News Karnataka Kannada
Saturday, May 04 2024
ವಿಶೇಷ

ಪಪ್ಪಾಯ ಹಣ್ಣಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

Here's some information about the papaya fruit crop
Photo Credit : Pixabay

“ಕಾರಿಕಾ ಪಪ್ಪಾಯ” ಎಂದು ಕರೆಯಲ್ಪಡುವ ಪಪ್ಪಾಯ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶ ಹಾಗೂ ಔಷಧೀಯ ಗುಣ ಹೊಂದಿದ್ದು ವಾಣಿಜ್ಯ ಬೆಳೆಯ ಪ್ರಾಮುಖ್ಯತೆಯನ್ನು ಹೊಂದಿದೆ. ಪಪ್ಪಾಯ ಕೃಷಿ ದಕ್ಷಿಣ ಮೆಕ್ಸಿಕೋ ದಲ್ಲಿ ಈ ಹಣ್ಣಿನ ಮೂಲವನ್ನು ಹೊಂದಿದೆ. ಈ ಹಣ್ಣು ಇತರ ಹಣ್ಣು ಗಳಿಗೆ ಹೋಲಿಸಿದರೆ ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಹಣ್ಣುಗಳನ್ನು ಉತ್ಪಾದಿಸುತ್ತದೆ. ಗುಡ್ಡಗಾಡು ರಾಜ್ಯಗಳ ಪೈಕಿ ಮಿಜೋರಾಂ ಈ ಬೆಳೆಯಲ್ಲಿ ಹೆಚ್ಚಿನ ಪ್ರದೇಶವನ್ನು ಹೊಂದಿದೆ. ನಂತರದ ಸ್ಥಾನಗಳಲ್ಲಿ ತ್ರಿಪುರ ಹಾಗೂ ಮಣಿಪುರಗಳಿವೆ.

ಪಪ್ಪಾಯ ಹಣ್ಣನ್ನು ಭಾರತಕ್ಕೆ 16ನೆ ಶತಮಾನದಲ್ಲಿ ಪರಿಚಯಿಸಲಾಯಿತು. ಭಾರತವು  ಪಪ್ಪಾಯ ಉತ್ಪಾದನೆಯಲ್ಲಿ ವಿಶ್ವದಲ್ಲಿ ಮುಂಚೂಣಿಯಲ್ಲಿದ್ದು, ವಾರ್ಷಿಕವಾಗಿ ಸುಮಾರು ೩ ಮಿಲಿಯನ್ ಟನ್ ಪಪ್ಪಾಯ ಉತ್ಪಾದನೆಯಾಗುತ್ತದೆ. ಭಾರತದ ಜೊತೆಗೆ ಇತರ ದೇಶಗಳಾದ ಬ್ರೆಜಿಲ್ , ನೈಜೀರಿಯಾ, ಪೆರು, ಥೈಲ್ಯಾಂಡ್, ಚೀನಾ ಇತ್ಯಾದಿ ದೇಶಗಳು ಪಪ್ಪಾಯಿ ಬೆಳೆಯನ್ನು ಬೆಳೆಯುತ್ತಿವೆ.

ಹವಾಮಾನದ ಅವಶ್ಯಕತೆ : ಪಪ್ಪಾಯ ಮೂಲತಃ ಉಷ್ಣವಲಯದ ಸಸ್ಯವಾಗಿದ್ದು, ಆದಾಗಿಯೂ ಉಪೋಷ್ಣವಲಯದ ಸಸ್ಯ ವಾಗಿಯೂ ಬೆಳೆಯುತ್ತಾರೆ. ಇದನ್ನು ಸಮುದ್ರ ಮಟ್ಟದಿಂದ 100 ಮೀಟರ್ ಎತ್ತರಕ್ಕೆ ಬೆಳೆಸಬಹುದು. ಪಪ್ಪಾಯ ಹಣ್ಣು ಮಾಗಿದ ಅವಧಿಯಲ್ಲಿ ಬೆಚ್ಚಗಿನ ಮತ್ತು ಶುಷ್ಕ ವಾತಾವರಣದ ಅಗತ್ಯವಿದೆ. ಈ ಗಿಡಗಳು ಕೋಮಲ ಮತ್ತು ಅಳವಿಲ್ಲದೆ ಬೇರೂರಿರುವ ಸಸ್ಯವಾಗಿರುವುದರಿಂದ ಇದು ಬಲವಾದ ಗಾಳಿಯನ್ನು ತಡೆದುಕೊಳ್ಳುವುದಿಲ್ಲ.

ಮಣ್ಣಿನ ಅವಶ್ಯಕತೆ : ಮರಳು, ಮತ್ತು ಜಿಗುಟಾದ ಅಥವಾ ಭಾರಿ ಜೇಡಿಮಣ್ಣಿನ ಮಣ್ಣು ಹೊರತುಪಡಿಸಿ ಪಪ್ಪಾಯಿಯನ್ನು ಹಲವು ರೀತಿಯ ಮಣ್ಣಿನಲ್ಲಿ ಬೆಳೆಸಬಹುದು. ಮಳೆಗಾಲದ ಸಮಯದಲ್ಲಿ ಗಿಡದ ಕೆಳಗೆ ಹೆಚ್ಚಿನ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಒಂದು ವೇಳೆ ನೀರು ನಿಂತಲ್ಲಿ ಅದನ್ನು ಆ ಕೂಡಲೇ ಅಲ್ಲಿಂದ ನೀರನ್ನು ಖಾಲಿಮಾಡಬೇಕಾಗುತ್ತದೆ ಇಲ್ಲವಾದಲ್ಲಿ ಗಿಡದ ಬೇರುಗಳು ಕೊಳೆಯುವ ಸಾಧ್ಯತೆಗಳಿರುತ್ತದೆ.

ಅರೋಗ್ಯ ಪ್ರಯೋಜನಗಳು: ಪಪ್ಪಾಯದಲ್ಲಿ ಹೆಚ್ಚಿ ಪೌಷ್ಟಿಕಾಂಶಗಳು ಇರುವುದರಿಂದ ಇದು ದೇಹಕ್ಕೂ ಆರೋಗ್ಯಕ್ಕೂ ತುಂಬಾ ಉತ್ತವಾದ ಹಣ್ಣಾಗಿದೆ.
# ತೂಕನಷ್ಟಕ್ಕೆ ಸಹಾಯ ಮಾಡುತ್ತದೆ
# ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
# ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತದೆ
# ಹೃದಯ ಆರೋಗ್ಯವನ್ನು ಕಾಪಾಡುತ್ತದೆ
# ತ್ವಚೆಗೆ ಹೊಳಪನ್ನು ನೀಡುತ್ತದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು