News Karnataka Kannada
Monday, April 29 2024
ಆರೋಗ್ಯ

ಕಾಮಾಲೆ ರೋಗವನ್ನು ಗುಣಪಡಿಸುವುದು ಹೇಗೆ

How to cure jaundice
Photo Credit : Pixabay

ಕಾಮಾಲೆ ರೋಗ, ಚರ್ಮ ರೋಗ, ಅಥವಾ ಹಳದಿ ರೋಗ ಎಂದು ಕರೆಯಲ್ಪಡುವ ಈ ಖಾಯಿಲೆಯು ಯಕೃತ್ ಅಥವಾ ಪಿತ್ತರಸ ನಾಳಗಳ ಸಮಸ್ಯೆಯನ್ನು ಸೂಚಿಸುತ್ತದೆ.

ಕಾಮಾಲೆ ಸಾಮಾನ್ಯವಾಗಿ ನವಜಾತ ಶಿಶುಗಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗು ಬರುವ ಖಾಯಿಲೆಯಾಗಿದೆ. ರಕ್ತದಲ್ಲಿ ಕೆಂಪು ರಕ್ತ ಕಣಗಳು ನೈಸರ್ಗಿಕವಾಗಿ ಬೇರ್ಪಡುವುದರಿಂದ ಬಿಲಿರುಬಿನ್ ಮಟ್ಟವು ಹೆಚ್ಚಾಗುತ್ತದೆ. ಯಕೃತ್ ಈ ರಕ್ತದಿಂದ ತ್ಯಾಜ್ಯವನ್ನು ಶೋಧಿಸುತ್ತದೆ ಮತ್ತು ಬಿಲಿರುಬಿನ್ ಎಂಬ ಹೊಸ ರೂಪವು ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಎಂದು ಆಯುರ್ವೇದಿಕ್ ವೆಲ್‌ನೆಸ್ ಕ್ಲಿನಿಕ್‌ನ ವೈದ್ಯೆ ಡಾ. ಅನುರಾಧಾ ಹೇಳುತ್ತಾರೆ.

ಮುಖ್ಯ ಕಾರಣಗಳು

ಕಾಮಾಲೆಯು ಚರ್ಮ,ಲೋಳೆಯ, ಪೊರೆಗಳು ಮತ್ತು ಕಣ್ಣುಗಳ ಬಿಳಿಯ ಭಾಗ ಹಳದಿ ಬಣ್ಣವಾಗುವುದು. ಕಾಮಾಲೆ ಸಾಮಾನ್ಯವಾಗಿ ಯಕೃತ್, ಪಿತ್ತಕೋಶ ಅಥವಾ ಮೆದೋಜೀರಕ ಗ್ರಂಥಿಯ ಸಮಸ್ಯೆಯ ಸಂಕೇತವಾಗಿದೆ. ದೇಹದಲ್ಲಿ ಹೆಚ್ಚು ಬಿಲಿರುಬಿನ್ ಸಂಗ್ರಹವಾದಾಗ ಕಾಮಾಲೆ ರೋಗವು ಉಂಟಾಗುತ್ತದೆ.

• ವೈರಸ್ ( ಹೆಪಟೈಟಿಸ್ ಸಿ, ಹೆಪಟೈಟಿಸ್ ಬಿ, ಹೆಪಟೈಟಿಸ್ ಎ, ಹೆಪಟೈಟಿಸ್ ಡಿ,)
• ಕೆಲವು ಔಷಧಗಳ ಬಳಕೆ
• ಹುಟ್ಟಿನಿಂದಲೇ ಇರುವ ತೊಂದರೆಗಳು
• ದೀರ್ಘಕಾಲದ ಯಕೃತ್ತಿನ ರೋಗ
• ರಕ್ತದ ಅಸ್ವಸ್ಥತೆ
• ಗರ್ಭದಾರಣೆಯ ಕಾಮಾಲೆ

ಕಾಮಾಲೆ ತಡೆಗಟ್ಟಲು ಕೆಲವು ಆಹಾರಗಳು

ಆಹಾರವು ದೇಹದ ಪ್ರಥಮಿಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಕಾರ್ಬೋಹೈಡ್ರೆಟ್ಸ್, ಪ್ರೋಟಿನ್‌ಗಳು, ಕೊಬ್ಬು, ವಿಟಮಿನ್‌ಗಳು, ಮತ್ತು ಖನಿಜ ಹಾಗೂ ನೀರನ್ನು ಒಳಗೊಂಡಿರಬೇಕು.

• ನೀರು: ದೇಹದಲ್ಲಿನ ವಿಷವನ್ನು ಹೊರಹಾಕಲು ಸಹಾಯಮಾಡುತ್ತದೆ. ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ಬಹಳ ಮುಖ್ಯ. ಬೇಕಾದರೆ ನೀರಿನ ಜೊತೆಗೆ ಸ್ವಲ್ಪ ನಿಂಬೆ ರಸ, ಪುದೀನಾ ಅಥವಾ ಸೌತೆಕಾಯಿ ಸೇರಿಸಿ ಕುಡಿಯಬಹುದು.

• ಹಣ್ಣು: ಹಣ್ಣಿನ ರಸಗಳಿಗೆ ಹೋಲಿಸಿದರೆ ಇಡಿಯಾದ ಹಣ್ಣನ್ನು ಸೇವಿಸುವುದು ಉತ್ತಮ. ಮುಖ್ಯವಾಗಿ ದ್ರಾಕ್ಷಿ, ಬೆರಿಹಣ್ಣುಗಳು, ಸಿಟ್ರಸ್ ಹಣ್ಣುಗಳು, ಕಲ್ಲಂಗಡಿ, ಪಪ್ಪಾಯ, ಅವಕಾಡೋ ಇತ್ಯಾದಿ.

• ತರಕಾರಿ: ತರಕಾರಿಗಳು ವಿಟಮಿನ್ ಸಿ ಇ, ಕ್ಯಾರೊಟೀನ್, ಸತು, ರಂಜಕ ಮುಂತಾದ ಖನಿಜಗಳನ್ನು ಹೊಂದಿದೆ. ಮುಖ್ಯವಾಗಿ ಯಾಮ್, ಸಿಹಿ ಆಲೂಗಡ್ಡೆ, ಕುಂಬಳಕಾಯಿ, ಟೊಮೆಟೋ, ಕ್ಯಾರಟ್, ಬೆಳ್ಳುಳ್ಳಿ, ಶುಂಠಿ, ಹಸಿರುಸೊಪ್ಪುಗಳು.

• ಧಾನ್ಯಗಳು: ಕಾಮಾಲೆಯಿಂದ ಚೇತರಿಸಿಕೊಳ್ಳಲು ಧಾನ್ಯಗಳು ಸಹಾಯಮಾಡುತ್ತದೆ ಮುಖ್ಯವಾಗಿ ರಾಗಿ, ಗೋಧಿ, ನವಣೆ, ಓಟ್ಸ್, ಅಕ್ಕಿ, ಬಕ್ವೀಟ್‌ಗಳು ಉತ್ತಮ.

ಕಾಮಾಲೆ ಇರುವವರು ಸೇವಿಸಬಾರದ ಆಹಾರಗಳು

• ಕೊಬ್ಬು
• ಸಕ್ಕರೆ
• ಉಪ್ಪು
• ಸಂಸ್ಕರಿಸಿದ ಆಹಾರಗಳು
• ಮದ್ಯ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು