ನ್ಯೂಯಾರ್ಕ್: ಮಸಾಲೆಗಳ ರಾಜ ಏಲಕ್ಕಿಯನ್ನು ಸಂಶೋಧಕರು ಸೂಪರ್ ಫುಡ್ ಎಂದು ಕರೆದಿದ್ದು, ಈ ಆಹಾರ ವಸ್ತುವಿನ ಬಹು ಉಪಯೋಗಗಳನ್ನು ಪಟ್ಟಿ ಮಾಡಿದ್ದಾರೆ. ಏಲಕ್ಕಿ ಹಸಿವು ಹೆಚ್ಚಿಸಿ, ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಅಲ್ಲದೆ ಉರಿಯೂತವನ್ನು ಏಲಕ್ಕಿ ಶಮನ ಮಾಡುತ್ತದೆ ಎಂದು ಹೇಳಿದ್ದಾರೆ.
ಟೆಕ್ಸಾಸ್ ಎ ಮತ್ತು ಎಂ ಕಾಲೇಜ್ ಆಫ್ ಅಗ್ರಿಕಲ್ಚರ್ ಅಂಡ್ ಲೈಫ್ ಸೈನ್ಸಸ್ನ ಸಂಶೋಧಕರು ಏಲಕ್ಕಿಯನ್ನು “ಸೂಪರ್ಫುಡ್” ಎಂದು ಕರೆದಿದ್ದಾರೆ. ಏಲಕ್ಕಿ ಕ್ಯಾಲೊರಿ ಕರಗಿಸುತ್ತದೆ. ಹಸಿವು ಮತ್ತು ಆಹಾರ ಸೇವನೆ ಹೆಚ್ಚಿಸಿ ದೇಹದ ತೂಕವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದು ವಿವಿಯ ಸಂಶೋಧಕರಾದ ಲೂಯಿಸ್ ಸಿಸ್ನೆರೋಸ್-ಝೆವಾಲೋಸ್ ಹೇಳಿದ್ದಾರೆ.
ಇಂಟರ್ನ್ಯಾಷನಲ್ ಜರ್ನಲ್ ಆಫ್ ಮಾಲಿಕ್ಯುಲರ್ ಸೈನ್ಸಸ್ನಲ್ಲಿ ಪ್ರಕಟವಾದ ಈ ಅಧ್ಯಯನ ಲೇಖನದಲ್ಲಿ ಏಲಕ್ಕಿಯ ಬಹುಗುಣಗಳನ್ನು ತಿಳಿಸಿದ್ದು, ಪ್ರತಿದಿನ ಕನಿಷ್ಠ ಎಂಟರಿಂದ 10 ಏಲಕ್ಕಿ ಕಾಳುಗಳನ್ನು ಸೇವಿಸುವುದರಿಂದ ಯಕೃತ್ತು ಮತ್ತು ಅಸ್ಥಿಪಂಜರದ ಸ್ನಾಯುಗಳಲ್ಲಿ ಅಡಿಪೋಸ್ ಟಿಶ್ಯೂ ಲಿಪೊಲಿಸಿಸ್ ಮತ್ತು ಮೈಟೊಕಾಂಡ್ರಿಯದ ಆಕ್ಸಿಡೇಟಿವ್ ಮೆಟಾಬಾಲಿಸಮ್ ಅನ್ನು ಶಕ್ತಿಯುತ ಮಾಡುತ್ತದೆ ಎಂದು ಝೆವಾಲೋಸ್ ಹೇಳಿದ್ದಾರೆ.