News Karnataka Kannada
Thursday, May 02 2024
ವಿಶೇಷ

ಹೋದಲ್ಲಿ ಬಂದಲ್ಲಿ ಅತೃಪ್ತ ಪ್ರೇತ್ಮಾಗಳ ಹಾವಳಿ

If it comes, there will be a menace of dissatisfied pretmas
Photo Credit : Pixabay

ಇವರು ಸಾಮಾನ್ಯದವರಲ್ಲ. ಮೊದಮೊದಲು ಏನು ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ತುಂಬಾನೇ ಆತ್ಮೀಯತೆಯಿಂದ ಪ್ರೀತಿಯಿಂದ ಮಾತಾನಾಡುತ್ತಾರೆ. ತಮಗೆ ಒಪ್ಪದ ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡು ಒಂದಷ್ಟು ಮುಕ್ತ ಚರ್ಚೆಯನ್ನು ನಡೆಸಿ ನಮ್ಮ ವಿಸ್ವಾಸವನ್ನು ಗೆಲ್ಲುತ್ತಾರೆ.

ಮೊದಲೇ ಅರ್ಥಮಾಡಿಕೊಳ್ಳಬೇಕು ಇಂತವರನ್ನು. ಸರಿಯಾದ ಸಮಯಕ್ಕೆ ಇವರ ದುಷ್ಟತನವನ್ನು ಅರಿತರೆ ಒಳಿತು. ಒಂದು ಸಂದರ್ಭದಲ್ಲಿ ಸಲೀಸಾಗಿ ನಡೆಯುವ ಕೆಲಸ ಒಮ್ಮೆಲೆ ಸ್ಪೀಡ್ ಬ್ರೇಕರ್ ಹಾಕಿದಂತಾಗುತ್ತದೆ. ಒಮ್ಮೆಲೆ ಜೊತೆಗಿರುವವರನ್ನು ತುಚ್ಚವಾಗಿ ಕಾಣಬಹುದು. ತುಳಿಯುವಂತಹ ಪ್ರಯತ್ನ ನಿರಂತರವಾಗಿ ನಡೆಯುತ್ತಿರುತ್ತದೆ.

ಪ್ರಭಾವಿ ವ್ಯಕ್ತಿಗಳ ಸ್ನೇಹದಲ್ಲಿ ಅಥವಾ ಗುಡ್‌ ಲೂಕ್ಸ್ ನಲ್ಲಿ ಇರಲು ಸದಾ ಬಯಸುತ್ತಾರೆ. ಇದಕ್ಕಾಗಿ ಎಂತಹ ಚೀಪ್ ಪೊಲಿಟಿಕ್ಸ್ ಗೂ ರೆಡಿ. ಒಬ್ಬ ವ್ಯಕ್ತಿಯನ್ನು ಇನ್ನೊಬ್ಬರ ದೃಷ್ಟಿಯಲ್ಲಿ ಕೆಟ್ಟವರಾಗಿ ಬಿಂಬಿಸಲು ಶುರು ಮಾಡುತ್ತಾರೆ.

ಇಂತಹ ಅವಕಾಶಕ್ಕಾಗಿ ಕಾದು ಕುಳಿತ ಕೆಲವರು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಹೆಚ್ಚು. ಎಲ್ಲಿಯವರೆಗೆ ಇವರು ಹೇಳಿದ ಹಾಗೆ ಕೇಳುತೇವೆ ಅಲ್ಲಿಯವರೆಗೆ ನಾವು ತುಂಬಾ ಒಳ್ಳೆಯವರು ಆಗಿರುತ್ತೇವೆ. ಒಂದು ಸಣ್ಣ ತಪ್ಪು ತುಂಬಾನೇ ದೊಡ್ಡ ಅಪರಾಧವಾಗಬಹುದು. ನಿನ್ನೆಯವರೆಗೆ ನಮ್ಮ ಜೊತೆಗಿರುವವರು ಇಂದು ನಮ್ಮ ಜೊತೆ ಇರಲ್ಲ ಇವರು ಈ ಪೊಲಿಟಿಕ್ಸ್ ನ ಒಂದು ಭಾಗವಾಗಿರುತ್ತಾರೆ.

ತಾನೂ ಮಾಡುವ ಕೆಲಸಕ್ಕಿಂತ ಇನ್ನೊಬ್ಬರು ಮಾಡುವ ಕೆಲಸದ ಬಗ್ಗೆ ಹೆಚ್ಚು ಆಸಕ್ತಿ. ನಾನೂ ಈ ತರ ಮಾಡುತ್ತಿದ್ದೇನೆ ಇವರು ಈ ತರ ಮಾಡಬೇಕು ಎನ್ನುವ ಡೊಮಿನೇಟ್ ಮನೋಭಾವ. ಸಾಲದಕ್ಕೆ ಸಹಚರರನ್ನು ಎತ್ತಿಕಟ್ಟುವ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ.

ಮೇಲಾಧಿಕಾರಿಗಳಿಗೆ ತಾನೂ ಕೆಲಸ ಮಾಡುತ್ತಿದೇನೆ ಎಂದು ಪದೆ ಪದೇ ತೋರಿಕೆಯ ಮನೋಭಾವ ಇವರದಾಗಿರುತ್ತದೆ. ಇಂತವರು ಔದ್ಯೋಗಿಕ ಸ್ಥಳಗಳಲ್ಲಿ ಸಿಕ್ಕೆ ಸಿಗುತ್ತಾರೆ. ಇಂತವರನ್ನು ಸಹಿಸಿಕೋಳ್ಳಲು ಸಾಧ್ಯವಿದ್ದಲ್ಲಿ ಸಹಿಸಿಕೊಳ್ಳ ಬಹುದು. ಇಲ್ಲವಾದರೆ ಆರೋಗ್ಯವೇ ಭಾಗ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30655

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು