News Karnataka Kannada
Monday, April 29 2024
ಸಮುದಾಯ

ಬಂಟ್ವಾಳ: ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಖಂಡ ಏಕಾಹ ಭಜನೆ

Akhanda Ekaha Bhajana programme at Sri Umamaheshwara Temple
Photo Credit : By Author

ಬಂಟ್ವಾಳ : ಬಾನೊಟ್ಟು ಶ್ರೀ ಉಮಾಮಹೇಶ್ವರ ಸಾನ್ನಿದ್ಯದ ಜೀರ್ಣೋದ್ಧಾರ ಕುರಿತು ಧರ್ಮಜಾಗೃತಿ ಅಭಿಯಾನದ ಅಂಗವಾಗಿ ಅಖಂಡ- ಏಕಾಹ ಭಜನಾ ಕಾರ್ಯಕ್ರಮ ಎಪ್ರಿಲ್8 ನೇ ಸೂರ್ಯೋದಯದಿಂದ ಎಪ್ರಿಲ್9 ರ ಸೂರ್ಯೋದಯದವರೆಗೆ ಊರ-ಪರವೂರ ವಿವಿಧ ಭಜನಾ ತಂಡಗಳ ಸಮ್ಮಿಲನ ದಲ್ಲಿ ಅದ್ದೂರಿಯಾಗಿ ಜರುಗಿತು.

ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ ಪ್ರಜ್ವಲನಗೊಳಿಸುವ ಮೂಲಕ ಈ ಅಖಂಡ ಏಕಾಹ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ರೈ ಪೆರ್ಲಬೀಡು, ಪ್ರಮುಖರಾದ ಎನ್ .ರವಿಶರ್ಮ, ಸದಾಶಿವ ಆಚಾರ್ಯ, ವೈದಿಕರಾದ ಪಳನೀರು ಅನಂತ ಭಟ್,   ಕ್ಷೇತ್ರ ಅಭಿವೃದ್ಧಿ ಸಮಿತಿಯ ಸದಸ್ಯರು ,ಮಹಿಳಾ ಸಮಿತಿ ಸದಸ್ಯರು, ಗ್ರಾಮಸ್ತರು ಹಾಗೂ ಊರ – ಪರವೂರಿನ ಭಕ್ತರು ಉಪಸ್ಥಿತರಿದ್ದರು.

ದೇವಾಲಯ ಜೀರ್ಣೋದ್ಧಾರ ಕುರಿತಾಗಿ ಜರುಗಿದ ಅಷ್ಟಮಂಗಲ ಪ್ರಶ್ನಾ ಚಿಂತನೆ ಯಲ್ಲಿ ಕಂಡು ಬಂದಂತೆ ಪರಿಹಾರ ಹಾಗೂ ನಿವೃತ್ತಿ ಯ ಭಾಗವಾಗಿ , ಗ್ರಾಮದ ಸುಬೀಕ್ಷೇಗಾಗಿ ಕ್ಷೇತ್ರ ಅಭಿವೃದ್ಧಿ ಸಮಿತಿ ಅಖಂಡ ಏಕಾಹ ಭಜನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದು 20ಕ್ಕೂ ಹೆಚ್ಚು ವಿವಿಧ ಭಜನಾ ತಂಡಗಳು ಭಾಗವಹಿಸಿದ್ದವು. ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಈ ಕಾರ್ಯಕ್ರಮ ಕ್ಕೆ ಚಿತೈಸಿ ಶುಭಹಾರೈಸಿದರು.

ಈ ಕಾರ್ಯಕ್ರಮದಲ್ಲಿ ನೂಜಿಬೈಲು ರಮೇಶ್ ಭಟ್, ವೇದ ವಿದ್ವಾಂಸರಾದ  ಪಳ್ಳತ್ತಡ್ಕ ಘನಪಾಠಿ ಶಂಕರನಾರಾಯಣ ಭಟ್, ರಾಕೋಡಿ ಈಶ್ವರ ಭಟ್, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಸೇರಿದಂತೆ ಹಲವು ಮಂದಿ ಪ್ರಮುಖರು ಈ ಕಾರ್ಯಕ್ರಮದಲ್ಲಿ ಆಗಮಿಸಿದ್ದರು.ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಯವರು ಹಾಗೂ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯ ರಿಂದ ಶುಭಾರಂಭಗೊಂಡ ಬಾನೊಟ್ಟು ಅಖಂಡ ಏಕಾಹ ಭಜನೆ ನೇರಳಕಟ್ಟೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸದಸ್ಯರ ಭಜನೆಯ ಮೂಲಕ ಮಂಗಳಾಚರಣೆ ಕಾಣುವ ಮೂಲಕ ಬಾನೊಟ್ಟು ಅಖಂಡ ಏಕಾಹ ಭಜನೆ ಸಂಪನ್ನ ಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು