News Karnataka Kannada
Friday, May 10 2024
ಅಂಕಣ

ಮುಖದ ಸೌಂದರ್ಯಕ್ಕಾಗಿ ತುಳಸಿ ಫೇಸ್ ಪ್ಯಾಕ್

Tulsi face pack for facial beauty
Photo Credit : Freepik

ತುಳಸಿ ಬಗ್ಗೆ ನಾವೆಲ್ಲರು ತಿಳಿದು ಕೊಂಡಿದ್ದೇವೆ. ಈ ತುಳಸಿ ಎಲೆ ಆರೋಗ್ಯಕ್ಕೆ ಹೇಗೆ ಸಹಕಾರಿಯೋ ಅದೇ ರೀತಿ ಸೌಂದರ್ಯಕ್ಕೂ ಅಷ್ಟೇ ಉಪಯೋಗಕಾರಿಯಾಗಿದೆ. ಈ ತುಳಸಿಯನ್ನು ಫೇಸ್ ಪ್ಯಾಕ್ ಆಗಿ ಬಳಕೆ ಮಾಡಬಹುದು ಅದು ಹೇಗೆ ಎಂದು ತಿಳಿದುಕೊಳ್ಳೋಣ.

ತುಳಸಿ ಎಲೆಯ ಫೇಸ್ ಪ್ಯಾಕ್ ಮಾಡಲು ಮೊದಲಿಗೆ ತುಳಸಿ ಎಲೆಗಳು, ಪುದೀನಾ ಎಲೆಗಳು, ರೋಸ್ ವಾಟರ್ ಅನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಂಡು ಅದರ ರಸವನ್ನು ಸರಿಯಾಗಿ ಹಿಂಡಿ ಹಾಗೆ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ ಉತ್ತಮ ರಿಸಲ್ಟ್ ಪಡೆಯುತ್ತೀರ.

ಒಂದು ಚಿಕ್ಕಚಮಚ ಒಣಗಿದ ತುಳಸಿ ಎಲೆಗಳ ಪುಡಿಯನ್ನು ಎರಡು ಚಿಕ್ಕಚಮಚ ಬೇವಿನ ಪುಡಿಯೊಂದಿಗೆ ಬೆರೆಸಿ. ಇದಕ್ಕೆ ಎರಡು ಚಿಕ್ಕ ಚಮಚ ಮುಲ್ತಾನಿ ಮಿಟ್ಟಿಯನ್ನು ಹಾಕಿ ಕೆಲವು ಹನಿ ಗುಲಾಬಿ ನೀರು ಹಾಗೂ ಅರ್ಧ ಚಿಕ್ಕ ಚಮಚ ಲಿಂಬೆರಸದೊಂದಿಗೆ ಮಿಶ್ರಣ ಮಾಡಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಲೇಪನ ತಯಾರಿಸಿ, ಈ ಲೇಪನ ಮುಖದ ಮೇಲೆ ಹಚ್ಚಿ ಒಣಗಲು ಬಿಡಬೇಕು. ಚಮ ಪೂರ್ಣ ಒಣಗಿದ ಬಳಿಕ ಈ ಲೇಪ ಒಂದು ಕಡೆಯಿಂದ ಬಿರುಕು ಬಿಡಲು ಪ್ರಾರಂಭಿಸುತ್ತದೆ. ಆಗ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಈ ವಿಧಾನದಿಂದ ಚರ್ಮ ತಕ್ಷಣವೇ ಉತ್ತಮ ಕಾಂತಿ ಪಡೆಯುತ್ತದೆ.

ಒಂದು ಪಿಂಗಾಣಿಯಲ್ಲಿ ತುಳಸಿ ಹುಡಿಯನ್ನು ಲಿಂಬೆರಸದ ಜತೆಗೆ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಹಾಗೆ ದಪ್ಪಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ ಹೀಗೆ ಮಾಡುದರಿಂದಲೂ ತ್ವಚೆಯ ಕಾಂತಿ ಹೆಚ್ಚಾಗುತ್ತದೆ.

ತುಳಸಿ ಹುಡಿ ಮತ್ತು ಕಡಲೆ ಹಿಟ್ಟನ್ನು ಸರಿಯಾದ ಪ್ರಮಾಣದಲ್ಲಿ ಹಾಕಿಕೊಂಡು ಮಿಶ್ರಣ ಮಾಡಿ,ಬಳಿಕ ಅದಕ್ಕೆ ಮೊಸರು ಹಾಕಿಕೊಂಡು ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ ಇದರಿಂದಲೂ ಉತ್ತಮ ರಿಸಲ್ಟ್ ಪಡೆಯುತ್ತೀರ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು