News Karnataka Kannada
Thursday, May 02 2024
ಸಮುದಾಯ

ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ 36 ನೇ ವಾರ್ಷಿಕೋತ್ಸವ ಸಮಾರಂಭ

36th Anniversary Celebrations of Gangolli Seva Sangama Nivedita Shishu Mandir
Photo Credit : News Kannada

ಕುಂದಾಪುರ: ಸಂಸ್ಕೃತಿ, ಸಂಸ್ಕಾರಗಳಿಗೆ ಸಮನವಾದ ವಿದ್ಯೆಯನ್ನು ಪಡೆಯದೆ ಇದ್ದರೆ ಜೀವನವನ್ನು ನಿರೂಪಿಕೊಳ್ಳಲು ಕಷ್ಟವಾಗುತ್ತದೆ. ಸಮಾಜದಲ್ಲಿ ಉತ್ತಮ ನಾಯಕನಾಗಿ ಬೆಳೆಯಲು ಸಂಸ್ಕಾರಯುತ ಬದುಕನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಶಿಶು ಮಂದಿರಗಳಲ್ಲಿ ದೊರೆಯುವ ಶಿಕ್ಷಣ ಸತ್ಪ್ರಜೆಗಳನ್ನು ರೂಪಿಸುವಂತೆ ಇದೆ ಎಂದು ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ವತಿಯಿಂದ ಗಂಗೊಳ್ಳಿ ಶ್ರೀ ವೀರ ವಿಠಲ ಸಭಾಭವನದಲ್ಲಿ ಶುಕ್ರವಾರ ನಡೆದ 36ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮಕ್ಕಳದ್ದು ಮೃದು ಸ್ವಭಾವ ಒಳ್ಳೆಯದ್ದು ಮತ್ತು ಕೆಟ್ಟದನ್ನು ಬಹಳಷ್ಟು ಬೇಗನೆ ರೂಢಿ ಮಾಡಿಕೊಳ್ಳುತ್ತಾರೆ ಮಕ್ಕಳ ಮನಸ್ಥಿತಿಗೆ ತಕ್ಕಂತೆ ಅವರ ಜೀವನವನ್ನು ನಿರೂಪಿಸುವುದು ಪೋಷಕರ ಕರ್ತವ್ಯವಾಗಿದೆ. ಶಿಶು ಮಂದಿರದ ಮೂಲಕ ಪುಟ್ಟಮಕ್ಕಳಿಗೆ ಜ್ಞಾನಯುತ,ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಉಡುಪಿ ಪಲಿಮಾರು ಮಠದ ಕಿರಿಯ ಪೀಠಾಧೀಶ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇವರಾಯ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಸೇವಾ ಸಂಗಮ ಟ್ರಸ್ಟ್‍ನ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಗಂಗೊಳ್ಳಿ ಸ.ವಿ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಕೆ.ರಾಮನಾಥ ನಾಯಕ್, ಶಿಶು ಮಂದಿರದ ಸದಸ್ಯರು,ಮಾತಾಜಿ ಭಾಗೀರಥಿ, ನಾಗರತ್ನ ಉಪಸ್ಥಿತರಿದ್ದರು. ಶಿಶು ಮಂದಿರದಲ್ಲಿ ಸೇವೆ ಸಲ್ಲಿಸಿದ ಮತ್ತು ಸೇವೆ ಸಲ್ಲಿಸುತ್ತಿರುವ ಮಾತಾಜಿಯವರನ್ನು ಸನ್ಮಾನಿಸಲಾಯಿತು ಹಾಗೂ ದಾನಿಗಳನ್ನು ಗೌರವಿಸಲಾಯಿತು.

ಪುರೋಹಿತರಾದ ಜಿ.ರಾಘವೇಂದ್ರ ಆಚಾರ್ಯ ಮತ್ತು ಜಿ.ಪ್ರದೀಪ ಭಟ್ ವೇದಘೋಷ ಹಾಡಿದರು. ಅಶ್ವಿತಾ ಜಿ.ಪೈ ಮತ್ತು ವೈಷ್ಣವಿ ಶೆಣೈ ಪ್ರಾರ್ಥಿಸಿದರು.ಶಿಶು ಮಂದಿರದ ಅಧ್ಯಕ್ಷೆ ಸವಿತಾ ಯು.ದೇವಾಡಿಗ ಸ್ವಾಗತಿಸಿದರು.ಸಂಚಾಲಕ ಡಾ.ಕಾಶೀನಾಥ ಪಿ.ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ರಾಘವೇಂದ್ರ ಪೈ ನಿರ್ವಹಿಸಿದರು.ಕಾರ್ಯದರ್ಶಿ ಬಿ.ಲಕ್ಷ್ಮೀಕಾಂತ ಮಡಿವಾಳ ವಂದಿಸಿದರು.

ಮಕ್ಕಳ ಕುಣಿತ ಭಜನೆ, ಹುಲಿವೇಷ ಕುಣಿತ, ವಿವಿಧ ವೇಷಭೂಷಣಗಳು ನೋಡುಗರ ಗಮನ ಸೆಳೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು