News Karnataka Kannada
Sunday, April 28 2024
ಅಂಕಣ

ಮೊಮ್ಮಕ್ಕಳ ಬಾಳಿಗೆ ಅಜ್ಜ-ಅಜ್ಜಿ ಒಂದು ವರದಾನ

Grandparents are a boon to the lives of grandchildren
Photo Credit :

ಅಜ್ಜ-ಅಜ್ಜಿ ಎಂದ ತಕ್ಷಣ ನೆನಪಿಗೆ ಬರುವುದು ನಮ್ಮ‌ಬಾಲ್ಯ. ತಂದೆ ತಾಯಿಗಿಂತ ಹೆಚ್ಚಾಗಿ ಹಚ್ವಿಕೊಂಡ, ತುಂಟಾಟವಾಡಿದ ಅದೇ ಅಜ್ಜ-ಅಜ್ಜಿ. ಬಾಲ್ಯದಲ್ಲಿ ಜೊತೆಗಾರರಾಗಿ ಸದಾ ಮಕ್ಕಳೊಂದಿಗೆ ಜೊತೆಗಿರುವ ಅದೇ ಅಜ್ಜ-ಅಜ್ಜಿ.

ಅಜ್ಜ-ಅಜ್ಜಿ ಒಂದು ಕುಟುಂಬದ ಬೆಲೆ ಕಟ್ಟಲಾಗದ ಆಸ್ತಿಯಾಗಿದ್ದು, ಕುಟುಂಬದ ಜೀವಾಳವೇ ಆಗಿರುತ್ತಾರೆ. ಸಂಪ್ರಾದಾಯಕ ನಿಯಮಗಳನ್ನು ಮುನ್ನಡೆಸಲು ದಾರಿತೋರಿಸುವ ಮಾರ್ಗದರ್ಶಕರು, ಮನೆಯೊಳಗೆ ಶಿಸ್ತನ್ನು ಪರಿಪಾಲನೆ ಮಾಡುವವರು ಆಗಿರುತ್ತಾರೆ.

ಮೊಮ್ಮಕ್ಕಳ ಜೀವನದಲ್ಲಿ ಅಜ್ಜ-ಅಜ್ಜಿ ಪ್ರಮುಖ ಪಾತ್ರ ವಹಿಸುತ್ತಾರೆ. ಚಿಕ್ಕ ಮಕ್ಕಳಿಗೆ ಇವರು ತೊರಿಸುವ ಪ್ರೀತಿ ವಾತ್ಸಲ್ಯ ಎಲ್ಲರಿಂದಲ್ಲೂ ಸಾಧ್ಯವಿಲ್ಲ. ತಮ್ಮ ಮೊಮ್ಮಕ್ಕಳಿಗಾಗಿ ಎನೂ ಬೇಕಾದರೂ ಮಾಡುವ ಹಿರಿಯಜೀವಗಳು.

ಮಕ್ಕಳಿಗೆ ಯಾವಾಗ ಯಾವರೀತಿಯ ಭೌತಿಕ ಪೋಷಕಾಂಶಗಳು ನೀಡಬೇಕು ಎಂಬುವುದನ್ನು ಅರಿತು ನೀಡುವಲ್ಲಿ ಮುಂದಾಗುವವರು ಇದೇ ಅಜ್ಜ-ಅಜ್ಜಿ. ಎಷ್ಟೋ ಸಂದರ್ಭದಲ್ಲಿ ತಾವು ಹೆತ್ತ ಮಕ್ಕಳು ತಪ್ಪು ಮಾಡಿದಾಗ ಸರಿಯಾಗಿ ತರಟೆಗೆ ತೆಗೆದುಕೊಳ್ಳುತ್ತಾರೆ. ಆದರೆ ತುಂಟ ಮೊಮ್ಮಕ್ಕಳು ತಪ್ಪು ಮಾಡಿದರೆ ಅದನ್ನು ನಗುತ್ತಾಲೆ ತಿದ್ದಿ ತಿಳಿ ಹೇಳಲು ಮುಂದಾಗುತ್ತಾರೆ. ಅಜ್ಜ-ಅಜ್ಜಿಯರು ಮಕ್ಕಳನ್ನು ನೋಡಿಕೊಳ್ಳುವುದು ಮಾತ್ರವಲ್ಲ, ಪೋಷಕರು ದೂರವಿದ್ದಾಗ ಮಕ್ಕಳ ಲಾಲನೆ ಪಾಲನೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರೀತಿಯಿಂದಲೇ ನಿಭಾಯಿಸುತ್ತಾರೆ.
ಮಕ್ಕಳ ಸುಖ ನಿದ್ರೆಗೆ ಲಾಲಿಹಾಡು ಹಾಗೂ ಮನರಂಜನೆಗೆ ತಮ್ಮ ಸಮಯದ ರೊಮಾಂಚನ ಕಥೆಗಳನ್ನು ಹೇಳುತ್ತಾರೆ. ಈ ಕಥೆಗಳ ಮೂಲಕ ಒಳ್ಳೆಯ ಮೌಲ್ಯವನ್ನು ಮನಸ್ಸಿನಲ್ಲಿ ಬಿತ್ತುತ್ತಾರೆ. ಇದು ಮಕ್ಕಳಲ್ಲಿ ಅನೇಕ ಸದ್ಗುಣಗಳನ್ನು ಕಲಿಸುವಲ್ಲಿ ಮತ್ತು ಜೀವನದಲ್ಲಿ ಉತ್ತಮ ಸ್ಥಾನದಲ್ಲಿರಿಸಲು ಪ್ರಭಾವ ಬೀರುತ್ತಾರೆ.

ಮಕ್ಕಳೊಂದಿಗೆ ಮಕ್ಕಳಾಗಿ ತಲೆಮಾರುಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡುತ್ತಾರೆ. ಗತಕಾಲದ ವೈಭವ, ಸಂಸ್ಕೃತಿ, ಆಚರಣೆಗಳ ಕುರಿತು ಆಗಾಗ ಸಂಪೂರ್ಣ ಚಿತ್ರಣವನ್ನು ನೀಡುತ್ತಿರುತ್ತಾರೆ.

ಅಜ್ಜ-ಅಜ್ಜಿ ಯಾವುದೇ ಜಾದುಗಾರರಿಗಿಂತ ಕಡಿಮೆ ಇಲ್ಲ. ತಮ್ಮ ಕಥೆ ಹೇಳುವ ಕೌಶಲ್ಯದಿಂದ ಮಕ್ಕಳ ಕಲ್ಪನೆಯನ್ನು ಅಭಿವೃದ್ಧಿಪಡಿಸಲು ನೆರವಾಗುತ್ತಾರೆ. ಕಥೆಗಳು, ಕಥೆಗಳಲ್ಲಿ ಬರುವ ಸಾಹಸ ಸನ್ನಿವೇಶಗಳು,ಅದ್ಭುತ, ಪವಾಡಗಳ ಕುರಿತು ಕೂತುಹಲ ಬರಿಸುವಂತೆ ಮಾಡಿ ಏಕಗ್ರತೆಯನ್ನು ಮೂಡಿಸುವಲ್ಲಿ ಸಹಕಾರಿಯಾಗಿರುತ್ತಾರೆ.

ಅಜ್ಜ-ಅಜ್ಜಿಯ ಪ್ರೀತಿಯನ್ನು ಸರಳವಾಗಿ ವ್ಯಾಖ್ಯನಿಸುವುದಾದರೆ ತಮ್ಮ ಮೊಮ್ಮಕ್ಕಳಿಗೆ ಆಹಾರವನ್ನು ನೀಡಲು ಇಷ್ಟಪಡುತ್ತಾರೆ, ಮಗುವು ಅನಾರೋಗ್ಯಕ್ಕೊಳಗಾದಾಗ, ಹಾಸಿಗೆಯ ಪಕ್ಕದಲ್ಲಿ ಕುಳಿತುಕೊಂಡು ಕುಲದೇವರನ್ನು ನೆನೆಯುತ್ತಾ ಹರಕೆಯನ್ನು ಇಡುತ್ತಾರೆ. ಅವರ ಕೈಗಳನ್ನು ಹಿಡಿದು ಆನಾರೋಗ್ಯವು ತನ್ನ ಹಿಡಿತವನ್ನು ಮುರಿಯುವವರೆಗೆ ಜಾತಕ ಪಕ್ಷಿಯಂತೆ ಕಾಯುತ್ತಾರೆ.
ಒಂದು ಮಗುವು ತನ್ನ ಅಜ್ಜ-ಅಜ್ಜಿಯರೊಂದಿಗೆ ಹೊಂದಿರುವ ಭಾವನಾತ್ಮಕ ಬಂಧವು ಇತರ ಸಂಬಂಧಗಳಿಗಿಂತ ಭಿನ್ನವಾಗಿರುತ್ತದೆ. ಪ್ರೀತಿ ವಾತ್ಸಲ್ಯದಿಂದ ತಮ್ಮ ಮೊಮ್ಮಕ್ಕಳೊಂದಿಗೆ ತಮ್ಮ ಎರಡನೇ ಬಾಲ್ಯವನ್ನು ಕಂಡುಕೊಳ್ಳುತ್ತಾರೆ. ತಮ್ಮ ಸಂತೋಷವನ್ನು ಮೆಲುಕು ಹಾಕುತ್ತಾರೆ.

ಹೆತ್ತವರು ಕೆಲಸದಲ್ಲಿ ಸದಾ ನಿರತರಾಗಿರುವ ಸಮಯದಲ್ಲಿ ಅಜ್ಜ-ಅಜ್ಜಿಯನ್ನು ಕರೆಸಿಕೋಳ್ಳುವುದು ಉತ್ತಮ. ಮಕ್ಕಳನ್ನು ನೋಡಿಕೊಳ್ಳಲು, ಅಧ್ಯಯನ ಮಾಡಿಸಿಲು, ಜೀವನದ ಪ್ರಮುಖ ಪಾಠಗಳನ್ನು ಕಲಿಸಲು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು, ಮನೆಯ ಜವಬ್ದಾರಿಯನ್ನು ವಹಿಸಿಕೊಳ್ಳಲು ಸದಾ ಸಿದ್ಧರಿರುತ್ತಾರೆ. ಮಕ್ಕಳು ಅಜ್ಜ-ಅಜ್ಜಿಯ ಪ್ರೀತಿ, ವತ್ಸಾಲ್ಯ ಎಂಬ ಭದ್ರ ಕೋಟೆಯೊಳಗೆ ಬೆಳೆದರೆ ಸಂಸ್ಕೃತಿ, ಸಂಸ್ಕಾರ ಮೈಗೂಡುತ್ತದೆ.

ಅಜ್ಜ-ಅಜ್ಜಿ ನಮ್ಮ ಜೀವನಕ್ಕೆ ಅದ್ಭತ ವರದಾನ. ಮೊಮ್ಮಕ್ಕಳ ಆಶಾವಾದಿ ಜೀವನಕ್ಕೆ ಪ್ರೀತಿಯ ತಂಪೆರೆಯುತ್ತಾರೆ. ದಿನದಿಂದ ದಿನಕ್ಕೆ ವಯಸ್ಸಾಗುತ್ತಿದ್ದರೂ, ಪ್ರೀತಿಯ ಬುತ್ತಿ ಮಾತ್ರ ಖಾಲಿಯಾಗುವುದಿಲ್ಲ. ತಂದೆ ತಾಯಿ ಸಾಕಷ್ಟು ವಿಷಯಗಳನ್ನು ತಿಳಿದಿದ್ದರೂ, ಈ ಹಿರಿಜೀವಗಳು ಎಲ್ಲಾವನ್ನು ಬಲ್ಲವ ಜ್ಞಾನಿಯಾಗಿದ್ದಾರೆ. ಜೀವನದಲ್ಲಿ ಯಾವಗಲಾದರು ಒಮ್ಮೆ ಸೋತು ಸುಣ್ಣವಾಗಿದ್ದೇವೆ ಅಥವಾ ಮುಂದೇನು? ಎಂಬ ಚಿಂತೆ ಕಾಡಿದಾಗ ಅಜ್ಜ-ಅಜ್ಜಿಯನ್ನು ಒಮ್ಮೆ ಭೇಟಿಮಾಡಿ ಸಲಹೆಯನ್ನು ಕೇಳುವುದು ಉತ್ತಮ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು