News Karnataka Kannada
Thursday, May 02 2024
ಆರೋಗ್ಯ

ಮೂತ್ರಪಿಂಡದಲ್ಲಿ ಕಲ್ಲು: ಕಾರಣಗಳು ಮತ್ತು ಪರಿಹಾರ

Kidney stone: causes and remedies
Photo Credit : Pixabay

ಮೂತ್ರಪಿಂಡದ ಕಲ್ಲು ಅಥವಾ ಕಿಡ್ನಿಸ್ಟೋನ್ ಎಂದು ಕರೆಯಲ್ಪಡುವ ಈ ಸಮಸ್ಯೆಯು ಇತ್ತಿಚಿನದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಕಿಡ್ನಿಸ್ಟೋನ್ ಎಂದರೆ ಮೂತ್ರಪಿಂಡದೊಳಗಡೆ ರೂಪುಗೊಳ್ಳುವ ಖನಿಜ ಮತ್ತು ಲವಣಗಳಿಂದ ಉಂಟಾದ ಒಂದು ರೀತಿಯ ಗಟ್ಟಿಯಾದ ಕಲ್ಲು ಎನ್ನಬಹುದು.

ಕಿಡ್ನಿಸ್ಟೋನ್‌ಗಳು ನಮ್ಮ ಮೂತ್ರನಾಳದ ಯಾವುದೇ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಮೂತ್ರವು ಕೇಂದ್ರೀಕೃತವಾದಾಗ ಕಲ್ಲುಗಳು ರೂಪುಗೊಳ್ಳುತ್ತವೆ ಎಂದು ಕಾಕುಂಜೆ ಆಯುರ್ವೇದಿಕ್ ಕ್ಲಿನಿಕ್‌ನ ವೈದ್ಯೆ ಡಾ. ಅನುರಾಧಾ ಹೇಳುತ್ತಾರೆ.

ಕಾರಣಗಳು

ನಿಮ್ಮ ಮೂತ್ರವು ಹೆಚ್ಚು ಸ್ಪಟಿಕರೂಪಿಸುವ ಪದಾರ್ಥಗಳನ್ನು ಹೊಂದಿರುವಾಗ ಮೂತ್ರಪಿಂಡದ ಕಲ್ಲುಗಳು ಉಂಟಾಗುತ್ತವೆ.

• ಪ್ರತಿ ದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದು ಮೂತ್ರ ಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ.

• ಕೆಲವು ಆಹಾರಗಳಾದ ಪ್ರೋಟಿನ್,ಸೋಡಿಂ(ಉಪ್ಪು)ಸಕ್ಕರೆ ಅತಿಯಾಗಿ ಸೇವಿಸುವುದರಿಂದ

• ಬೊಜ್ಜು ಕೂಡ ಮೂತ್ರಪಿಂಡದ ಕಲ್ಲಿನ ಅಪಾಯವನ್ನು ಹೆಚ್ಚು ಮಾಡುತ್ತದೆ

• ಕೆಲವು ಔಷಧಗಳ ಅಡ್ಡ ಪರಿಣಾಮದಿಂದ ಉಂಟಾಗಬಹುದು.

ಮೂತ್ರಪಿಂಡದ ಕಲ್ಲಿನ ರೊಗದ ಲಕ್ಷಣಗಳು

ಮೂತ್ರಪಿಂಡದ ಕಲ್ಲುಗಳು ಸಾಮಾನ್ಯವಾಗಿ ಮೂತ್ರಪಿಂಡದೊಳಗೆ ಚಲಿಸುವವರೆಗೆ ರೋಗ ಲಕ್ಷಣವನ್ನು ಉಂಟು ಮಾಡುವುದಿಲ್ಲ. ಮೂತ್ರಪಿಂಡದ ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಅದು ಮೂತ್ರದ ಹರಿವನ್ನು ನಿರ್ಬಂಧಿಸುತ್ತದೆ. ಮತ್ತು ಮೂತ್ರಪಿಂಡವು ಉದಿಕೊಳ್ಳುತ್ತದೆ ಮತ್ತು ಇದು ಮೂತ್ರನಾಳದ ಸೆಳೆತಕ್ಕೆ ಕಾರಣವಾಗುತ್ತದೆ. ಇಂತಹ ಸಮಯದಲ್ಲಿ ರೊಗಲಕ್ಷಣಗಳನ್ನು ಅನುಭವಿಸಬಹುದು.

• ಪಕ್ಕೆಲುಬುಗಳ ಕೆಳಗೆ, ಬದಿಯಲ್ಲಿ ಮತ್ತು ಹಿಂಭಾಗದಲ್ಲಿ ತೀವ್ರವಾದ ನೋವು

• ಹೊಟ್ಟೆಯ ಕೆಳ ಭಾಗ ಮತ್ತು ತೊಡೆಯ ಸಂದಿಗಳಲ್ಲಿ ತೀವ್ರ ನೋವು

• ಮೂತ್ರ ವಿಸರ್ಜಿಸುವಾಗ ನೋವು ಅಥವಾ ಉರಿ

• ಮೂತ್ರದ ಬಣ್ಣದಲ್ಲಿ ಬದಲಾವಣೆ, ಗುಲಾಬಿ, ಕೆಂಪು,ಅಥವಾ ಕಂದು ಬಣ್ಣದ ಮೂತ್ರ

• ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಯಾಗುವುದು

• ವಾಕರಿಕೆ ಬರುವಂತಾಗುವುದು ಮತ್ತು ವಾಂತಿ

• ಸೋಕು ಇದ್ದಾಗ ಶೀತ ಜ್ವರ

• ಮೂತ್ರ ವಿಸರ್ಜಿಸುವಾಗ ರಕ್ತ ಬರುವುದು

ಉತ್ತಮ ಆಹಾರಗಳು

ಮೂತ್ರ ಪಿಂಡದ ತೊಂದರೆ ಹೊಂದಿರುವವರು ಕೆಲವು ವಿಶೇಷ ಆಹಾರ ಅಭ್ಯಾಸವನ್ನು ಅನುಸರಿಸಬೇಕಾಗುತ್ತದೆ. ಕಿಡ್ನಿಸ್ಟೋನ್ ತಡೆಗಟ್ಟಲು ಒಂದೇ ಆಹಾರ ಕ್ರಮವಿಲ್ಲ ಹೆಚ್ಚಿನ ಆಹಾರಗಳು ಕಿಡ್ನಿಸ್ಟೋನ್ ಪ್ರಕಾರಗಳನ್ನು ಆಧರಿಸಿವೆ. ಕೆಲವು ಸಾಮಾನ್ಯ ಆಹಾರಾಭ್ಯಾಸಗಳು ಹೀಗಿವೆ.

• ದ್ರಾಕ್ಷಿ ಹಣ್ಣಿನ ರಸ ಹಾಗೂ ಸೋಡಾವನ್ನು ಹೊರತುಪಡಿಸಿ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು

• ಆಕ್ಸಲೇಟ್ ಅಂಶವಿರುವ ಆಹಾರಗಳನ್ನು ಕಡಿಮೆ ಮಾಡುವುದು ಅವುಗಳೆಂದರೆ ಪಾಲಕ್, ಚಾಕೋಲೆಟ್, ಗೋಧಿ ಹೊಟ್ಟು, ಚಹಾ ಇತ್ಯಾದಿ

• ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಸೇವಿಸಿ

• ಮಧ್ಯಮ ಪ್ರಮಾಣದಲ್ಲಿ ಪ್ರೋಟಿನ ಸೇವನೆ

• ಹೆಚ್ಚಿನ ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು