ಉಡುಪಿ: ಪ್ಯಾರಾ ಮೆಡಿಕಲ್ ಕಾಲೇಜಿನ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರವೂ ಸಿಐಡಿ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಗೌಪ್ಯ ಸ್ಥಳದಲ್ಲಿ ಸಂತ್ರಸ್ತ ವಿದ್ಯಾರ್ಥಿಗಳು ಹಾಗೂ ವಿಡಿಯೋ ಮಾಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳ ವಿಚಾರಣೆ ನಡೆಸಿದೆ. ಕೆಲ ದಿನಗಳ ಕಾಲ ಇಲ್ಲಿಯೇ ವಿಚಾರಣೆ ಮುಂದುವರಿಸಲು ಅಧಿಕಾರಿಗಲೂ ನಿರ್ಧಾರ ಮಾಡಿದ್ದಾರೆ.
ಗುರುವಾರ ನಗರದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದ ಸಿಐಡಿ ಎಡಿಜಿಪಿ ಅವರು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಅದಕ್ಕೂ ಹಿಂದೆ ಸಿಐಡಿ ಎಸ್ ಪಿ ಮಾಹಿತಿ ಸಂಗ್ರಹಿಸಿದ್ದರು. ಪ್ರಸ್ತುತ ತನಿಖಾಧಿಕಾರಿಯಾಗಿರುವ ಅಂಜುಮಾಲಾ ನಾಯಕ ತನಿಖೆ ಮುಂದುವರಿಸಿದ್ದಾರೆ.