News Karnataka Kannada
Sunday, May 12 2024
ಉದ್ಯೋಗ

 ರಿಟೈಲ್ ಉದ್ಯಮದ ಉದ್ಯೋಗಗಳಿಗಾಗಿ ಮಂಗಳೂರಿನಲ್ಲಿ ಸಂದರ್ಶನ

pressmeet
Photo Credit : News Kannada

ಮಂಗಳೂರು: ಏಷ್ಯಾದ ಅತಿ ದೊಡ್ಡ ಹೈಪರ್ಮಾರ್ಕೆಟ್ ಲುಲು ಸಮೂಹವು ಮಂಗಳೂರಿನಲ್ಲಿ ತಮ್ಮ ಮೊದಲ ನೇಮಕಾತಿ ಸಂದರ್ಶನವನ್ನು ಏರ್ಪಡಿಸಿದೆ. ಯುಎಇ, ಖತಾರ್, ಬಹ್ರೇನ್, ಮಸ್ಕತ್, ಸೌದಿ ಅರೇಬಿಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ದೇಶಗಳನ್ನು ಒಳಗೊಂಡಂತೆ ಏಷ್ಯದಾದ್ಯಂತ ವ್ಯಾಪಕವಾಗಿ ನಡೆಸುತ್ತಿರುವ ಲುಲು ಸಂಸ್ಥೆ, ಈ ಪ್ರಮುಖ ರಿಟೈಲ್ ಉದ್ಯಮದ ವಿವಿಧ ಹುದ್ದೆಗಳಿಗೆ ಯುವ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ.

ಉದ್ಯೋಗವು ಮಾರಾಟ, ಕೌಂಟರ್ ಮಾರಾಟ ಮತ್ತು ಕ್ಯಾಷಿಯರ್ ಹುದ್ದೆಗಳನ್ನು ಒಳಗೊಂಡಿರುತ್ತವೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ನೌಕರರಾಗಿ ಅನುಭವವಿರುವ ವೃತ್ತಿಪರರು ಮತ್ತು ಪೂರ್ವ ಅನುಭವವಿಲ್ಲದವರು ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ಕನಿಷ್ಠ ವಿದ್ಯಾರ್ಹತೆ ಪಿಯುಸಿಯಾಗಿದ್ದು (ಪ್ರಿ-ಯೂನಿವರ್ಸಿಟಿ ಕೋರ್ಸ್), ಅರ್ಜಿದಾರರು 21 ರಿಂದ 28 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ಇಂಗ್ಲಿಷ್‍ನಲ್ಲ್ಲಿ ಸಂವಹನ ಮಾಡುವುದು ಅಭ್ಯರ್ಥಿಗಳಿಗೆ ಕಡ್ಡಾಯವಾಗಿದೆ.

ಹುದ್ದೆಗಳಿಗೆ ವೇತನ ಶ್ರೇಣಿಯು 1200 ಯುಎಇ ಧಿರಾಮ್‍ಗಳಿಂದ 1400 ಧಿರಾಮ್ ತನಕ ಮತ್ತು 200 ಧಿರಾಮ್ ಆಹಾರ ಭತ್ಯೆ ದೊರೆಯಲಿದೆ. ವಸತಿ, ವೀಸಾ ಮತ್ತು ವಿಮಾನ ಟಿಕೆಟ್ ವ್ಯವಸ್ಥೆಗಳನ್ನು ಸಂಸ್ಥೆಯು ನೋಡಿಕೊಳ್ಳುತ್ತದೆ.
ಸುಮಾರು 400 ಉದ್ಯೋಗ ಅವಕಾಶಗಳಿದ್ದು, 2023 ರ ಜೂನ್ 22 ಮತ್ತು 23 ರಂದು ಮಂಗಳೂರಿನ ಫೆರ್ನಾಂಡಿಸ್ ಗ್ರೂಪ್ ಕಛೇರಿಯಲ್ಲಿ ಬೆಳಿಗ್ಗೆ 9.00ರಿಂದ ಸಂಜೆ 6.00ರವರೆಗೆ ಸಂದರ್ಶನವನ್ನು ನಡೆಸಲಾಗುವುದು ಎಂದು ಫೆರ್ನಾಂಡಿಸ್ ಗ್ರೂಪ್ ಸಂಸ್ಥೆಯ ಪ್ರವರ್ತಕರಾದ ವಿಲ್ಸನ್ ಫೆರ್ನಾಂಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂದರ್ಶನ ಆಫೀಸಿನ ವಿಳಾಸ: ಫೆರ್ನಾಂಡಿಸ್ ಗ್ರೂಪ್, ಮೆಟ್ರೋ ಪ್ಲಾಜಾ, 3ನೇ ಮಹಡಿ, ಆಕ್ಸಿಸ್ ಬ್ಯಾಂಕಿನ ಮೇಲಿನ ಮಹಡಿ, ಮೋರ್ ಸೂಪರ್ ಮಾರ್ಕೆಟಿನ ಎದುರುಗಡೆ, ವಾಲೆನ್ಸಿಯಾ, ಮಂಗಳೂರು 575 002. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: +91 9686675463 / 9819044376 ಅಥವಾ www.fernandesgroup.com ಗೆ ಭೇಟಿ ನೀಡಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು