News Karnataka Kannada
Saturday, May 04 2024
ಪರಿಸರ

ನವಣೆ ಕೃಷಿ ಬಗ್ಗೆ ಇಲ್ಲಿದೆ ಕೆಲವೊಂದು ಮಾಹಿತಿ

Here are some information about Foxtail millet cultivation
Photo Credit : Pixabay

ಫಾಕ್ಸ್ ಟೇಲ್ ಎಂದು ಕರೆಯಲ್ಪಡುವ ನವಣೆ ಏಷ್ಯಾ ದೇಶಗಳು ಮತ್ತು ಆಫ್ರಿಕಾ ದೇಶದಲ್ಲಿ ಬೆಳೆಯುವ ಅತ್ಯಂತ ಹಳೆಯ ಬೆಳೆಗಳಲ್ಲಿ ಒಂದಾಗಿದೆ. ಹೆಚ್ಚಾಗಿ ಪಕ್ಷಿಗಳಿಗೆ ಆಹಾರವಾಗಿ, ಜಾನುವಾರುಗಳಿಗೆ ಮೇವಾಗಿ ಬಳಸುತ್ತಾರೆ. ನವಣೆ ಬೆಳೆಯು ಪ್ರಸ್ತುತ ಚೀನಾ, ಭಾರತ, ಜಪಾನ್, ಇಂಡೋನೆಷ್ಯಾ, ಕೊರಿಯಾಗಳಲ್ಲಿ ಬೆಳೆಯಲಾಗುತ್ತದೆ.

ರಚನೆ

ಇವು ತೆಳ್ಳಗಿನ ಗಿಡವಾಗಿ ಬೆಳವಣಿಗೆ ಹೊಂದುತ್ತದೆ. 4 ರಿಂದ 6.5 ಅಡಿ ಎತ್ತರಕ್ಕೆ ಬೆಳೆಯುವ ನವಣೆ ಗಿಡದ ತುದಿಯಲ್ಲಿ ತುಂಬಾ ನವಣೆಯ ತೆನೆಗಳನ್ನು ಹೊಂದಿರುತ್ತದೆ.

ನವಣೆ ಬೇಸಾಯಕ್ಕೆ ಮಣ್ಣಿನ ಅವಶ್ಯಕತೆ ಮತ್ತು ಹವಾಮಾನ

ನವಣೆ ದೇಶದ ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶದಲ್ಲಿ ಬೆಳೆಯಬಹುದಾಗಿದೆ. ಬರ ಪರಿಸ್ಥತಿಯಲ್ಲೂ ಈ ಬೆಳೆ ಚನ್ನಾಗಿ ಬೆಳೆಯುತ್ತದೆ. ಕಡಿಮೆ ನೀರಿನ ಮೂಲ ಹೊಂದಿರುವ ಕಡೆ ಜನರು ಈ ಬೆಳೆಗೆ ಮೊರ ಹೋಗಬಹುದು. ಬೀಜಗಗಳ ಮೂಲಕ ಬಿತ್ತುವ ಈ ನವಣೆ ಬೆಳೆ ಒಂದೆರಡು ಆಳವಾದ ಉಳುಮೆ ನೀಡುವ ಮೂಲಕ ಇಳುವರಿ ಪಡೆಯಬಹುದು.

ಬಿತ್ತನೆಗೆ ಸೂಕ್ತವಾದ ಸಮಯವೆಂದರೆ ಮಳೆ ಮಿಶ್ರಿತ ಬೆಳೆಗೆ ಜೂನ್ ನಿಂದ ಆಗಸ್ಟ್ ವೆರಗೆ ಹಾಗೂ ಬೇಸಿಗೆ ನೀರಾವರಿ ಬೆಳೆಗೆ ಜನವರಿ ಉತ್ತಮ ಸಮಯವಾಗಿದೆ. ನವಣೆ ಬೆಳೆಯನ್ನು ವೈವಿಧ್ಯಕ್ಕೆ ಅನುಗುಣವಾಗಿ ಬಿತ್ತನೆ ಮಾಡಿದ 70 ರಿಂದ 75 ದಿನಗಳ ನಂತರ ಹುಲ್ಲಿಗಾಗಿ ಕೊಯ್ಲು ಮಾಡಬಹುದಾಗಿದೆ. 85 ರಿಂದ 95 ದಿನಗಳಲ್ಲಿ ಬೀಜಗಳು ಉತ್ಪಾದನೆಗೊಳ್ಳುತ್ತದೆ.

ನವಣೆಯಲ್ಲಿ ಆಹಾರ ಪ್ರಯೋಜನಗಳು

• ನವಣೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಉತ್ತಮ ಆಹಾರವಾಗಿದೆ.
• ನವಣೆಯ ನಿಯಮಿತ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗದ ರೀತಿಯಲ್ಲಿರಿಸಿಕೊಳ್ಳಬಹುದು.
• ಹೃದಯದ ತೊಂದರೆಯನ್ನು ಕಡಿಮೆ ಮಾಡುತ್ತದೆ.
• ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆಮಾಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು