News Karnataka Kannada
Monday, April 29 2024
ಪರಿಸರ

ಅಡಿಕೆ ಬೆಳೆ: ಆರೈಕೆ ಮತ್ತು ಪೋಷಣೆ ಮಾಡುವುದು ಹೇಗೆ

Arecanut Crop: Care and Nutrition
Photo Credit : Pixabay

ಅರೆಕಾನಟ್ಸ್ ಅಥವಾ ಬೀಟಲ್ ನಟ್ಸ್ ಎಂದು ಕರೆಯಲ್ಪಡುವ ಅಡಿಕೆ ದಕ್ಷಿಣ ಭಾರತದ ಬಹು ಮುಖ್ಯ ಬೆಳೆಗಳಲ್ಲಿ ಒಂದಾಗಿದೆ. ನಮ್ಮ ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಯಾವುದೆ ಶುಭ ಸಂದರ್ಭದಲ್ಲಿ ಈ ಅಡಿಕೆ ಹಾಗೂ ವೀಳ್ಯದೆಲೆ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೂ ಇದನ್ನು ಶುಭ ಸೂಚಕವೆಂದು ಪರಿಗಣಿದಲಾಗುತ್ತದೆ.

ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾಗಿ ಹಾಗೂ ಶ್ರೀಲಂಕಾ, ಭಾರತ ಇಂಡೋನೇಶಿಯಾ, ಬಾಂಗ್ಲಾದೇಶಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ.

ಅಡಿಕೆಯ ತಳಿಗಳು

ಎರಡು ವಿಧದ ಮುಖ್ಯ ತಳಿಗಳನ್ನು ಬೆಳೆಸಲಾಗುತ್ತದೆ.

ಬಿಳಿ ಅಡಿಕೆ: 2ತಿಂಗಳ ಕಾಲ ಸಂಪೂರ್ಣವಾಗಿ ಮಾಗಿದ ಕಾಯಿಗಳನ್ನು ಬಿಸಿಲಿನಲ್ಲಿ ಒಣಗಿಸಿ ಪಡೆಯಲಾಗುತ್ತದೆ.

ಕೆಂಪು ಅಡಿಕೆ: ಅರ್ಧ ಹಣ್ಣಾದ ಹಸಿರು ಕಾಯಿಗಳನ್ನು ಕೊಯ್ಲು ಮಾಡಿ ಕುದಿಸಿ ನಂತರ ಸಿಪ್ಪೆ ತೆಗೆಯುವ ಮೂಲಕ ತಯಾರು ಮಾಡಲಾಗುತ್ತದೆ.

ಅಡಿಕೆ ಬೆಳೆಯು ಉಷ್ಣ ವಲಯದ ಪ್ರದೇಶದಲ್ಲಿ ಚನ್ನಾಗಿ ಬೆಳೆಯುತ್ತದೆ. ಏಕೆಂದರೆ ಇದು ಶೀತವನ್ನು ಸಹಿಸುವುದಿಲ್ಲ, ಈ ಅಡಿಕೆ ಗಿಡಗಳು ತಾಳೆ ಕುಟುಂಬಕ್ಕೆ ಸೇರಿವೆ. ಇದು 50- 70 ಅಡಿ ಎತ್ತರದವರೆಗೆ ಬೆಳೆಯಬಹುದು. ಮಧ್ಯಮ ಗಾತ್ರದ ಕಡು ಹಸಿರು ಬಣ್ಣದ ಎಲೆಗಳನ್ನು ಹೊಂದಿರುತ್ತದೆ. ಇದು ಏಕ ಬೀಜದ ಹಣ್ಣುಗಳನ್ನು ಹೊಂದಿದ್ದು ಕೊಯ್ಲು ನಂತರ ಅದನ್ನು ಸಂಸ್ಕರಿಸಿ ಬೀಜಗಳನ್ನು ತೆಗೆಯಲಾಗುತ್ತದೆ.

ಬೀಜ ಪ್ರಸರಣ ಅಥವಾ ಕಸಿ ವಿಧಾನವನ್ನು ಬಳಸಿಕೊಂಡು ಅಡಿಕೆ ಗಿಡವನ್ನು ಬೆಳೆಸಬಹುದು. ಅಡಿಕೆಯನ್ನು ಬೆಳೆಸಲು ನೇರವಾಗಿ ಬೀಜಗಳನ್ನು ಉತ್ತಮ ಸ್ಥಳದಲ್ಲಿ ನಾಟಿ ಮಾಡಬೇಕು ಮತ್ತು ಮೊಳಕೆಯೊಡೆದು ಗಿಡ ಬಂದ ನಂತರ ಅಲ್ಲಿಂದ ನಮಗೆ ಬೇಕಾದ ಸ್ಥಳಗಳಲ್ಲಿ ನಾಟಿ ಮಾಡಬೇಕು. ಈ ರೀತಿಯ ವಿಧಾನದಲ್ಲಿ ಹೆಚ್ಚು ಸಮಯಾವಕಾಶ ಬೇಕಾಗಿರುವುದರಿಂದ ಆರೋಗ್ಯಕರ ಗಿಡಗಳನ್ನು ನರ್ಸರಿಯಿಂದ ಖರೀದಿಸಬಹುದು.

ಅಡಿಕೆ ಮರ ಬೆಳೆಯಲು ಕೆಲವು ಅಗತ್ಯತೆಗೆಳು

ಸೂರ್ಯನ ಬೆಳಕು: ಸೂರ್ಯನ ಬೆಳಕು ಹೇರಳವಾಗಿದಷ್ಟು ಅಡಿಕೆ ಗಿಡಗಳಿಗೆ ಉತ್ತಮ.

ಮಣ್ಣು: ಅಡಿಕೆ ಗಿಡವನ್ನು ವಿವಿಧ ಮಣ್ಣಿನಲ್ಲಿ ಬೆಳೆಯಬಹುದು. ಹೆಚ್ಚಾಗಿ ಉತ್ತಮ ತೇವಾಂಶ ಹಿಡುವಳಿ ಸಾಮರ್ಥ್ಯದೊಂದಿಗೆ ಮಧ್ಯಮ ರಚನೆಯ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ.

ನೀರು: ಅಡಿಕೆ ಗಿಡಗಳು ಬೆಳೆಯಲು ಉತ್ತಮ ನೀರಾವರಿ ಅವಶ್ಯಕವಾಗಿದೆ. ನಿಯಮಿತವಾಗಿ ನೀರು ಹಾಕುವುದು ಈ ಗಿಡಗಳಿಗೆ ಅಗತ್ಯವಾಗಿರುತ್ತದೆ. ಈ ಗಿಡಗಳು ದೀರ್ಘಾವಧಿಯ ಬರವನ್ನು ತೆಡೆದುಕೊಳ್ಳುವುದಿಲ್ಲ. ನೀರಿನ ಸಮಸ್ಯೆ ಇದ್ದಾಗ ಹನಿ ನೀರಾವರಿಯಂತಹ ಆಧುನಿಕಾ ನೀರಾವರಿಯನ್ನು ಅನುಸರಿಸಬಹುದು.

ಗೊಬ್ಬರ: ಗೊಬ್ಬರ ಅಡಿಕೆ ಇಳುವರಿ ಮತ್ತು ಬೆಳವಣಿಗೆಯನ್ನು ಸಹಾಯ ಮಾಡುತ್ತದೆ.

ಅಡಿಕೆಯ ಕೊಯ್ಲು ಮತ್ತು ಸಂಸ್ಕರಣೆ ಆಡಿಕೆಯ ವಿಧದ(ಬಿಳಿ ಅಡಿಕೆ ಅಥವಾ ಕೆಂಪು ಅಡಿಕೆಯ) ಮೇಲೆ ಬದಲಾವಣೆಯಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು