News Karnataka Kannada
Sunday, May 12 2024
ಆರೋಗ್ಯ

ವಯಸ್ಸು ಮೀರಿದ ಮದುವೆ ತರಬಹುದು ಸಮಸ್ಯೆ!

Health
Photo Credit : News Kannada

ಬಹಳಷ್ಟು ಮಂದಿ ವಯಸ್ಸು ಮೀರುತ್ತಿದ್ದರೂ ಲೈಫ್ ನಲ್ಲಿ ಸೆಟ್ಲ್ ಆಗಲಿ ಆಮೇಲೆ ಆದರಾಯಿತು ಅಂಥ ಮದುವೆಯನ್ನು ಮುಂದೂಡುತ್ತಲೇ ಬರುತ್ತಿರುತ್ತಾರೆ ಅದು ಕಡೆಯಾದರೆ ಮತ್ತೊಂದು ಕಡೆ ಮದುವೆ ಆದ ಮೇಲೆ ದಂಪತಿ ಬೇಡ ಒಂದಷ್ಟು ವರ್ಷ ಹಾಯಾಗಿರೋಣ ಆಮೇಲೆ  ಮಾಡಿಕೊಂಡರಾಯಿತು ಎಂಬ ತೀರ್ಮಾನ ಮಾಡುತ್ತಾರೆ. ಆದರೆ ಅಂತಹ ತೀರ್ಮಾನ ಕೈಗೊಳ್ಳುವ ಮುನ್ನ ವೈದ್ಯರಾದ ಡಾ.ದೇವಿಕಾ ಗುಣಶೀಲ ಅವರು ಏನು ಹೇಳುತ್ತಾರೆ ಎಂಬುದನ್ನು ನೋಡಿ.

ಮದುವೆಯಾದ ಬಳಿಕ ದಂಪತಿ ಮಗು ಬೇಕೆಂದು ಬಯಸುವುದು ಸಹಜ. ಆದರೆ ಕೆಲವರು ಮದುವೆಯಾದ ಕೂಡಲೇ ಮಕ್ಕಳು ಬೇಡ ಒಂದಷ್ಟು ವರ್ಷದ ಬಳಿಕ ನೋಡೋಣ ಎನ್ನುತ್ತಾ ಮುಂದೂಡುತ್ತಾರೆ. ಆದರೆ ಅಂತಹ ತೀರ್ಮಾನಗಳು ಕೆಲವೊಮ್ಮೆ ಸಮಸ್ಯೆಗೆ ಕಾರಣವಾಗಿ ಬಿಡುತ್ತದೆ. ವಯಸ್ಸು ಮೀರಿದ ಬಳಿಕ ಮಗುವನ್ನು ಪಡೆಯುತ್ತೇವೆ ಎಂಬ ನಿರ್ಧಾರಕ್ಕೆ  ಬರುವವರು ಒಂದಷ್ಟು ವಿಚಾರಗಳನ್ನು ಅರಿತುಕೊಳ್ಳುವುದು ಬಹು ಮುಖ್ಯವಾಗುತ್ತದೆ.

ವೈದ್ಯರು ಹೇಳುವ ಪ್ರಕಾರ ಪುರುಷರಲ್ಲಿ ವಯಸ್ಸಾಗುತ್ತಿದ್ದಂತೆ ವಂಶಾವಳಿಯ ಮೇಲೆ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಅನೇಕ ಅಧ್ಯಯನಗಳಾಗಿವೆ.  ಅಂದರೆ, ತಂದೆಗೆ ವಯಸ್ಸಾಗುತ್ತಿದ್ದಂತೇ ಹುಟ್ಟುವ ಮಗುವಿಗೆ ಮುಂದೆ ಮಾರ್ಫನ್ ಸಿಂಡ್ರೋಮ್, ಪಾಲಿಫಾರ್ಮೇಶನ್ ಇನ್ ಲಾರ್ಜ್ ಬಾವೆಲ್ ಮುಂತಾದ ಸಿಂಡ್ರೋಮ್‌ಗಳು ಕಾಣಿಸಿಕೊಳ್ಳಬಹುದಂತೆ. ಈ ವಿಷಯವನ್ನು ಆಳವಾಗಿ ನೋಡುವುದಾದರೆ, ತಂದೆಯಾಗುವ ಪ್ರಕ್ರಿಯೆಯಲ್ಲಿ  ವಯಸ್ಸಾದಂತೆ ಹುಟ್ಟುವ ಮಕ್ಕಳಲ್ಲಿ ಇಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆಯಂತೆ.

ಅಧ್ಯಯನದ ಪ್ರಕಾರ 30-34 ವಯಸ್ಸಿನ ಅವಧಿಯಲ್ಲಿ ತಂದೆಯಾಗುವವರ ಮಕ್ಕಳಲ್ಲಿ 1000ಕ್ಕೆ ಒಂದು ಮಗುವಿಗೆ, 40-45ವಯಸ್ಸಿನಲ್ಲಿ ತಂದೆಯಾದರೆ ಅಂಥವರಲ್ಲಿ 1000ಕ್ಕೆ 4 ಅಥವಾ 5 ಮಕ್ಕಳಿಗೆ ಹಾಗೂ 45 ವಯಸ್ಸಿನ ನಂತರ ತಂದೆಯಾದರೆ 1000ಕ್ಕೆ 37ಮಕ್ಕಳಿಗೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆಯಂತೆ! ಮಕ್ಕಳಲ್ಲಿ ಅನುವಂಶೀಯವಾಗಿ ಕಾಣಿಸಿಕೊಳ್ಳುವ ಅನೇಕ ತೊಂದರೆಗಳಿಗೆ ತಂದೆಯಾಗುವಾಗಿನ ವಯಸ್ಸು 40 ದಾಟಿರುವುದೇ ಮುಖ್ಯ ಕಾರಣವಾಗಿರುತ್ತದೆ ಎಂದು ಹೇಳಲಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಹಲವು ಕಾರಣಗಳಿಂದಾಗಿ ಮದುವೆಯಾಗುವುದರಲ್ಲಿ ತಡವಾಗುತ್ತಿದೆ. ಹೀಗಿರುವಾಗ ಮದುವೆಯಾದ ನಂತರ ಮಗುವನ್ನು ಪಡೆಯುವಲ್ಲಿ ವಿಳಂಬ ಮಾಡುವುದು ಕೂಡ ಸಮಸ್ಯೆಯಾಗಬಹುದಾಗಿದೆ. ಆದ್ದರಿಂದ ಈ ಬಗ್ಗೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಬಹುಮುಖ್ಯವಾಗುತ್ತದೆ.

ಬಹಳಷ್ಟು ಮಂದಿ ವಯಸ್ಸು ಮೀರುತ್ತಿದ್ದರೂ ಲೈಫ್ ನಲ್ಲಿ ಸೆಟ್ಲ್ ಆಗಲಿ ಆಮೇಲೆ ಆದರಾಯಿತು ಅಂಥ ಮದುವೆಯನ್ನು ಮುಂದೂಡುತ್ತಲೇ ಬರುತ್ತಿರುತ್ತಾರೆ ಅದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಮದುವೆ ಆದ ಮೇಲೆ ದಂಪತಿ ಬೇಡ ಒಂದಷ್ಟು ವರ್ಷ ಹಾಯಾಗಿರೋಣ ಆಮೇಲೆ ಮಾಡಿಕೊಂಡರಾಯಿತು ಎಂಬ ತೀರ್ಮಾನ ಮಾಡುತ್ತಾರೆ. ಆದರೆ ಅಂತಹ ತೀರ್ಮಾನ ಕೈಗೊಳ್ಳುವ ಮುನ್ನ ವೈದ್ಯರಾದ ಡಾ.ದೇವಿಕಾ ಗುಣಶೀಲ ಅವರು ಏನು ಹೇಳುತ್ತಾರೆ ಎಂಬುದನ್ನು ನೋಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು