News Karnataka Kannada
Saturday, April 27 2024
ಅಂಕಣ

ಮಾನಸಿಕ ಸವಾಲುಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸುವ ಸಾಮರ್ಥ್ಯ ಇರಬೇಕು

Mental Health
Photo Credit :

ಆರೋಗ್ಯವೇ ಭಾಗ್ಯ..

ಮಾನವನಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಅಥವಾ ಸಾಮಾಜಿಕ ಸವಾಲುಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸುವ ಸಾಮರ್ಥ್ಯ ಇದೆ.

ಜೀವನಶೈಲಿಯು ತುಂಬಾ ಮುಖ್ಯ. ವೈಯಕ್ತಿಕ ನಿರ್ಧಾರಗಳ (ಸ್ವಂತ ನಿಯಂತ್ರಣವನ್ನು ಹೊಂದಿರುವ ನಿರ್ಧಾರಗಳು) ಒಟ್ಟುಗೂಡುವಿಕೆಯೆ ಅನಾರೋಗ್ಯ ಅಥವಾ ಸಾವಿನ ಕಾರಣ ಆಗಬಹುದು. ಪರಿಸರವು ನಮ್ಮ ಆರೋಗ್ಯವನ್ನು ಬದಲಾಯಿಸಬಹುದು. ಮಾನವನಿಗೆ ಸ್ವಲ್ಪ ಅಥವಾ ಯಾವುದೇ ನಿಯಂತ್ರಣ ಹೊಂದಿರುವ ವಿಷಯಗಳಿಂದ ದೇಹಕ್ಕೆ ಮತ್ತು ವೈಯಕ್ತಿಕವಾಗಿ ಮನಸಿನ ಆರೋಗ್ಯಕ್ಕೆ ಹಾನಿಯಾಗಬಹುದು.

ಮಾನಸಿಕ ಅಸ್ವಸ್ಥತೆಯ ಕೆಲವು ಎಚ್ಚರಿಕೆ ಚಿಹ್ನೆಗಳು ಕೆಳಗಿನವು: • ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಲು ಅಸಮರ್ಥತೆ ಮತ್ತು ಸಮಸ್ಯೆ • ವಿಚಿತ್ರ ಕಲ್ಪನೆಗಳು ಅಥವಾ ಭ್ರಮೆಗಳು • ಅತಿಯಾದ ಆತಂಕ • ನಿರಂತರ ದುಃಖದ ಭಾವನೆಗಳು • ತಿನ್ನುವ ಅಥವಾ ಮಲಗುವ ಮಾದರಿಗಳನ್ನು ಗುರುತಿಸಲಾಗಿದೆ ಬದಲಾವಣೆಗಳು • ಆತ್ಮಹತ್ಯೆ ಬಗ್ಗೆ ಯೋಚನೆ • ತೀವ್ರ ಗರಿಷ್ಠ ಅಥವಾ ಕನಿಷ್ಠ • ಮದ್ಯಸಾರದ ದುರುಪಯೋಗ, ಹಗೆತನ • ಹಿಂಸಾತ್ಮಕ ನಡವಳಿಕೆ •

ಮಕ್ಕಳ ಆರೈಕೆ

ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಕಾರಾತ್ಮಕ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯ ಮಾಡಿ.
ಮಕ್ಕಳನ್ನು ತಮ್ಮ ಪೋಷಕರು ಅಥವಾ ಆರೈಕೆದಾರರಿಂದ ಸಾಧ್ಯವಾದಷ್ಟು ಬೇರ್ಪಡಿಸುವುದನ್ನು ತಪ್ಪಿಸಿ. ಮಗುವನ್ನು ಪ್ರತ್ಯೇಕವಾಗಿರಿಸಬೇಕಾದರೆ ಪೋಷಕರು ಮತ್ತು ಆರೈಕೆದಾರರೊಂದಿಗೆ ನಿಯಮಿತ ಸಂಪರ್ಕವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.
ಕುಟುಂಬದ ದಿನಚರಿಯನ್ನು ಸಾಧ್ಯವಾದಷ್ಟು ಕಾಪಾಡಿಕೊಳ್ಳಿ ಮತ್ತು ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ತೊಡಗಿಸಿಕೊಳ್ಳುವ ಚಟುವಟಿಕೆಗಳನ್ನು ಒದಗಿಸಿ.
ಮಕ್ಕಳು ಪೋಷಕರಿಂದ ಹೆಚ್ಚಿನ ಬಾಂಧವ್ಯವನ್ನು ಬಯಸಬಹುದು, ಈ ಸಂದರ್ಭದಲ್ಲಿ, ಅವರೊಂದಿಗೆ ಕೋವಿಡ್-೧೯ ಬಗ್ಗೆ ಅವರ ವಯಸ್ಸಿಗೆ ತಕ್ಕಂತೆ ಚರ್ಚಿಸಿ.

* ಈ ಸಂದರ್ಭದಲ್ಲಿ ಆದಷ್ಟು ತಮ್ಮವರೊಂದಿಗೆ ಸಮಯ ಕಳೆಯುವುದನ್ನು ಕಲಿಯಬೇಕು.
* ನಮ್ಮ ಮಾನಸಿಕ ಸ್ಥಿತಿಯು ಬದಲಾಗುತ್ತದೆ ಎನ್ನುವ ಸಂದರ್ಭದಲ್ಲಿ ಆದಷ್ಟು ಮಟ್ಟಿಗೆ ನಮ್ಮ ಪ್ರೀತಿ ಪಾತ್ರದಲ್ಲಿ ಅವುಗಳ ಬಗ್ಗೆ ಹೇಳಬೇಕು.
* ನಮ್ಮ ಆಸಕ್ತಿ ಕ್ಷೇತ್ರವನ್ನು ಕಂಡುಕೊಂಡು ಅವುಗಳ ಮುಖಾಂತರ ನಮ್ಮ ಏಕಾಂತವನ್ನು ಕಳೆದುಕೊಳ್ಳಬಹುದು.
* ಪುಸ್ತಕ ಓದುವುದು ಟಿವಿ ನೋಡುವುದು ಹಾಸ್ಯ ವೀಡಿಯೋಗಳನ್ನು ನೋಡುವುದರ ಮೂಲಕ ನಮ್ಮನ್ನು ನಾವು ಖುಷಿಯಾಗಿ ಇಟ್ಟುಕೊಳ್ಳಬಹುದು.

ಆಹಾರ ಪದ್ಧತಿ ಹೇಗಿರಬೇಕು

* ಆದಷ್ಟು ಮಟ್ಟಿಗೆ ಸಾತ್ವಿಕ ಆಹಾರಗಳನ್ನು ಸೇವಿಸಿದರೆ ಮೂಲಕ ನಾವು ತಾಳ್ಮೆಯಿಂದ ಇರಬಹುದು.
* ಅದೇ ರೀತಿ ಸಸ್ಯಹಾರಗಳನ್ನು ಸೇವಿಸಬೇಕು.
* ಹೆಚ್ಚಿನ ಖಾರ, ಲವಣಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೂರವಿರುವುದು ಉತ್ತಮ.
* ಆಹಾರ ಪದಾರ್ಥಗಳು ಹಾಳಾಗದಂತೆ ಹಾಕುವಂತಹ ರಾಸಾಯನಿಕ ಪದಾರ್ಥಗಳನ್ನು ಬಳಕೆ ಮಾಡಿದಂತಹ ಆಹಾರಗಳಿಂದ ಆದಷ್ಟು ಮಟ್ಟಿಗೆ ದೂರವಿರಬೇಕು ಏಕೆಂದರೆ ನಾವು ತಿನ್ನುವ ಆಹಾರವು ನಮ್ಮ ಮನಸ್ಥಿತಿ ಮೇಲೆಯೂ ಪ್ರಭಾವವನ್ನು ಬೀರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4283
Swathi M G

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು