News Karnataka Kannada
Monday, April 29 2024
ಅಂಕಣ

ಅಲೋವೆರ ಜೆಲ್ ಕೂದಲಿಗೆ ಹಚ್ಚೋದರಿಂದ ಏನೆಲ್ಲಾ ಪಯೋಜನ ಇದೆ ನೋಡಿ

Aloe Vera Gel enhances hair beauty
Photo Credit : Freepik

ಸೌಂದರ್ಯ ಎಂದಾಗ ಯುವತಿಯರು ಕೇಶದ ಬಗ್ಗೆಯೂ ಅತೀವ ಕಾಳಜಿವಹಿಸುತ್ತಾರೆ. ಏಕೆಂದರೆ ಮುಖದ ಅಂದವನ್ನು ಹೆಚ್ಚಿಸುವಲ್ಲಿ ಕೇಶ ವಿನ್ಯಾಸವೂ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಕೂದಲು ಚೆನ್ನಾಗಿದ್ದರೆ ಕೇಶ ವಿನ್ಯಾಸವನ್ನು ಅಚ್ಚುಕಟ್ಟಾಗಿ ಮುಖಕ್ಕೆ ಒಪ್ಪುವಂತಹ ವಿನ್ಯಾಸ ಮಾಡಲು ಸಹಾಯವಾಗುತ್ತದೆ. ಇಲ್ಲದಿದ್ದರೆ ಸಾಧ್ಯವಾಗುವುದಿಲ್ಲ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಕೇಶ ಸಮಸ್ಯೆಗಳು ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಕೂದಲು ಉದುರುವುದು, ತಲೆ ಹೊಟ್ಟು, ಕೂದಲು ಎರಡು ಭಾಗ ಆಗುವುದು ಹೀಗೆ ಅನೇಕ ತರಹದ ಸಮಸ್ಯೆಗಳು ಎದುರಾಗುತ್ತದೆ. ಇಂತಹ ಸಮಸ್ಯೆಗಳಿಂದ ದೂರ ಆಗಲು ಅಲೋವೆರ ಜೆಲ್ ನಿಮಗೆ ಸಹಾಯ ಮಾಡುತ್ತದೆ. ಹೇಗೆ ಎಂಬುದನ್ನು ಇಂದು ನಾವು ತಿಳಿದುಕೊಳ್ಳೋಣ. ಅಲೋವೇರಾ ಜೆಲ್ ತಲೆಗೆ ಹಚ್ಚಿಕೊಂಡು ಕೆಲ ಸಮಯ ನಂತ್ರ ತಲೆ ಸ್ನಾನ ಮಾಡೊದರಿಂದ ತಲೆ ಹೊಟ್ಟು ಕಡಿಮೆಯಾಗುವ ಜೊತೆಗೆ ಹೊಳಪು ಕೂಡ ಬರುತ್ತದೆ.

ಈಗ ಸಾಮಾನ್ಯವಾಗಿ ಎಲ್ಲರ ಮನೆಯ ಅಂಗಳದಲ್ಲಿ ಅಲೋವೆರ ಗಿಡ ಇದ್ದೇ ಇರುತ್ತದೆ. ಅದರಿಂದಲೇ ಅಲೋವೆರಾ ತೆಗೆದು ಅದಲ ಜೆಲ್ ತೆಗೆದು ಅದಕ್ಕೆ ‌ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಹದಾ ಬಿಸಿ ಮಾಡಿಕೊಳ್ಳಿ. ನಂತರ ತಯಾರಾದ ಎಣ್ಣೆಯ ಬಿಸಿ ಆರಿದ ಬಳಿಕ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ಸ್ವಲ್ಪ ಸಮಯ ಹಾಗೆ ಬಿಟ್ಟು ಚೆನ್ನಾಗಿ ಕೂದಲನ್ನು ತೊಳೆದುಕೊಳ್ಳಿ.

ಅಲೋವೆರಾ ತಿರುಳನ್ನು ಚೆನ್ನಾಗಿ ಗ್ರೈನ್ ಮಾಡಿ ಅದಕ್ಕೆ ತೆಂಗಿನ ಎಣ್ಣೆ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಿ ಈಗ ಎಣ್ಣೆಯನ್ನು ತಣ್ಣಗಾಗಿಸಿ ನಂತರ ಸೋಸಿಕೊಂಡು ಬಳಕೆ ಮಾಡಿ ಇದನ್ನು ಶೇಖರಣೆ ಮಾಡಿಯೂ ಬಳಕೆ ಮಾಡ ಬಹುದು.

ಮೊಟ್ಟೆಯ ಬಿಳಿ ಲೋಳೆಗೆ, ಮೊಸರು ಮತ್ತು ಅಲೋವೆರಾ ಜೆಲ್ ಹಾಕಿ ನಂತರ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ತೆಳುವಾಗಿ ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಶಾಂಪೂವಿನಿಂದ ತೊಳೆಯಿರಿ. ಕ್ರಮೇಣ ಹೀಗೆ ಬಳಕೆ ಮಾಡಿದರೆ ಉತ್ತಮ ರಿಸಲ್ಟ್ ಪಡೆಯಬಹುದು.

ಅಲೋವೆರಾ ಜೆಲ್ ಗೆ ಸ್ವಲ್ಪ (ಅಂದಾಜು ಪ್ರಮಾಣದಲ್ಲಿ) ಲಿಂಬೆರಸವನ್ನು ಹಾಕಿ ಹೇರ್ ಪ್ಯಾಕ್ ರೆಡಿ ಮಾಡಿಕೊಳ್ಳಿ, ನಂತರ ಈ ಹೇರ್ ಪ್ಯಾಕ್ ಅನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಚೆನ್ನಾಗಿ ನೀರಲ್ಲಿ ಸ್ವಚ್ಛ ಮಾಡಿ ಕೊಳ್ಳಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು