ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಮುಂದಿನ 24 ಗಂಟೆಗಳಲ್ಲಿ ವ್ಯಾಪಕ ಮಳೆ/ಹಿಮ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.
“ಶನಿವಾರ ಮಧ್ಯಾಹ್ನದಿಂದ ಮುಂದಿನ 24 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಕ ಮಳೆ / ಹಿಮ ಬೀಳುವ ನಿರೀಕ್ಷೆಯಿದೆ” ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀನಗರದಲ್ಲಿ 5.6, ಪಹಲ್ಗಾಮ್ನಲ್ಲಿ 2 ಮತ್ತು ಗುಲ್ಮಾರ್ಗ್ನಲ್ಲಿ 0.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಲಡಾಖ್ ಪ್ರದೇಶದ ದ್ರಾಸ್ ಪಟ್ಟಣದಲ್ಲಿ ಮೈನಸ್ 1.8, ಕಾರ್ಗಿಲ್ 3 ಮತ್ತು ಲೇಹ್ನಲ್ಲಿ ಮೈನಸ್ 2 ಕನಿಷ್ಠ ತಾಪಮಾನವಿತ್ತು. ಜಮ್ಮುವಿನಲ್ಲಿ 16.4, ಕತ್ರಾ 14.7, ಬಟೋಟೆ 9.5, ಬನಿಹಾಲ್ 5.8 ಮತ್ತು ಭದೇರ್ವಾದಲ್ಲಿ 7.2 ಕನಿಷ್ಠ ಉಷ್ಣಾಂಶ ದಾಖಲಾಗಿದೆ.