News Karnataka Kannada
Sunday, April 14 2024
Cricket
ವಿಶೇಷ

ಸ್ಟ್ರಾಬೆರಿ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information you have about the strawberry crop
Photo Credit : Pixabay

ಸ್ಟ್ರಾಬೆರಿ ಭಾರತದ ಪ್ರಮುಖ ಹಣ್ಣಿನ ಬೆಳೆಯಲ್ಲಿ ಒಂದಾಗಿದೆ. ಇದರ ವಾಣಿಜ್ಯ ಉತ್ಪಾದನೆಯು ದೇಶದ ಸಮಶೀತೋಷ್ಟನ ಮತ್ತು ಉಪೋಷ್ಣ ವಲಯದ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಾಗಿದೆ.

ಭಾರತದಲ್ಲಿ ಇದನ್ನು ಸಾಮಾನ್ಯವಾಗಿ ಬೆಟ್ಟಗಳಲ್ಲಿ ಬೆಳೆಸಲಾಗುತ್ತದೆ. ಇದರ ಮುಖ್ಯ ಕೃಷಿ ಕೇಂದ್ರವು ಉತ್ತರಪ್ರದೇಶ,ಮಹಾಬಲೇಶ್ವರ, ಕಾಶ್ಮೀರ, ಮುಂತಾದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪುಣೆ, ನಾಸಿಕ್ , ಮುಂತಾದ ಬಯಲು ಪ್ರದೇಶಗಳಲ್ಲಿಯೂ ಬೆಳೆಯುತ್ತಾರೆ. ಸ್ಟ್ರಾಬೆರಿ ಕೆಂಪು ಬಣ್ಣವನ್ನು ಹೊಂದಿರುವುದರಿಂದ ಇದನ್ನು ಐಸ್ಕ್ರಿಮ್ , ಜಾಮ್ ಜ್ಯೂಸ್, ಮಿಲ್ಕ್ ಶೇಕ್ ತಯಾರಿಸಲು ಹೆಚ್ಚಾಗಿ ಬಳಸುತ್ತಾರೆ.

ಸ್ಟ್ರಾಬೆರಿ ಬೆಳೆಗೆ ಸೂಕ್ತವಾದ ಮಣ್ಣು ಮತ್ತು ಹವಾಮಾನ: ಸಮಶೀತೋಷ್ಟನ ಹವಾಮಾನದಲ್ಲಿ ಸ್ಟ್ರಾಬೆರಿ ಉತ್ತಮ ಬೆಳೆಯಾಗಿ ಬೆಳೆಯಬಹುದು. ಇದು ಕೆಡಿಮೆ ದಿನದ ಸಸ್ಯವಾಗಿದ್ದು ಹೂ ಬಿಡಲು ಸುಮಾರು ಹತ್ತು ದಿನಗಳವರೆಗೆ 8 ಗಂಟೆಗಳಿಗಿಂತಲೂ ಕಡಿಮೆ ಬೆಳಕು ಬೇಕಾಗುತ್ತದೆ.

ಸ್ಟ್ರಾಬೆರಿಗೆ ಸಾವಯವ ಪದಾರ್ಥ ಹೊಂದಿರುವ ಲೋಮ್ ಮಣ್ಣು ಬೇಕಾಗುತ್ತದೆ. ಸ್ಟ್ರಾಬೆರಿ ಗಿಡದ ಬೇರಿನ ರಚನೆ ತುಂಬಾ ಕೆಳಪೆಯಾಗಿರುವುದರಿಂದ ಮಣ್ಣಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುವುಕೆಯು ಎಳೆಗಳ ಹಳದಿ ಬಣ್ಣಕ್ಕೆ ಕಾರಣವಾಗುತ್ತದೆ. ಹಗುರವಾದ ಮಣ್ಣಿನಲ್ಲಿ ಮತ್ತು ಸಾವಯವ ಪದಾರ್ಥಗಳು ಹೆಚ್ಚು ಇದ್ದಲ್ಲಿ ಗಿಡ ಉತ್ತಮವಾಗಿ ಬೆಳೆಯುತ್ತದೆ.

ಸ್ಟ್ರಾಬೆರಿಗೆ ನೀರಾವರಿ ಅವಶ್ಯಕತೆ: ಸ್ಟ್ರಾಬೆರಿ ಒಂದು ಅಳವಿಲ್ಲದೆ ಬೇರೂರುವ ಸಸ್ಯವಾಗಿದ್ದು ಪ್ರತಿ ನೀರಾವರಿಯಲ್ಲೂ ಹೆಚ್ಚು ಕೆಡಿಮೆ ನೀರಾವರಿ ಬೇಕಾಗುತ್ತದೆ. ಅತಿಯಾದ ನೀರಾವರಿಯು ಹಣ್ಣು ಮತ್ತು ಹೂಗಳನ್ನು ಕೊಳೆಯುವಂತೆ ಮಾಡುತ್ತದೆ.

ಆರೋಗ್ಯ ಪ್ರಯೋಜನಗಳು :
# ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
# ಫೈಬರ್ ಅನ್ನು ಒಳಗೊಂಡಿದ್ದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ
# ಕಣ್ಣುಗಳ ಆರೋಗ್ಯಕ್ಕೆ ಉತ್ತಮ
#ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ
# ಉರಿಯೂತವನ್ನು ಕೆಡಿಮೆ ಮಾಡುತ್ತದೆ
# ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ
# ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು