News Karnataka Kannada
Monday, May 13 2024
ಅಂಕಣ

ನಮ್ಮವರ ಜೊತೆ ಒಂದಷ್ಟು ಸಮಯ ಕಳೆಯೋಣ

Untitled 2 Recovered Recovered Recovered
Photo Credit :

ಸಂಡೆ ಇಸ್ ಫ್ಯಾಮಿಲಿ ಟೈಮ್ ಎನ್ನುವ ಪರಿಕ್ಪನೆ ಯುಗದಲ್ಲಿ ನಾವೀಗ ಬದುಕುತ್ತಿದ್ದೇವೆ. ಒಂದು ಕಾಲದಲ್ಲಿ ಮನೆಯೊಂದರಲ್ಲಿ ನೂರು ಜನ ಅಥವ ತುಂಬಿದ ಕುಟುಂಬ, ಕೂಡು ಕುಟುಂಬ ಎನ್ನುವ ಪರಿಕಲ್ಪನೆ ಜೀವಂತಿಕೆ ಇರುವುದು ಬಹಳ ವೀರಳವಾಗಿದೆ.

ನಗರದ ಯಾಂತ್ರಿಕ ಬದುಕು ಎಲ್ಲವನ್ನು ಕಸಿದು ಕೊಂಡಿತ್ತು ಎಂದು ಕೆಲವರ ನಂಬಿಕೆಯಾದರೆ, ಇನ್ನು ಕೆಲವರ ಪ್ರಕಾರ ಯೋಚನೆ ಮಾಡುವ ರೀತಿ ಬದಲಾಗಿದೆ. ನಾನು ಮತ್ತು ನನ್ನ ಕುಟುಂಬ ಎಂಬ ಇಡಿಂಪೆಡೆನ್ಟ್ ಲೈಫ್ ಹೆಚ್ಚಾಗಿದೆ.

ಫ್ಯಾಮಿಲಿ ಅಂದಾಕ್ಷಣ ನೆನಪಾಗುವುದು ನಮ್ಮ ಮನೆ ಮತ್ತು ಮನೆ ಮಂದಿ. ಒಂದಿಷ್ಟು ಸಮಯ ಅವರೊಂದಿಗೆ ಕಳೆಯುವುದು ಈಗೀನ ಯಾಂತ್ರಿಕ ಬದುಕು ಇದಕ್ಕೆ ವಿರುದ್ದವಾಗಿ ನಮ್ಮನ್ನು ನಡೆಯುವಂತೆ ಮಾಡುತ್ತಿದೆ.

ನಮ್ಮವರ ಜೊತೆ ಒಂದಿಷ್ಟು ಸಮಯ ಕಳೆಯುವುದಕ್ಕೆ ಅವಕಾಶವನ್ನು ನೀಡುತ್ತಿಲ್ಲ.ಆದರೂ ಕೆಲವರು ಫ್ಯಾಮಿಲಿಯ ಮಹತ್ವ ಅರಿತವರು ಒಂದಿಷ್ಟು ಸಮಯ ಫ್ಯಾಮಿಲಿ ಜೊತೆ ಸಮಯ ಕಳೆಯಲು ತುಂಬಾನೆ ಪ್ರಯತ್ನ ಪಡುತ್ತಿರುತ್ತಾರೆ.

ವಾರದ ರಜಾದಿನ ಅಂದರೆ ಮಜಾದಿನ ಅಂದುಕೊಂಡು ಮನೆಮಂದಿಯೆಲ್ಲ ಹೊರಗಡೆ ಸುತ್ತುತಿರುತ್ತಾರೆ. ಸಿನಿಮಾ, ಪಾರ್ಕ್, ಮಾಲ್ ಶಾಪಿಂಗ್, ಪಾರ್ಟಿಸ್  ಹೀಗೆ ಊರೆಲ್ಲ ಸುತ್ತಿ ಕಡೆಗೆ ಒಂದು ಒಳ್ಳೆ ರೆಸ್ಟೋರೆಂಟ್ ನಲ್ಲಿ ಊಟ ಮಾಡಿ ಮನೆಗೆ ಭಾರವಾದ ಹೆಜ್ಜೆ ಹಾಕುವುದು ವಾಡಿಕೆ.

ಇದು ನಗರ ಪಟ್ಟಣಗಳಲ್ಲಿ ಕಾಣುವಂತಹ ದೃಶ್ಯ. ಆದರೆ ಹಳ್ಳಿ ಜನ ಮನೆ ಮಂದಿಯ ಜೊತೆಗೆ ಜಗಲಿ ಮೇಲೆ ಕೂತು ಹರಟೆ, ತಮಾಷೆ ಮಾತುಕತೆ ನಡೆಯುತ್ತದೆ. ಹೀಗ ತಮ್ಮ ಕುಟುಂಬದವರೆ ಜೊತೆ ಸಮಯ ಕಳೆಯಲು ಇಷ್ಟ ಪಡುತ್ತಾರೆ.

ಫ್ಯಾಮಿಲಿ ಜೊತೆ ಕ್ವಾಲಿಟಿ ಟೈಮ್ ಕಳೆಯಲು ಸಾಕಷ್ಟು ಅವಕಾಶವನ್ನು ಹುಡುಕುವವರಿಗೆ ಒಂದಿಷ್ಟು ಸಲಹೆ:

ಆದಷ್ಟು ಫ್ಯಾಮಿಲಿ ಜೋತೆ ಸಮಯವನು ಕಳೆಯುವುದು ಜೊತೆಗಿರುವುದು ನೋವಿನಲ್ಲು ಸುಖದಲ್ಲೂ ಸಹಭಾಗಿಯಿರುವುದು.

ಇನ್ನು ಕೆಲವರು ಮನೆಯಿಂದ ಹೊರಗೆ ಹೊಗಲು ಇಚ್ಚೆಪಡುತ್ತಾರೆ ಪ್ರತಿನಿತ್ಯ ಮನೆಕೆಲಸ, ಆಫೀಸ್ ಕೆಲಸ ಹೀಗೆ ಹತ್ತು ಹಲವು ವಿಷಯಗಳಲ್ಲಿ ಮುಳುಗಿರುವವರಿಗೆ ಮನೆಯಿಂದ ಆಚೆ ಹೋಗುವುದು ಕೊಂಚ ರಿಲಕ್ಸ್ ಆಗಬಹುದು.

ಮನೆಮಂದಿಯವರ ಜೊತೆ ಒಳ್ಳೆಯ ಸಂಬಂದವನ್ನು ಹೊಂದುವುದು ತುಂಬಾ ಅಗತ್ಯ.ಅದಕ್ಕಾಗಿ ಸಮಯ ಸಿಕ್ಕಾಗ ಎಲ್ಲರೊಂದಿಗೆ ಬೆರೆಯುವುದು ಉತ್ತಮ.ತಮ್ಮ ಅನುಭಗಳನ್ನು ಮನೆ ಮಂದಿಯವರೊಂದಿಗೆ ಹಂಚಿಕೊಳ್ಳುವುದರಿಂದ ಎಲ್ಲರ ಮನಸ್ಸು ತಿಳಿಯಾಗುತ್ತದೆ.

ಊಟದ ಸಮಯವನ್ನಯ ಫ್ಯಾಮಿಲಿ ಟೈಮ್ ಎನ್ನುತ್ತಾರೆ. ಅದಕ್ಕೆ ತಕ್ಕಂತೆ ಊಟ ಮಾಡುವಾಗ ಮನೆಮಂದಿ ಎಲ್ಲಾ ಒಟ್ಟಿಗೆ ಕೂತು ಊಟ ಮಾಡುವುದು ಒಳ್ಳೆಯದು.

ಸ್ವಲ್ಪ ಸಮಯ ಮಕ್ಕಳೊಂದಿಗೆ ಅಥಾವ ಮನೆಯ ಸದಸ್ಯರ ಜೊತೆ ಯಾವುದಾದರೊಂದು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು. ಸಣ್ಣಪುಟ್ಟ ಪಿಕ್‍ನಿಕ್, ಪಾರ್ಟಿ ಮಾಡುವುದು ಕೂಡ ಉತ್ತಮ.

ಹಬ್ಬಹರಿದಿನ,ಹುಟ್ಟು ಹಬ್ಬದ ಆಚರಣೆ, ಮದುವೆ ವಾರ್ಷಿಕೋತ್ಸವ ಹೀಗೆ ಇನ್ನಿತರ ವಿಶೇಷ ಸಂದರ್ಭಗಳನ್ನು ಆಚರಿಸುವುದರಿಂದ ಸಂಬಂಧಗಳು ಗಟ್ಟಿಯಾಗುತ್ತದೆ.

ಮನೆಮಂದಿಯಲ್ಲ ಒಟ್ಟಿಗೆ ವಾಕ್ ಹೋಗುವುದು ಜೊತೆಗೆ ಕೆಲವೊಂದು ವಿಷಯದ ಬಗ್ಗೆ ಚರ್ಚೆ ಮಾಡಲು ಸೂಕ್ತ ಸಮಯ. ಮನೆಮಂದಿಯ ಜೊತೆ ಬಾಂಧವ್ಯ ಹೆಚ್ಚಿಸಲು ಸಹಕಾರಿ.

ಮನೆಯ ಸಂಪ್ರಾದಾಯ ಆಚಾರಗಳನ್ನು ಚಾಚು ತಪ್ಪದೆ ಪಾಲಿಸಿಕೊಂಡು ಬಂದಲ್ಲಿ ಮನೆ ಸ್ವರ್ಗದಂತಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು