News Karnataka Kannada
Sunday, April 28 2024
ಅಂಕಣ

ಮಳೆಗಾಲದ ಅಗ್ಗದ ಆಹಾರ ಕಣಿಲೆ: ಸವಿದವರು ಬಲ್ಲರು ಇದರ ಮಹತ್ವ

Monsoon's cheapest food bambooshoot
Photo Credit : Freepik

ಮಳೆಗಾಲ ಬಂತೆಂದರೆ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ಕರಾವಳಿ, ಮಲೆನಾಡ ಜನರಿಗಂತು ಡಬಲ್ ಖುಷಿ ಯಾಕೆಂದರೆ ಮಳೆಗಾಲದಲ್ಲಿ ನೈಸರ್ಗಿಕವಾಗಿ ಸಿಗುವಂತಹ ಕೆಲವೊಂದು ಆಹಾರವನ್ನು ಸವಿಯಲು ಸರಿಯಾದ ಸಮಯ.

ಉದಾಹರಣೆಗೆ ಕಣಿಲೆ (ಕಳಲೆ). ಸಾಮಾನ್ಯವಾಗಿ ಮಳೆಗಾಲದಲ್ಲಿ ಸಿಗುವಂತಹ ವಸ್ತು ಆಗಿದೆ. ಮಳೆಗೆ ಚಿಗುರೊಡೆಯುವ ಬಿದಿರಿನ ಚಿಗುರನ್ನು ಕತ್ತರಿಸಿ ತಂದು ಆಹಾರವನ್ನಾಗಿ ಬಳಸುವ ಪದ್ಧತಿ ಇಂದಿಗೂ ಕರವಾಳಿ ಮತ್ತು ಮಲೆನಾಡ ಜನರ ಮನೆಗಳಲ್ಲಿ ಕಾಣಬಹುದು.

ಇದು ಅತ್ಯಂತ ಕರಾವಳಿ ಮತ್ತು ಮಲೆನಾಡ ಜನರ ಆಹಾರ ಪದ್ಧತಿಯಲ್ಲಿ ಪ್ರಮುಖವಾದದ್ದು ಮತ್ತು ಆರೋಗ್ಯಕರವಾದದ್ದು. ಮಳೆಗಾಲದಲ್ಲಿ ಬಿದಿರು ಮೋಳಕೆ ಒಡೆದಾಗ ಅದರ ಚಿಗುರನ್ನು ಸ್ವಲ್ಪ ಎತ್ತರಕ್ಕೆ ಬೆಳೆದಾಗ ಅದನ್ನು ಕತ್ತರಿಸಲಾಗುತ್ತದೆ. ನಂತರ ಅದರ ಮೇಲಿನ ಸಿಪ್ಪೆಯಂತಹ ಪದರವನ್ನು ಕಳಚಿ ಒಳಗಡೆಯ ತಿರುಳನ್ನು ಸಣ್ಣಗೆ ತುಂಬಾನೇ ತೆಳುವಾಗಿ ಚಕ್ರ ಆಕಾರವಾಗಿ ಕತ್ತರಿಸಲಾಗುತ್ತದೆ. ಇದಾದ ನಂತರ ಇನ್ನು ಕೆಲವರು ಇದನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸುತ್ತಾರೆ.

ಕತ್ತರಿಸಿದ ಈ ಕಣಿಲೆಯ ತುಂಡುಗಳನ್ನು ನೀರಿನಲ್ಲಿ ಮೂರು ದಿನಗಳಲ್ಲಿ ನೆನೆಯಲು ಹಾಕಿ ಇಡುತ್ತಾರೆ. ಪ್ರತಿದಿನಇದರ ನೀರನ್ನು ಬದಲಾಯಿಸಿರುತ್ತಾರೆ. ಇದನ್ನು ಬಹುಕಾಲದವರೆಗೆ ಆಹಾರವಾಗಿ ಬಳಸಬೇಕೆಂದರೆ ಉಪ್ಪುನೀರಿನಲ್ಲಿ ಇದನ್ನು ಶೇಖರಿಸಿ ಇಡಬಹುದು.

ಅಂದಹಾಗೆ ಈ ಬಿದಿರಿನ ಆಹಾರವನ್ನು ತಯಾರಿಸುವ ಪದ್ಧತಿ ಹೊರ ದೇಶಗಳಾದ ಚೀನ, ಜಪಾನ್ ಮತ್ತು ತೈವನ್‌ನಲ್ಲಿಯು ಆಹಾರ ರೂಪದಲ್ಲಿಯು ಬಳಕೆ ಮಾಡುತ್ತಾರೆ.

ಕಣಿಲೆ ಸುಕ್ಕ,ಕಣಿಲೆ ಪಲ್ಯ, ಸಾಂಬರ್, ಉಪ್ಪಿನಕಾಯಿ ಹೀಗೆ ಹಲವು ರೀತಿಯಲ್ಲಿ ಇದನ್ನು ಆಹಾರವಾಗಿ ಬಳಸಲಾಗುತ್ತದೆ. ಇದರಲ್ಲಿ ಸಾಕಷ್ಟು ಪೋಷಕಾಂಶ ಇರುವುದರಿಂದ ಆರೋಗ್ಯ ಅಭಿವೃದ್ಧಿಯಲ್ಲಿ ಇನ್ನಷ್ಟು ಸಹಕಾರಿಯಾಗಿದೆ.

ಮಳೆಗಾಲದಲ್ಲಿ ಸಾಮನ್ಯವಾಗಿ ಕಾಡುವ ಶೀತ ನೆಗಡಿಯನ್ನು ದೂರವಿಡಲು ದೇಹದಲ್ಲಿ ಉಷ್ಣತೆಯನ್ನು ಕಾಪಾಡಲು ಕಣಿಲೆ ಸಹಕರಿ. ಅಲ್ಲದೆ ಪ್ರೊಟೀನ್, ಕಾರ್ಬೋಹೈಡ್ರೆಟ್, ನಾರಿನಾಂಶ, ಖನಿಜಗಳು ಅಡಕವಾಗಿದೆ.ಜೋತೆಗೆ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಬಿ6, ಕ್ಯಾಲಿಶಿಯಂ, ಮೆಗ್ನಷಿಯಂನಂತಹ ಗುಣಗಳು ಹೇರಳವಾಗಿದೆ ಒಟ್ಟಿನಲ್ಲಿ ಕಣಿಲೆ ಪೋಷಕಾಂಶಗಳ ಭಂಡರವಾಗಿದೆ.

ಮದುಮೇಹಿಗಳಿಗೆ ಇದು ಉತ್ತಮ ಆಹಾರವಾಗಿದೆ.ಹೃದಯದ ಸಮಸ್ಯೆಯಿಂದ ಬಳಲುವವರಿಗೆ ಇದು ಉತ್ತಮ ಆಹಾರವಾಗಿದೆ. ಕಣಿಲೆಗೆ ಪದಾರ್ಥ ಮಾಡುವವರು ಹೆಚ್ಚಾಗಿ ಇದಕ್ಕೆ ಹಸಿರು ಕಾಳನ್ನು ಜೋತೆ ಸೇರಿಸಿ ಮಾಡುತ್ತಾರೆ.

ಈ ಕಣಿಲೆ ಪದಾರ್ಥಮಾಡುವವರು ಕೊಂಚ ಎಚ್ಚರ ವಹಿಸ ಬೇಕಾಗುತ್ತದೆ. ಎಕೆಂದರೆ ಇದರಲ್ಲಿ ವಿಷಪೂರಿತ ಅಂಶವು ಅಡಕವಾಗಿರುತ್ತದೆ. ಕಣಿಲೆಯ ತಿರುಳನ್ನು ಕತ್ತರಿಸುವಾಗಲೂ ಮತ್ತು ಅದನ್ನು ಮೂರು ದಿನ ನೀರಿನಲ್ಲಿ ನೆನೆಯಲು ಇಡುವಾಗಲೂ ಅಷ್ಟೆ ಪ್ರತಿ ದಿನ ನೀರನ್ನು ಬದಲಾಯಿಸುತ್ತಿರ ಬೇಕು.

ನಮ್ಮ ಸುತ್ತಮುತ್ತ ನೈಸರ್ಗಿಕವಾಗಿ ಸಿಗುವ ಅಗ್ಗದ ಆಹಾರವನ್ನು ಹೆಚ್ಚಾಗಿ ಬಳಸುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಜೋತೆಗೆ ರುಚಿಯಾದ ಆಹಾರವನ್ನು ಸವಿಯಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು