟು, ಭುಜಗಳು, ಮೊಣಕಾಲು ಮತ್ತು ಪಾದದ ಸಣ್ಣಕೀಲುಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆನ್ನೆಲುಬುಗೂ ತೊಂದರೆಯಾಗುವ ಸಾಧ್ಯತೆಯೂ ಇದೆ.

ನೋವು, ಗಡುಸಾಗುವಿಕೆ, ಬಾವು, ಕೆಂಪಾಗುವುದು ಮತ್ತು ಚಲನೆಯ ವ್ಯಾಪ್ತಿ ಕಡಿಮೆಯಾಗುವುದು ಮೊದಲಾದ ಲಕ್ಷಣಗಳ ಮೂಲಕ ಯಾವ ವಿಧದ ಸಂಧಿವಾತ ಎಂಬುದನ್ನು ಹೇಳಬಹುದಾಗಿದೆ. ಹಲವು ರೀತಿಯ ಸಂಧಿವಾತಗಳಿದ್ದರೂ, ಎರಡು ಸಾಮಾನ್ಯ ರೂಪಗಳೆಂದರೆ ಅಸ್ಥಿ ಸಂಧಿವಾತ ಮತ್ತು ರುಮಟಾಯ್ಡ್ ಸಂಧಿವಾತಗಳು. ಇವು ಕೀಲುಗಳಿಗೆ ಬೇರೆ ಬೇರೆ ರೀತಿಯಲ್ಲಿ ಹಾನಿಯುಂಟು ಮಾಡಬಹುದು. ಗೌಟಿ ಸಂಧಿವಾತ, ಸೋರಿಯಾಟಿಕ್ ಸಂಧಿವಾತ, ಸ್ಪಾಂಡಿಲೊ ಸಂಧಿವಾತ, ಪ್ರತಿಕ್ರಿಯಾತ್ಮಕ ಸಂಧಿವಾತಗಳು ಕಾಣಿಸಿಕೊಳ್ಳುವುದು ಕಡಿಮೆ. ಸೋಂಕು ಕೂಡ ಸಂಧಿವಾತಕ್ಕೆ ಕಾರಣವಾಗ ಬಹುದು, ಇದಕ್ಕೊಂದು ಉದಾಹರಣೆ ಎಂದರೆ ಚಿಕುನ್ ಗುನ್ಯಾ ಸಂಧಿವಾತವಾಗಿದೆ.

ಅತ್ಯಂತ ಸಾಮಾನ್ಯವಾದ ಅಸ್ಥಿ ಸಂಧಿವಾತದಲ್ಲಿ ಕೀಲುಗಳ ಮೃದುವಾದ ಎಲುಬುಗಳಿಗೆ ಮತ್ತು ಕೀಲಾಗಿ ರೂಪುಗೊಳ್ಳುವ ಮೂಳೆಗಳ ತುದಿಯಲ್ಲಿ ದೃಢವಾದ, ನುಣುಪಾದ ಲೇಪನಕ್ಕೆ ಸಹಜ ಹಾನಿಯಾಗುತ್ತದೆ. ಮೃದುವಾದ ಎಲುಬುಗಳು ಮೂಳೆಗಳ ತುದಿಯನ್ನು ಮೆದುವಾಗಿಸುತ್ತವೆ ಮತ್ತು ಯಾವುದೇ ಘರ್ಷಣೆಯಿಲ್ಲದ ಕೀಲಿನ ಚಲನೆಗೆ ಅನುವು ಮಾಡಿಕೊಡುತ್ತವೆ, ಆದರೆ ಮೂಳೆ ತಿರುಗುವುದರ ಪರಿಣಾಮವಾಗಿ ಹೆಚ್ಚಿನ ಹಾನಿಯಾಗಬಹುದು, ಇದರಿಂದ ನೋವಾಗುವುದರ ಜೊತೆಗೆ ಚಲನೆಗೆ ಅಡ್ಡಿಯಾಗಬಹುದು. ಈ ಸಹಜ ಹಾನಿ ಹಲವಾರು ವರ್ಷಗಳಲ್ಲಿ ಆಗಬಹುದು ಮತ್ತು ಇಡೀ ಕೀಲಿಗೆ ಹಾನಿಯಾಗಬಹುದು. ರ‍್ಯುಮಟಾಯ್ಡ್ ಸಂಧಿವಾತದಲ್ಲಿ ಕೀಲಿನ ಕ್ಯಾಪ್ಸೂಲ್ ನ ಒಳಪದರದ ಮೇಲೆ ದೇಹದ ರೋಗ ನಿರೋಧಕ ಶಕ್ತಿ ದಾಳಿ ಮಾಡುತ್ತದೆ. ಈ ರೋಗ ಪ್ರಕ್ರಿಯೆ ನಿಧಾನವಾಗಿ ಮೃದು ಎಲುಬುಗಳನ್ನು ಮತ್ತು ನಿರ್ಧಿಷ್ಟ ಜಾಗದೊಳಗಿನ ಎಲುಬನ್ನು ನಾಶಪಡಿಸಬಹುದು. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಹೋದರೆ ಇದು ಶ್ವಾಸಕೋಶ, ನರಗಳು, ಚರ್ಮ, ಕಣ್ಣುಗಳನ್ನೂ ಕೂಡ ಬಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಶಿಸ್ತಿಯಿಲ್ಲದ ಜೀವನಶೈಲಿ, ಕುಟುಂಬದ ಹಿನ್ನೆಲೆ, ವಯಸ್ಸು, ಮಿತಿಮೀರಿ ಆಲ್ಕೋಹಾಲ್ ಸೇವಿಸುವುದು, ಹಳೆಯ ಕೀಲು ನೋವುಗಳು ಮತ್ತು ಬೊಜ್ಜು. ಗಂಭೀರವಾದ ಸಂಧಿವಾತಕ್ಕೆ ಕಾರಣವಾಗಬಹುದು. ಇನ್ನು ಸಂಧಿವಾತ ಯಾವುದೇ ವಯಸ್ಸು, ಲಿಂಗ, ಜನಾಂಗ, ಅಥವಾ ಯಾವುದೇ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯಲ್ಲೂ ಬರಬಹುದು. ಆದರೂ ಕೆಲವು ತರಹದ ಸಂಧಿವಾತಗಳು ಸಾಮಾಜಿಕ- ಆರ್ಥಿಕವಾಗಿ ಮೇಲಿನ ಸ್ಥಾನದಲ್ಲಿರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಮುಂಜಾನೆ ಮತ್ತು ಚಳಿಗಾಲದಲ್ಲಿ ಸಂಧಿವಾತದ ನೋವು ತೀವ್ರವಾಗಿರುತ್ತದೆ. ಹೀಗಾಗಿ, ಬಿಸಿನೀರಿನ ಶಾಖ, ಬಿಸಿನೀರಲ್ಲಿ ಕೈ ಅಥವಾ ಕಾಲನ್ನು ಮುಳುಗಿಸುವುದು, ಬಿಸಿ ನೀರಸ್ನಾನ ಮಾಡುವುದು ಒಳ್ಳೆಯದು. ತೀವ್ರವಾದ ಸಂಧಿವಾತದಲ್ಲಿ ಕೀಲುಗಳು ಬೆಚ್ಚಗಿದ್ದರೆ ಕೋಲ್ಡ್ ಪ್ಯಾಕ್ ಮಾಡಬಹುದಾಗಿದೆ. ವ್ಯಾಯಾಮ ಒಳ್ಳೆಯದಾದರೂ ನೋವು ತೀವ್ರವಿದ್ದಾಗ ಮಾಡುವುದು ಒಳ್ಳೆಯದಲ್ಲ. ಹಲವು ಕೀಲುಗಳಲ್ಲಿ ನೋವಿದ್ದಾಗ ಫಿಸಿಯೋಥೆರಪಿಯಲ್ಲಿ ಸೂಚಿಸುವ ವ್ಯಾಕ್ಸ್ ಬಾತ್ ನೆರವಿಗೆ ಬರಬಹುದು. ನಿತ್ಯದ ವ್ಯಾಯಾಮ, ನಡೆಯುವುದು, ದೇಹದ ತೂಕ ಇಳಿಸಿಕೊಳ್ಳುವುದರಿಂದ ಸಂಧಿವಾತದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು