News Karnataka Kannada
Thursday, May 02 2024
ಆರೋಗ್ಯ

ನೈಜೀರಿಯಾದಲ್ಲಿ ಲಸ್ಸಾ ಜ್ವರಕ್ಕೆ 148 ಮಂದಿ ಬಲಿ

148 dead due to Lassa fever in Abuja
Photo Credit : IANS

ಅಬುಜಾ: ನೈಜೀರಿಯಾದಲ್ಲಿ ಕಳೆದ ವಾರದಲ್ಲಿ ನಾಲ್ಕು ಲಸ್ಸಾ ಜ್ವರ ಸಾವುಗಳು ದಾಖಲಾಗಿದ್ದು, ವರ್ಷದ ಆರಂಭದಿಂದ ಸಾವಿನ ಸಂಖ್ಯೆ 148 ಕ್ಕೆ ಏರಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ವೈರಲ್ ಹೆಮರಾಜಿಕ್ ಜ್ವರವು ಇಲ್ಲಿಯವರೆಗೆ 25 ರಾಜ್ಯಗಳಿಗೆ ವ್ಯಾಪಿಸಿದೆ . ಒಟ್ಟು 846 ಪ್ರಕರಣ ಮತ್ತು 4,338 ಶಂಕಿತ ಪ್ರಕರಣ ದಾಖಲಾಗಿವೆ ಎಂದು ನೈಜೀರಿಯಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಗುರುವಾರ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಲಸ್ಸಾ ಜ್ವರವು ಲಸ್ಸಾ ವೈರಸ್‌ನಿಂದ ಉಂಟಾಗುತ್ತದೆ. ಸೋಂಕಿತ ಮಾಸ್ಟೊಮಿಸ್ ಇಲಿಗಳ ಮೂತ್ರ ಅಥವಾ ಮಲದಿಂದ ಕಲುಷಿತಗೊಂಡ ಆಹಾರ, ವಸ್ತುಗಳ ಮೂಲಕ ಸೋಂಕು ಹರಡುತ್ತದೆ. ಪಶ್ಚಿಮ ಆಫ್ರಿಕಾದ ಭಾಗಗಳಲ್ಲಿ ಈ ಸೋಂಕು ವಿಪರೀತವಾಗಿದೆ. ವೈರಸ್‌ಗೆ ಒಡ್ಡಿಕೊಂಡ ನಂತರ ಒಂದರಿಂದ ಮೂರು ವಾರಗಳ ನಡುವೆ ರೋಗ ಲಕ್ಷಣ ಕಾಣಿಸಿಕೊಳ್ಳುತ್ತದೆ. ಜ್ವರ, ಆಯಾಸ, ದೌರ್ಬಲ್ಯ ಮತ್ತು ತಲೆನೋವು ಇದರ ಲಕ್ಷಣಗಳು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು