News Karnataka Kannada
Friday, May 03 2024
ವಿಶೇಷ

ಸೂರ್ಯಕಾಂತಿ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information about the sunflower crop
Photo Credit : Pixabay

ಸೂರ್ಯಕಾಂತಿ ಎಣ್ಣೆ ಬೀಜದ ಅತ್ಯಂತ ಪ್ರಮುಖ ಬೆಳೆಗಳಲ್ಲಿ ಒಂದಾಗಿದೆ. ಇದು ವಿಶ್ವದ ಸಸ್ಯಜನ್ಯ ಎಣ್ಣೆಯ ಪ್ರಮುಖ ಮೂಲವಾಗಿದೆ. ಪ್ರಪಂಚದಲ್ಲಿ ಎಣ್ಣೆಬೀಜ ಬೆಳೆಯುವ ಅತಿ ದೊಡ್ಡ ಉತ್ಪಾದಕ ದೇಶದಲ್ಲಿ ಭಾರತವು ಒಂದು. ಭಾರತೀಯ ಕೃಷಿ ಆರ್ಥಿಕತೆಯಲ್ಲಿ ಎಣ್ಣೆಕಾಳುಗಳು ಪ್ರಮುಖ ಸ್ಥಾನವನ್ನು ಹೊಂದಿದೆ. ಇತರ ಸಸ್ಯ ಜನ್ಯ ಎಣ್ಣೆಗಳಿಗೆ ಹೋಲಿಸಿದರೆ ಸೂರ್ಯಕಾಂತಿ ಎಣ್ಣೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಸೂರ್ಯಕಾಂತಿ ಎಣ್ಣೆಯ ಜೊತೆಗೆ ಇದರ ಬೀಜಗಳು ತುಂಬಾ ಉಪಯುಕ್ತವಾಗಿರುತ್ತದೆ.

ಸೂರ್ಯಕಾಂತಿ ಬೆಳೆಯುವ ರಾಜ್ಯಗಳು : ಹರಿಯಾಣ, ಪಂಜಾಬ್, ಗುಜರಾತ್, ತೆಲಂಗಾಣ,ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ ಇತ್ಯಾದಿ.

ಸೂಕ್ತವಾದ ಮಣ್ಣು ಮತ್ತು ಹವಾಮಾನ: ಸೂರ್ಯಕಾಂತಿ ಗಿಡಗಳಿಗೆ ಮೊಳಕೆಯೊಡೆಯುವ ಸಮಯದಲ್ಲಿ ತಂಪಾದ ವಾತಾವರಣ ಬೇಕಾಗುತ್ತದೆ. ಹಾಗೂ ಮೊಳಕೆಯ ಹಂತದಿಂದ ಹೂ ಬಿಡುವವರೆಗೂ ಬೆಚ್ಚಗಿನ ಹವಾಮಾನ ಮತ್ತು ಹೂ ಬಿಡುವ ಸಮಯದಲ್ಲಿಂದ ಪಕ್ವವಾಗುವರೆಗೂ ಬೆಚ್ಚಗಿನ ಮತ್ತು ಬಿಸಿಲಿನ ವಾತಾವರಣದ ಅಗತ್ಯವಿರುತ್ತದೆ.

ಇದು ಉತ್ತಮ ಒಳಚರಂಡಿ ಮತ್ತು ನೀರಾವರಿ ಸೌಲಭ್ಯಗಳೊಂದಿಗೆ ಆಳವಾದ ಲೋಮ್ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಈ ಗಿಡಗಳಿಗೆ ತೇವಾಂಶ ಪೂರೈಕೆಯೊಂದಿಗೆ ಚನ್ನಾಗಿ ಪುಡಿಮಾಡಿದ ಕಳೆ ಮುಕ್ತ ಭೂಮಿಯ ಅಗತ್ಯವಿದೆ.

ನೀರಾವರಿ ನಿರ್ವಹಣೆ: ಸೂರ್ಯಕಾಂತಿ ಕೃಷಿಯಲ್ಲಿ ಖಾರಿಫ್ ಬೆಳೆಗೆ ನೀರಾವರಿಯ ಅಗತ್ಯ ಇರುವುದಿಲ್ಲ. ಆದಾಗಿಯೂ ಮಳೆಯ ಅಸಮಾನ ಹಂಚಿಕೆಯ ಸಂದರ್ಭದಲ್ಲಿ ಒಂದು ನೀರಾವರಿ ನೀಡಬಹುದು. ಬೇಸಿಗೆಯಲ್ಲಿ ಬೆಳೆಗೆ ನೀರಾವರಿ ಅಗತ್ಯವೂ ತುಲನಾತ್ಮಕವಾಗಿ ಹೆಚ್ಚಾಗಿರುತ್ತದೆ.

ಅರೋಗ್ಯ ಪ್ರಯೋಜನಗಳು:
# ದೈಹಿಕ ಉರಿಯೂತವನ್ನು ಕಡಿಮೆಗೊಳಿಸುತ್ತದೆ
# ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆಗಳನ್ನು ಕಡಿಮೆ ಮಾಡುತ್ತದೆ
# ಮಧುಮೇಹಕ್ಕೆ ಪ್ರಯೋಜನಕಾರಿ
# ದೇಹದ ರೋಗನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ
# ಕ್ಯಾನ್ಸರ್ ಸಂಭಾವನೆಯನ್ನು ಕಡಿಮೆ ಮಾಡುತ್ತದೆ
# ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು