News Karnataka Kannada
Tuesday, May 07 2024
ಅಂಕಣ

ಮನೆಯಲ್ಲಿಯೇ ನೈಲ್ ಆರ್ಟ್ ಮಾಡಿಕೊಳ್ಳಲು ಇಲ್ಲಿದೆ ಸಲಹೆ

Here's a tip to do nail art at home
Photo Credit : Freepik

ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಅನ್ನೊ ಪದ ಸಾಮಾನ್ಯ ಆಗಿಬಿಟ್ಟಿದೆ. ಜನರು ಟ್ರೆಂಡ್ ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ನೈಲ್ ಆರ್ಟ್ ಅನ್ನೋದು ಕೂಡ ಟ್ರೆಂಡ್ ಅನ್ನು ಹೊರತಾಗಿಲ್ಲ. ನೈಲ್ ವಿಚಾರದಲ್ಲಿ ಟ್ರೆಂಡ್ ಅನ್ನೋದು ಬದಲಾಗುತ್ತಾ ಇರುತ್ತದೆ. ಮೊದಲು ಉದ್ದುದ್ದ ಉಗುರು ಬಿಟ್ಟು ಅದಕ್ಕೆ ಪ್ಲೇನ್ ನೈಲ್ ಪಾಲಿಶ್‌ಗಳು ಹಾಕುತ್ತಿದ್ದದ್ದನ್ನು ನಾವು ನೋಡಿದ್ದೇವೆ. ಆದರೆ ಈಗ ಕಾಲ ಬದಲಾಗಿದೆ . ಪ್ಲೇನ್ ನೈಲ್ ಪಾಲಿಶ್ ಬದಲಿಗೆ ನೈಲ್ ಆರ್ಟ್ ಫ್ಯಾಷನ್ ಈಗ ಯುವತಿಯರನ್ನು ಆಕರ್ಷಿಸುತ್ತಿದೆ.

ಸಾಮಾನ್ಯವಾಗಿ ನೈಲ್ ಆರ್ಟ್ ಅನ್ನು ಎಲ್ಲಾ ಯುವತಿಯರು ಇಷ್ಟ ಪಡುತ್ತಾರೆ. ಆದರೆ ಎಲ್ಲರಿಗೂ ನೈಲ್ ಆರ್ಟ್ ಮಾಡಿಕೊಳ್ಳೋದಕ್ಕೆ ಆಗೋದಿಲ್ಲ ಅಂತವರು, ಪಾರ್ಲರ್‌ಗಳಿಗೆ ಅಥವಾ ನೈಲ್ ಆರ್ಟ್ ಮಾಡುವಂತಹ ಶಾಪ್‌ಗಳಿಗೆ ಭೇಟಿ ಕೊಟ್ಟು ತಮ್ಮ ಉಗುರಿಗೆ ಬೇಕಾದಂತಹ ಆರ್ಟ್ ಬಿಡಿಸಿಕೊಳ್ಳಬಹುದು.

ಈಗ ನೈಲ್ ಆರ್ಟ್ ಅನ್ನು ಮನೆಯಲ್ಲೇ ಮಾಡಿಕೊಳ್ಳುವ ಇಚ್ಛೆ ಇರುವವರಿಗಾಗಿ ಕೆಲವೊಂದು ಫ್ಯಾನ್ಸಿ ಸ್ಟೋರ್ಸ್‌ಗಳಿಂದ ನೈಲ್ ಆರ್ಟ್ ಮಾಡಲು ಬೇಕಾಗುವ ಸಲಕರಣೆಗಳು, ಅದಕ್ಕೆ ಬಳಸುವ ವಿಶೇಷ ನೈಲ್ ಪಾಲಿಶ್‌ಗಳು , ಸ್ಟೋನ್ಸ್ , ಸ್ಟಿಕ್ಕರ್ಸ್ ,ಬ್ರೆಶ್ ಇಂತಹ ಎಲ್ಲಾ ಸಲಕರಣೆಗಳು ಸಿಗುತ್ತದೆ.

ನೈಲ್ ಆರ್ಟ್ ಮಾಡೊದನ್ನು ಕಲಿಬೇಕು ಅನ್ನೋರಿಗೆ ಇಂದು ಯೂಟ್ಯೂಬ್ ಚಾನೆಲ್ ಗಳು ಸಹಕಾರಿಯಾಗುತ್ತದೆ. ಏಕೆಂದರೆ ನೈಲ್ ಆರ್ಟ್ ಗೆ ಸಂಬಂಧ ಪಟ್ಟಂತೆ ಅನೇಕ ಯೂಟ್ಯೂಬ್ ಚಾನೆಲ್ ಗಳನ್ನು ನಾವಿಂದು ನೋಡಬಹುದು. ಜೊತೆಗೆ ಇದು ಸಹಕಾರಿಯೂ ಹೌದು. ಸಿಂಪಲ್ ನೈಲ್ ಆರ್ಟ್ ನಿಂದ ಹಿಡಿದು ಕ್ರಿಟಿಕಲ್ ಆರ್ಟ್ ವರೆಗೂ ನಾವಿಲ್ಲಿ ನೋಡಬಹುದು ಮತ್ತು ಕಲಿಯ ಬಹುದು. ಆದ್ದರಿಂದಲೇ ಈಗ ತಮಗೆ ತಾವೇ ನೈಲ್ ಆರ್ಟ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಪಾರ್ಲರ್ ಗಳಿಗೆ ಹೋಗಿ ಅಲ್ಲಿ ಹಣಕೊಟ್ಟು ಮಾಡಿಸೋರ ಸಂಖ್ಯೆ ಗಣನೀರವಾಗಿ ಕಡಿಮೆ ಆಗಿದೆ.

ಈ ನೈಲ್ ಆರ್ಟ್ ಮೊದಮೊದಲು ಕೇವಲ ಸೆಲೆಬ್ರೆಟಿಗಳಿಗೆ ಮೀಸಲಾಗಿತ್ತು, ಆದರೆ ಈಗ ಎಲ್ಲರು ಈ ಟ್ರೆಂಡನ್ನು ಫಾಲೋ ಮಾಡುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು