News Karnataka Kannada
Thursday, May 02 2024
ಆರೋಗ್ಯ

ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡುವುದು ಹೇಗೆ

How to take care of your skin in winters
Photo Credit : Pixabay

ಚಳಿಗಾಲದ ತಂಪು ವಾತಾವರಣ ಯಾವಗಲೂ ಇಷ್ಟಪಡುವ ವಾತಾವರಣವಾಗಿದೆ. ಪ್ರತಿಯೊಬ್ಬನಿಗೂ ಈ ವಾತಾವರಣ ಸ್ವಾಗತಾರ್ಹವಾಗಿದೆ. ಈ ಇಷ್ಟಪಡುವ ವಾತಾವರಣ ನಮ್ಮ ಚರ್ಮಕ್ಕೆ ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇದು ನಮ್ಮ ಚರ್ಮವನ್ನು ತೇವಾಂಶವಿಲ್ಲದಂತೆ ಶುಷ್ಕವಾಗಿ ಮಾಡುತ್ತದೆ. ಇಂತಹ ಸಮಯದಲ್ಲಿ ನಾವು ಚರ್ಮದ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ಆಯುರ್ವೇದಿಕ್ ವೆಲ್‌ನೆಸ್ ಕ್ಲಿನಿಕ್‌ನ ವೈದ್ಯೆ ಡಾ. ಅನುರಾಧಾ ಹೇಳುತ್ತಾರೆ.

ಚರ್ಮದ ಆರೈಕೆಗೆ ಕೆಲವು ಸಲಹೆಗಳು

• ಬಿಸಿ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿ. ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ದೇಹಕ್ಕೆ ತುಂಬಾ ಹಿತಕರವಾಗಿರುತ್ತದೆ ಆದರೆ ಚರ್ಮಕ್ಕೆ ಇದು ತುಂಬಾ ಹಾನಿಯುಂಟುಮಾಡುತ್ತದೆ. ಬಿಸಿ ನೀರು ಶುಷ್ಕ ತ್ವಚೆಯನ್ನು ಹೆಚ್ಚು ಉಲ್ಬಣಗೊಳಿಸುತ್ತದೆ. ಹೀಗಾಗಿ ಉಗುರು ಬೆಚ್ಚಗಿನ ನೀರು ಬಳಸುವುದು ಉತ್ತಮ.

• ಸಾಕಷ್ಟು ನೀರು ಕುಡಿಯಿರಿ. ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ತೇವಾಂಶ ಕಡಿಮೆ ಇರುವುದರಿಂದ ನಮ್ಮ ದೇಹಕ್ಕೆ ನೀರಿನ ಅಗತ್ಯ ಹೆಚ್ಚಾಗಿರುತ್ತದೆ ಹೀಗಾಗಿ ನಮ್ಮ ದೇಹವನ್ನು ಹಾಗೂ ಚರ್ಮವನ್ನು ಶುಷ್ಕತೆಯಿಂದ ಕಾಪಾಡಿಕೊಳ್ಳಬಹುದು.

• ದೇಹ ಮುಚ್ಚಿಕೊಳ್ಳುವ ಉಡುಪು ಧರಿಸಿ. ಚಳಿಗಾಲದಲ್ಲಿ ಯುವಿ ಕಿರಣಗಳು ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಸಾಧ್ಯತೆಗಳಿರುವುದರಿಂದ ಸನ್ ಸ್ಕ್ರೀನ್ ಬಳಸಿ ಹಾಗೂ ಸೂರ್ಯನ ಕಿರಣ ಬೀಳುವ ದೇಹದ ಭಾಗಗಳನ್ನು ಮುಚ್ಚಿಕೊಳ್ಳಿ.

• ಬಾಡಿಲೋಶನ್ ಅಥವಾ ಎಣ್ಣೆಯನ್ನು ಉಪಯೋಗಿಸಿ. ದೇಹದ ಚರ್ಮ ಒಣಗಿದಾಗ ಬಾಡಿಲೋಷನ್ ಅಥವಾ ಎಣ್ಣೆಯನ್ನು ಬಳಸಿ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ.

ಚಳಿಗಾಲದಲ್ಲಿ ಆಹಾರ ಪದ್ದತಿ

ಚಳಿಗಾಲದ ಸಮಯದಲ್ಲಿ ಹೆಚ್ಚಾಗಿ ಕರಿದ, ಹುರಿದ, ಜಂಕ್‌ಫುಡ್‌ಗಳ ಅತಿಯಾದ ಸೇವನೆಯನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಈರೀತಿಯ ಆಹಾರ ನಮ್ಮಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿಯ ಆಹಾರ ಪದಾರ್ಥಗಳು ನಮ್ಮ ಮುಖದ ಮೇಲೆ ಮೊಡವೆಯಂತಹ ತೊಂದರೆಗಳನ್ನು ಉಂಟುಮಾಡುತ್ತದೆ.

ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡಲು ಆಹಾರದಲ್ಲಿ ಮುಖ್ಯವಾಗಿ ತರಕಾರಿಗಳು, ಹಣ್ಣುಗಳನ್ನು ಬಳಸುವುದು ಉತ್ತಮ ಮುಖ್ಯವಾಗಿ ಕ್ಯಾರೆಟ್, ಬಿಟ್ರೂಟ್, ಹಸಿರು ಎಲೆ ತರಕಾರಿಗಳು, ಬ್ರೋಕೊಲಿ, ಹಾಗೂ ಹಣ್ಣುಗಳಲ್ಲಿ ಸೇಬು, ನಿಂಬೆ, ಕಿತ್ತಳೆ, ಬಾಳೆಹಣ್ಣು, ದಾಳಿಂಬೆಗಳನ್ನು ಸೇರಿಸಿಕೊಳ್ಳುವುದು ಉತ್ತಮ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು