News Karnataka Kannada
Saturday, May 11 2024
ಅಂಕಣ

ಚರ್ಮದ ಕಾಂತಿ ಹೆಚ್ಚಿಸಲು ರೋಸ್ ವಾಟರ್ ಸಹಕಾರಿ

Rose water helps in enhancing the glow of the skin
Photo Credit : Pexels

ಬೇಸಿಗೆ ಸಮಯದಲ್ಲಿ ಚರ್ಮದ ಸಮಸ್ಯೆ ಬರುವುದು ಕಡಿಮೆ. ಚಳಿಗಾಲದ ಸಮಯದಲ್ಲಿ ಚರ್ಮದ ಸಮಸ್ಯೆಗಳು ಒಂದೊಂದೆ ಆರಂಭವಾಗುತ್ತದೆ. ಚರ್ಮ ಒಣಗುವಿಕೆ, ಕಾಲುಗಳಲ್ಲಿ ಹಿಮ್ಮಡಿ ಬಿರುಕು ಬಿಟ್ಟುಕೊಳ್ಳುವುದು, ಮೈ ಕೈ ಚರ್ಮ ಒಡೆದುಕೊಳ್ಳುವುದು, ತುಟಿ ಹೊಡೆಯುವುದು ಹೀಗೆ ಒಂದೊಂದೆ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ.

ಅದರಲ್ಲೂ ಮುಖ್ಯವಾಗಿ ಚಳಿಗಾಲದಲ್ಲಿ ನಮ್ಮ ಮುಖದ ಅಂದ ಸಾಕಷ್ಟು ಹಾಳಾಗುತ್ತದೆ. ಹಾಗೆಂದು ರಾಸಾಯನಿಕ ಪದಾರ್ಥಗಳನ್ನು ಬಳಕೆ ಮಾಡಿ ತಯಾರು ಮಾಡುವ ಕ್ರೀಮ್ ಗಳನ್ನು ತಂದು ಹಚ್ಚಿಕೊಂಡು ಚರ್ಮದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳುವ ಬದಲು ಚಳಿಗಾಲದಲ್ಲಿ ರೋಸ್ ವಾಟರ್ ಬಳಕೆ ಮಾಡಿಕೊಂಡು ಸುಲಭವಾಗಿ ಮನೆಯಲ್ಲಿ ತಯಾರು ಮಾಡಬಹುದಾದ ಫೇಸ್ ಪ್ಯಾಕ್ ಅಥವಾ ಫೇಸ್ ಸ್ಕಬ್ ಗಳ ಬಳಸಿ. ಇದರಲ್ಲಿ ರೋಸ್ ವಾಟರ್ ಬಳಕೆ ಆಗಿರುವುದರಿಂದ, ಚಳಿಗಾಲದಲ್ಲಿ ಚರ್ಮವನ್ನು ಉತ್ತಮ ರೀತಿರಲ್ಲಿ ಆರೋಗ್ಯಯುತವಾಗಿ ಕಾಪಾಡಿಕೊಳ್ಳುತ್ತದೆ.

ಚರ್ಮದ ಕಾಂತಿ ಹೆಚ್ಚಿಸಲು ರೋಸ್ ವಾಟರ್ ಸಹಕಾರಿಯಾಗಿದೆ. ಮೊಸರಿಗೆ ಸ್ವಲ್ಪ ರೋಸ್ ವಾಟರ್ ಹಾಕಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಳಿಕ ವಾಶ್ ಮಾಡಿದ್ರೆ ಮುಖದ ಕಾಂತಿ ಹೆಚ್ಚುತ್ತೆ. ರೋಸ್ ವಾಟರ್ ಗೆ ಜೇನುತುಪ್ಪ ಬೆರಸಿ ಹಚ್ಚಿದ್ರೆ ಮುಖದ ಕಾಂತಿ ಹೆಚ್ಚುತ್ತದೆ.

ಯಾರು ಚರ್ಮದ ಉರಿಯೂತದಿಂದ ಬಳಲುತ್ತಿರುತ್ತಾರೋ ಅಂತವರಿಗೆ ರೋಸ್ ವಾಟರ್ ಮೈಲ್ಡ್ ಟೋನರ್ ಆಗಿ ಕೆಲಸ ಮಾಡುತ್ತದೆ. ಇದು ಚರ್ಮವು ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತೆ. ತುರಿಕೆ, ಮೊಡವೆಗೆ ರೋಸ್ ವಾಟರ್ ರಾಮಬಾಣವಾಗಿದೆ.

ಚಳಿಗಾಲದಲ್ಲಿ ಒಣಚರ್ಮ, ಎಣ್ಣೆ ಚರ್ಮ ಮತ್ತು ಈ ಎರಡರ ಮಿಶ್ರ ಪ್ರಭಾವ ಒಳಗೊಂಡಿರುವವರು ರೋಸ್ ವಾಟರ್ ಬಳಸಿದರೆ ಒಳ್ಳೆಯ ರಿಸಲ್ಟ್ ಕೊಡುತ್ತದೆ.

ಇನ್ನು ಎಣ್ಣೆಯ ಚರ್ಮ ಇರುವವರಿಗೆ ಚರ್ಮದ ಒಳಭಾಗದ ರಂಧ್ರಗಳಿಂದ ಎಣ್ಣೆಯಂಶ ಸ್ರವಿಸಿ ಚರ್ಮದ ಮೇಲ್ಬಾಗದಲ್ಲಿ ಬಂದು ಶೇಖರಣೆಯಾಗುತ್ತದೆ. ಹೀಗಾಗಿ ಚರ್ಮಕ್ಕೆ ಅಗತ್ಯವಾಗಿ ಬೇಕಾದ ತೇವಾಂಶ ಹಾಗೆ ಉಳಿಯುತ್ತದೆ. ಇದು ಕೆಲವರಿಗೆ ಬ್ಲಾಕ್ಲಡ್ ಅಥವಾ ಮೊಡವೆಗಳ ಸಮಸ್ಯೆಯನ್ನು ಉಂಟುಮಾಡಬಹುದು. ಇದರಿಂದ ಪಾರಾಗಲುನಮ್ಮ ಮುಖದ ಭಾಗವನ್ನು ರೋಸ್ ವಾಟರ್ ನಿಂದ ಸ್ವಚ್ಛ ಮಾಡಿ ಕೊಳ್ಳಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು