News Karnataka Kannada
Sunday, April 28 2024
ಅಂಕಣ

ನಮ್ಮ ಬದುಕು , ಜೀವನ ಎರಡು ನಮ್ಮ ಕೈಯಲ್ಲಿ ಇರಲಿ

Let our lives be in our hands!
Photo Credit :

ಜೀವನದಲ್ಲಿ ನಾವು ಕಲಿಯುವ ಪಾಠಕ್ಕಿಂತ ಇನ್ನೊಬ್ಬರು ನಮ್ಮಗೆ ಕಲಿಸಿಕೊಡುವ ಪಾಠ ಸಾಕಷ್ಟು. ಆ ಇನ್ನೊಬ್ಬರು ಯಾರು ಬೇಕಾದರು ಆಗಿರಬಹುದು . ಮನುಷ್ಯನನ್ನು ಕಿತ್ತು ತಿನ್ನುವುದು ಆತನ ಪ್ರಪಂಚದಲ್ಲಿ ಅವನು ನಿರ್ಲಕ್ಷಕ್ಕೆ ಒಳಗಾದಗ. ತನ್ನದೇ ಆದ ಸುಂದರ ಪ್ರಪಂಚದಲ್ಲಿ ಎಲ್ಲರಿಂದ ತುಳಿತಕ್ಕೆ ಒಳಾಗಾದಗ ಆತನನ್ನು ಜೀವಂತ ಹೆಣವಾಗಿಸಬಹುದು.

ಕಥೆ ಕಾದಂಭರಿಗಳಲ್ಲಿ ಬರುವ ಪಾತ್ರಗಳ ಹಾಗೆ ತ್ಯಾಗಮಯಿ ನಾಯಕ ನಾಯಕಿ ಆಗಿರುವುದು ಒಳ್ಳೆಯದಲ್ಲ. ಅದು ಯಾವಾಗ ಜಾಡಿಸಿ ಒದೆಯುತ್ತದೆ ಹೇಳಲು ಸಾಧ್ಯವಿಲ್ಲ. ಜೀವನದಲ್ಲಿ ಬರುವ ಎರುಪೇರು ಕಷ್ಟಗಳು ನಮ್ಮಗೆ ಯಾರು ನಮ್ಮವರು ಎಂದು ಪರಿಚಯಿಸುತ್ತದೆ. ಎಲ್ಲರನ್ನು ಗೌರವಿಸುವ , ಪ್ರೀತಿಸುವ ನಮಗೆ ಆ ಪ್ರೀತಿ ಸಿಗದೆ ಹೋದಾಗ ಜೀವನದ ಪಾಠ ನಿಜವಾಗಲು ಅರಿವಾಗುತ್ತದೆ.

ಅವನೊಬ್ಬ ಶ್ರಮ ಜೀವಿ ಹುಡುಗ. ಚೆನ್ನಾಗಿ ಓದಬೇಕು ಮುಂದೆ ಒಳ್ಳೆಯ ಕೆಲಸ ಗಿಟ್ಟಿಸಿ ಮನೆಯವರನ್ನೆಲ್ಲಾ ಚೆನ್ನಾಗಿ ನೋಡಿಕೋಳ್ಳಬೇಕೆಂಬ ಕನಸ್ಸನ್ನು ಕಟ್ಟಿಕೊಂಡವನು. ಮುಂದೆ ತಾನು ಅಂದು ಕೊಂಡಂತೆ ಕೆಲಸ ಕೂಡ ಸಿಕ್ಕಿತ್ತು . ಮನೆಯವರ ಸಂಪೂರ್ಣ ಜವಬ್ದಾರಿ ತೆಗೆದುಕೊಂಡಿದ್ದು ಆಯಿತ್ತು. ಜಬ್ದಾರಿಯುತ್ತಾ ಬದುಕಿನಲ್ಲಿ ಆತ ಬಹಳ ಖುಷಿಯಲ್ಲಿದ್ದ. ಮನೆಯವರ ಪ್ರತಿಯೊಂದು ಅವಶ್ಯಕತೆಯನ್ನು ಪೂರೈಸುತ್ತಿರುತ್ತಾನೆ. ಬಟ್ಟೆ, ಬಗೆಬಗೆಯ ತಿಂಡಿ, ಊರೆಲ್ಲಾ ತಿರುಗಾಟ, ಸಿನಿಮಾ ಹೀಗೆ ಬದುಕಲ್ಲಿ ಇವನಿಗೆ ಸಿಗದಿರುವುದೆಲ್ಲವನ್ನು ತನ್ನ ಮನೆಯವರಿಗೆ ಎಲ್ಲನೂ ಕೊಡಿಸುತ್ತಾನೆ.

ಆದರೆ ಬದುಕಿನ ಕರಾಳ ಮುಖವಾಡ ಒಂದು ದಿನ ಕಳಚಿ ಬಿತ್ತು. ದಿನ ಕಳೆದಂತೆ ಬಹುಶ: ಮನೆಯವರಿಗೆ ಅವಶ್ಯಕತೆ ಪೂರೈಸುವ ಕಾರ್ಮಿಕ ಆಳು ಆಗಿರುತ್ತಾನೆ. ಇಲ್ಲಿ ಇವನ ಮನೆಯವರಿಗೆ ಇವನು ಬೇಡ ಆದರೆ ಇವನ ಸಂಬಳ ಬೇಕು. ಒಂದು ದಿನ ಆತ ತೀವೃ ಜ್ವರದಲ್ಲಿ ಬಳಲುತ್ತಾನೆ. ಕೈ, ಕಾಲು, ಮೈ ಮುರಿದಂತಹ ಅನುಭವ . ಆದರೆ ಮನೆಯವರಿಗೆ ಇದು ಯಾವುದರ ಗೊಡವೆ ಇಲ್ಲ. ನರಳಾಟ ಯಾರಿಗೂ ಕೇಳಿಸದೆ ಹೋಯಿತ್ತು. ಮನೆಯ ಒಬ್ಬ ಸದಸ್ಯನಿಗೂ ಎನಾಗುತ್ತಿದೆ ನಿನನಗೆ ಕೇಳುವಷ್ಟು ತಾತ್ಸರ ಮನೋಭಾವಕ್ಕೆ ಒಳಾಗಾಯಿತ್ತು ಆ ಬಡ ಜೀವ.

ಕಡೆಗೂ ಕಥೆ ಕಾದಂಬರಿಗಳಲ್ಲಿ ಬರುವ ತ್ಯಾಗಮಯಿ ನಾಯಕ ನಾಯಕಿಯಂತಾಯಿತ್ತು ಜೀವನ. ನಮ್ಮ ಜೀವನ ನಮ್ಮ ಸೊತ್ತು ಆಗಿರಬೇಕು. ಬದುಕಿನ ಪ್ರತಿ ಕ್ಷಣವನ್ನು ಅನುಭಿವಿಸಬೇಕು. ನಮ್ಮ ಇಷ್ಟ ಕಷ್ಟಗಳ ಬಗ್ಗೆ ನಮಗೆ ಅರಿವಿರಬೇಕು. ನಮ್ಮ ಜೀವನ ಭಾವನತ್ಮಾಕ ಸಂಬಂಧಕ್ಕೆ ಕಟ್ಟು ಬಿದ್ದು ನರಳಬಾರದು.

ಮನೆಮಂದಿಯವರ ಕಾಳಜಿ ತೆಗೆದುಕೊಳ್ಳುವುದು ಉತ್ತಮವಾದ ಆದರೆ ಈ ಮಧ್ಯ ನಮ್ಮನ್ನು ನಾವು ಕಡೆಗಣೆಸುವುದು ಸೂಕ್ತವಲ್ಲ. ಉತ್ತಮ ಜೀವನ ಎಲ್ಲರ ಹಕ್ಕು ಅದನ್ನು ಪಡೆಯಲು ಶತಪ್ರಯತ್ನ ಅಗತ್ಯ. ನಮ್ಮನ್ನು ನಾವೇ ನಿರ್ಲಕ್ಷಿಸಿದರೆ ಇತರರು ಯಾರು ನಮ್ಮನ್ನು ಪ್ರೀತಿಸರು ಗೌರವಿಸರು. ನಮ್ಮ ಬಗ್ಗೆ ನಾವೇ ಕಾಳಜಿ ತೆಗೆದು ಕೊಳ್ಳುವುದು ಅಗತ್ಯ.

ಇತರರಿಂದ ಏನನ್ನು ಅಪೇಕ್ಷಿಸ ಬಾರದು. ನಮ್ಮ ಕರ್ತವ್ಯ ನಾವು ಉತ್ತಮವಾಗಿ ನಿರ್ವಹಿಸಿದ್ದೇವೆ ಎಂಬ ತೃಪ್ತ ಜೀವನ ಸಾಗಿಸಬೇಕು. ಮೈ, ಮನಸ್ಸು ಘಾಸಿಗೊಳಿಸುವವರಿಗೊಸ್ಕರ ಅಲ್ಲ ನಮ್ಮ ಬದುಕು. ನಮ್ಮ ಜೀವನ ನಮಗಾಗಿಯೇ ಹೋರತು ಸ್ವಾರ್ತಿಗಳಿಗಾಗಿ ಅಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು