News Karnataka Kannada
Thursday, May 02 2024
ಅಂಕಣ

ಸುಂದರ ಕಾಂತಿಯುತ ತ್ವಚೆಗಾಗಿ ಹಾಲಿನ ಫೇಸ್ ಪ್ಯಾಕ್

Milk face pack for beautiful glowing skin
Photo Credit : Freepik

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಅದಕ್ಕಾಗಿ ನಾವು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಸ್ಕಿನ್ ಕ್ರೀಂಗಳನ್ನುಹಚ್ಚಿಕೊಳ್ಳುತ್ತೇವೆ. ಇದು ಕೆಲವೊಮ್ಮೆ ಉತ್ತಮ ರಿಸಲ್ಟ್ ಕೊಡಬಹುದು. ಇನ್ನೂ ಕೆಲವೊಮ್ಮೆ ಅಡ್ಡ ಪರಿಣಾಮಗಳನ್ನು ಬೀರಬಹುದು. ಆದ್ದರಿಂದ ಇಂತಹ ಸಮಸ್ಯೆಗಳಿಂದ ದೂರ ಉಳಿಯಲು ಇಲ್ಲಿದೆ ಕೆಲವೊಂದು ಬ್ಯೂಟಿ ಟಿಪ್ಸ್. ಹಸಿ ಹಾಲು ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಸಹಾಯಮಾಡುತ್ತದೆ.

ಹಸಿ ಹಾಲಿನ ಫೇಸ್ ಪ್ಯಾಕ್ ಮಾಡಲು ಹಾಲಿನಲ್ಲಿ ಬೇಳೆ ಹಿಟ್ಟು ಮತ್ತು ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ ಮತ್ತು 10 ರಿಂದ 20 ನಿಮಿಷಗಳ ನಂತರ ಮುಖವನ್ನು ತೊಳೆದರೆ ಮುಖದ ಹೊಳಪು ಕ್ರಮೇಣ ಹೆಚ್ಚುತ್ತದೆ ಜೊತೆಗೆ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ. ಹಸಿ ಹಾಲನ್ನು ಮುಖದ ಮೇಲೆ ಹಚ್ಚುವುದರಿಂದ ಮೊಡವೆ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಹಾಲು, ಅರಿಶಿನ ಮತ್ತು ನಿಂಬೆ ರಸದ ಫೇಸ್ ಪ್ಯಾಕ್ ಮಾಡಲು ಒಂದು ಬೌಲ್ ಅಲ್ಲಿ ಅರ್ಧ ಚಮಚ ನಿಂಬೆ ರಸ, ಒಂದು ಚಿಟಕಿ ಅರಿಶಿನ ಮತ್ತು ಒಂದು ಚಮಚ ಹಾಲು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ವಚ್ಛ ನೀರಿಂದ ತೊಳೆಯಿರಿ ಇದರಿಂದ ಹೊಳಪು ಹೆಚ್ಚುತ್ತದೆ ಜೊತೆಗೆ ಕಲೆ ಮಾಯವಾಗುತ್ತದೆ.

ಬಾಳೆ ಹಣ್ಣು ಮತ್ತು ಹಾಲು ಸೇರಿಸಿ ಫೇಸ್ ಪ್ಯಾಕ್ ಮಾಡಲು, ಬಾಳೆ ಹಣ್ಣನ್ನು ಸಿಪ್ಪೆ ತೆಗೆದು ಅದನ್ನು ಕಿವುಚಿದ ಅದಕ್ಕೆ ಹಾಲನ್ನು ಸೇರಿಸಿ ಮಿಶ್ರಣ ಮಾಡಿ ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ ಸ್ಪಲ್ಪ ಸಮಯ ಹಾಗೆ ಒಣಗಲು ಬಿಟ್ಟು ನಂತರ ಸ್ವಚ್ಚ ನೀರಿನಿಂದ ತೊಳೆಯಿರಿ ಇದರಿಂದಲೂ ಮುಖದ ಹೊಳಪು ಹೆಚ್ಚುತ್ತದೆ.

ಜೇನುತುಪ್ಪ ಮತ್ತು ಹಸಿ ಹಾಲಿನ ಫೇಸ್ ಪ್ಯಾಕ್ ತಯಾರಿಸಲು, ಹಾಲಿಗೆ ಒಂದು ಚಮಚ ಜೇನುತುಪ್ಪ ಮತ್ತು ಎರಡು ಹನಿ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ ಮುಖ ಹಾಗೂ ಕತ್ತಿಗೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ನೀರಿನಿಂದ ತೊಳೆಯಿರಿ ಇದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು