News Karnataka Kannada
Monday, April 29 2024
ಅಂಕಣ

ಮುಖದ ಅಂದ ಹೆಚ್ಚಿಸಲು ಟ್ರೈ ಮಾಡಿ ಬೆಂಡೆಕಾಯಿ ಫೇಸ್ ಪ್ಯಾಕ್

Try okra face pack to enhance the look of the face
Photo Credit : Freepik

ಯುವತಿಯರಿಗೆ ಸೌಂದರ್ಯದ ಬಗ್ಗೆ ಅತೀವ ಕಾಳಜಿ ಇರುತ್ತದೆ. ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಪ್ರೋಡೆಕ್ಟ್ ಗಳನ್ನು ಯುವತಿಯರು ಬಳಸುತ್ತಾರೆ. ಹೀಗೆ ಮಾಡುವುದರಿಂದ ಉಪಯೋಗಕ್ಕಿಂತ ಸಮಸ್ಯೆಗಳೇ ಹೆಚ್ಚು, ಆದ್ದರಿಂದ ಹೀಗೆ ಮಾಡೋ ಬದಲು ಮನೆಯಲ್ಲೇ ಸಿಗುವಂತಹ ವಸ್ತುಗಳನ್ನು ಬಳಕೆ ಮಾಡಿಕೊಂಡು ಫೇಸ್ ಪ್ಯಾಕ್ ಗಳನ್ನು, ಫೇಸ್ ಮಾಸ್ಕ್ ಗಳನ್ನು ತಯಾರಿಸಿ ಬಳಕೆ ಮಾಡುವುದು ಒಳಿತು. ಜೊತೆಗೆ ಇದು ಸೇಫ್ ಎಂದೂ ಹೇಳಬಹುದು. ಪಪ್ಪಾಯಿ ಹಣ್ಣು, ಜೇನುತುಪ್ಪ, ಅಲೋವೆರಾ, ಅರಿಶಿಣ ಹೀಗೆ ಕೆಲವೊಂದು ಮನೆಯಲ್ಲಿಯೇ ಸಿಗುವಂತಹದರಲ್ಲಿ ಫೇಸ್ ಪ್ಯಾಕ್ ಗಳನ್ನು ಮನೆಯಲ್ಲೇ ಮಾಡಿಕೊಂಡು ಬಳಸಿಕೊಂಡು ಮುಖದ ಕಾಂತಿ ಹೆಚ್ಚಿಸಿಕೊಳ್ಳ ಬಹುದು ಜೊತೆಗೆ ಮುಖದ ಮೇಲಿನ ಕೆಲವೊಂದು ಸಮಸ್ಯೆಗಳು ಅಂದರೆ ಮೊಡವೆ ಸಮಸ್ಯೆ, ಕಲೆಯಿಂದ ಮುಕ್ತಿ ಪಡೆಯಲು ಇದು ಸಹಾಯ ಮಾಡುತ್ತದೆ. ಇಂದು ನಾವು ಅಡುಗೆ ಕೋಣೆಯಲ್ಲಿ ಇರುವಂತಹ ಬೆಂಡೆಕಾಯಿ ಬಳಸಿಕೊಂಡು ಹೇಗೆ ಮುಖದ ಸಮಸ್ಯೆಗಳಿಂದ ದೂರ ಆಗ ಬಹುದು ಮತ್ತು ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಬೆಂಡೆಕಾಯಿ ಪಲ್ಯ, ಸಾಂಬಾರ್ ಮಾಡೋದಕ್ಕೆ ಉಪಯೋಗವಾಗುತ್ತದೆ ಎಂದು ನಾವೆಲ್ಲರೂ ತಿಳಿದ್ದೇವೆ, ಆದರೆ ಬೆಂಡೆಕಾಯಿ ಮುಖದ ಹಲವಾರು ಸಮಸ್ಯೆಗಳನ್ನು ದೂರ ಮಾಡುತ್ತದೆ ಜೊತೆಗೆ ಕಾಂತಿಯನ್ನು ಹೆಚ್ಚಿಸುತ್ತದೆ.

ಬೆಂಡೆಕಾಯಿ ಫೇಸ್ ಪ್ಯಾಕ್ ಮಾಡಲು ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು, ಸಣ್ಣ ಸಣ್ಣ ಪೀಸ್ ಗಳಾಗಿ ಕತ್ತರಿಸಿಕೊಳ್ಳಿ ನಂತರ ಗ್ರೈನ್ ಮಾಡಿ ಅದಕ್ಕೆ, ಜೇನುತುಪ್ಪ, ಹಾಲಿನ ಪುಡಿ ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಮೇಲಿನ ಟ್ಯಾನ್ ಹೋಗಿ ಮುಖದ ಅಂದ ಹೆಚ್ಚುತ್ತದೆ.

ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಗ್ರೈನ್ ಮಾಡಿ ನಂತರ ಅದಕ್ಕೆ ಸ್ವಲ್ಪ ಟೀ ಟ್ರೀ ಎಣ್ಣೆ, ಜೇನುತುಪ್ಪ, ನಿಂಬೆ ರಸ ಸೇರಿಸಿ, ಚೆನ್ನಾಗಿ ರುಬ್ಬಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದ ಮೇಲಿನ ಸುಕ್ಕು ಮಾಯವಾಗುತ್ತದೆ.

ಮುಖ ಕಾಂತಿಯುತವಾಗಿ ಹೊಳೆಯುವಂತೆ ಮಾಡಲು, ಬೆಂಡೆಕಾಯಿಯನ್ನು ಮಿಕ್ಸಿಯಲ್ಲಿ ಗ್ರೈನ್ ಮಾಡಿ ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ, ಸ್ವಲ್ಪ ಹೊತ್ತು ಹಾಗೆಯೇ ಬಿಡಿ ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು