News Karnataka Kannada
Tuesday, April 30 2024
ವಿಶೇಷ

ಬಂಟ್ವಾಳ: ಹೆದ್ದಾರಿ ಪಕ್ಕದಲ್ಲೇ ರಾರಾಜಿಸುತ್ತಿದೆ “ಸಾವಯವ ಕೃಷಿ ತೋರಣ..!”

Bantwal
Photo Credit : By Author

ಬಂಟ್ವಾಳ: “ಕೃಷಿ ಖುಷಿ ಕೊಡುವ ಕಾರ್ಯ” ಎಂಬುದಕ್ಕೆ ಇಂಬು ನೀಡುವಂತೆ ಬಂಟ್ವಾಳ‌-ಪೂಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಮಣಿಹಳ್ಳ-ವಗ್ಗದ ನಡುವೆ ಬಡಗುಂಡಿ ಎಂಬಲ್ಲಿ ಹೆದ್ದಾರಿ ಪಕ್ಕದಲ್ಲೇ ರಾರಾಜಿಸುತ್ತಿದೆ “ಸಾವಯವ ಕೃಷಿ ತೋರಣ..!”

ಹೆದ್ದಾರಿ ಪಕ್ಕದ ಎಲ್ಲೆ‌ಂದರಲ್ಲಿ ತ್ಯಾಜ್ಯ ಎಸೆಯುವುದನ್ನು ಕಂಡು ಬೇಸತ್ತು ಹೋಗಿರುವ ಈ ಕಾಲಘಟ್ಟದಲ್ಲಿ
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಸಾಲು ಸಾಲು ಬೆಂಡೆ ಮತ್ತು ಅಲಸಂಡೆ ತರಕಾರಿ ಬೆಳೆಸುವ ಮೂಲಕ ಕೃಷಿಕರೊಬ್ಬರು ಗಮನ ಸೆಳೆದಿದ್ದಾರೆ.

ಇಲ್ಲಿನ ಬಡಗುಂಡಿ ನಿವಾಸಿ ರಾಮಣ್ಣ ಸಪಲ್ಯ ನಾವೂರು ಎಂಬವರೇ ಈ ಹೊಸ ಹೆದ್ದಾರಿ‌ಪಕ್ಕದಲ್ಲಿ ಸಾವಯವ ಕೃಷಿ ಸಾಹಸದಲ್ಲಿ ತೊಡಗಿದ್ದು, ಕೃಷಿಯಿಂದ ಖುಷಿಕಾಣುತ್ತಿದ್ದಾರೆ.

ಕಳೆದ 25ವರ್ಷಗಳಿಂದ ತನ್ನ ಅಡಿಕೆ ತೋಟ ಮತ್ತು ಗದ್ದೆಯಲ್ಲಿ ತರಕಾರಿ ಬೆಳೆಯುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಇವರ ಜಮೀನಿನ ಒಂದು ಭಾಗ ಹೆದ್ದಾರಿ ವಿಸ್ತರಣೆಯಿಂದ ಕೈತಪ್ಪಿತ್ತು. ಪ್ರಸ್ತುತ ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಈ ರಸ್ತೆ ಬದಿ ಉಳಿದಿರುವ ಅಡಿಕೆ ತೋಟಕ್ಕೆ ಇವರು ರಕ್ಷಣೆ ಬೇಲಿ ಅಳವಡಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಈ ಬೇಲಿಯುದ್ದಕ್ಕೂ ಗೋಣಿ ಚೀಲದಲ್ಲಿ ಸಾವಯವ ಗೊಬ್ಬರ ಬಳಸಿ ಸಾಲು ಸಾಲು ಬೆಂಡೆ ಮತ್ತು ಅಲಸಂಡೆ ಗಿಡ ಬೆಳೆಯುತ್ತಿದ್ದಾರೆ. ಈ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರು ಮತ್ತು ವಾಹನ ಸವಾರರು ಈ ಫಲವತ್ತಾದ ತರಕಾರಿ ಕಂಡು ಕುತೂಹಲದಿಂದ ವೀಕ್ಷಿಸುತ್ತಿರುವ ದೃಶ್ಯ ಕಂಡು ಬಂದಿದೆ.

ಕೇವಲ ಹಟ್ಟಿಗೊಬ್ಬರ ಮತ್ತು ಹನಿ ನೀರಾವರಿ ಮೂಲಕ 150ಕ್ಕೂ ಮಿಕ್ಕಿ ಬೆಂಡೆ ಗಿಡ, 250ಕ್ಕೂ ಮಿಕ್ಕಿ ಅಲಸಂಡೆ ಗಿಡ ಬೆಳೆದಿದ್ದು, ರಸ್ತೆ ಬದಿ ಬೇಲಿಗೆ ಅಲಸಂಡೆ ಬಳ್ಳಿ ಹಬ್ಬಿದೆ. ಉಳಿದಂತೆ ಮನೆ ಹಿಂಬದಿ ಬೇಲಿಯಲ್ಲಿ ಅಲಸಂಡೆ ಮಾತ್ರವಲ್ಲದೆ ಹೀರೆಕಾಯಿ, ತೊಂಡೆ, ಸೋರೆ ಕಾಯಿ ಮತ್ತು ಬೂದುಕುಂಬಳ ಬಳ್ಳಿ ಬೆಳೆಸಿದ್ದಾರೆ.

ಈ ಹಿಂದೆ ತೈವಾನ್ ಪಪ್ಪಾಯಿ ಬೆಳೆದು ಆರ್ಥಿಕವಾಗಿ ಸ್ವಾವಲಂಬನೆ ಕಂಡುಕೊಂಡಿದ್ದೇನೆ. ಕೆಲವೊಮ್ಮೆ ತರಕಾರಿ ಬಳ್ಳಿಗೆ ನವಿಲು ಕಾಟ ಕಂಡು ಬರುತ್ತಿದ್ದು, ಸಾವಯವ ಗೊಬ್ಬರ ಬಳಕೆಯಿಂದ ಗಿಡಗಳಿಗೆ ಯಾವುದೇ ರೋಗ ಭೀತಿ ಇಲ್ಲ. ಇದರಲ್ಲಿ ಬೆಳೆದ ತರಕಾರಿಗಳನ್ನು ಸ್ಥಳೀಯ ಅಂಗನವಾಡಿ ಸಹಿತ ಕೆಲವೊಂದು ಶಾಲೆಯ ಅಕ್ಷರ ದಾಸೋಹಕ್ಕೆ ಕೊಡುಗೆ ನೀಡುತ್ತಿರುವುದಾಗಿ ರಾಮಣ್ಣ ನಾವೂರು ತಿಳಿಸಿದ್ದಾರೆ.

“ಶ್ರೀಕ್ಷೇತ್ರ ಧರ್ಮಸ್ಥಳದ ರುಡ್ ಸೆಟ್ ಮತ್ತು ಬಂಟ್ವಾಳ ತೋಟಗಾರಿಕೆ ಇಲಾಖೆಯಿಂದ ನನಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ದೊರೆತಿದ್ದು, ಇದೀಗ ಆಸಕ್ತ ಕೃಷಿಕರಿಗೆ ಸ್ವತಃ ನಾನೇ ತರಬೇತಿ ನೀಡುತ್ತಿದ್ದೇನೆ. ತರಕಾರಿ ಬೆಳೆಯಲು ಸಾಕಷ್ಟು ಜಮೀನಿನ ಅಗತ್ಯವಿಲ್ಲ. ಮನೆ ಅಂಗಳ ಸಹಿತ ಬೇಲಿ ಅಥವಾ ಇಂತಹ ರಸ್ತೆ ಬದಿ ಕೂಡಾ ಗೋಣಿ ಚೀಲದಲ್ಲಿ ತರಕಾರಿ ಬೆಳೆಯಬಹುದು.” -ರಾಮಣ್ಣ ನಾವೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು