News Karnataka Kannada
Sunday, May 05 2024
ಆರೋಗ್ಯ

ಇಂದು ವಿಶ್ವ ಅಲ್ಜೈಮರ್​ ದಿನ: ಹಿರಿಯರ ಮೇಲೆ ನಿಗಾ ಇರಲಿ

Health 21092021
Photo Credit :

ಸಾಮಾನ್ಯವಾಗಿ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಕಂಡು ಬರುವ ಅಲ್ಜೈಮರ್ ಖಾಯಿಲೆಯು ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಈ ಖಾಯಿಲೆಯು ವ್ಯಕ್ತಿಯಲ್ಲಿ ನೆನಪಿನ ಶಕ್ತಿಯನ್ನು ಕುಂಠಿತಗೊಳಿಸುತ್ತದೆ, ಆಲ್ಝೈಮರ್ ಖಾಯಿಲೆ ಹೊಂದಿರುವ ವ್ಯಕ್ತಿಗೆ ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವೇ ಇಲ್ಲದಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ವಯಸ್ಸಾದವರಲ್ಲಿ ಅಲ್ಜೈಮರ್ ಆರಂಭಿಕ ಲಕ್ಷಣಗಳಿಗೆ ಗಮನ ಕೊಡುವುದು ಮುಖ್ಯ. ವ್ಯಕ್ತಿಯ ನಡುವಳಿಕೆಗೆ ಮುಖ್ಯವಾದ ನರಗಳ ಕ್ಷೀಣತೆಯಿಂದಾಗಿ ಅಲ್ಜೈಮರ್ ಸಂಭವಿಸುತ್ತದೆ.

ಅಲ್ಜೈಮರ್ ಖಾಯಿಲೆಯ ಆರಂಭಿಕ ಹಂತಗಳಲ್ಲಿ ವ್ಯಕ್ತಿಯ ಸ್ಮರಣೆ, ನಡವಳಿಕೆ ಮತ್ತು ಸಂವಹನ ಕೌಶಲ್ಯಗಳಲ್ಲಿ ಬದಲಾವಣೆಗಳನ್ನು ಗಮನಿಸಬಹುದು. ಇಂತಹ ಲಕ್ಷಣಗಗಳು ಕಂಡು ಬರುತ್ತಿದ್ದರೆ ನರವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗಿದೆ.

ನರಶಸ್ತ್ರಚಿಕಿತ್ಸಕ ಡಾ.ರಾಜ್ ಹೇಳಿದ ಮಾಹಿತಿಯಂತೆ ಹಿಂದುಸ್ತಾನ್ ಟೈಮ್ಸ್ ಈ ಖಾಯಿಲೆಯ ಆರಂಭಿಕ ಲಕ್ಷಣದ ಕುರಿತಾಗಿ ವರದಿ ಮಾಡಿದೆ. ವೈದ್ಯರು ಸೂಚಿಸಿರುವ ಕೆಲವು ಅಂಶಗಳು ಈ ಕೆಳಗಿನಂತಿದೆ.

ನೆನಪಿನ ಶಕ್ತಿ ಕುಂಠಿತಗೊಳ್ಳುತ್ತದೆ: ಅಲ್ಜೈಮರ್ ಖಾಯಿಲೆಯ ಪ್ರಮುಖ ಲಕ್ಷಣವೆಂದರೆ ನೆನಪಿನ ಶಕ್ತಿ ಕುಂಠಿತಗೊಳ್ಳುವುದು. ಸಾಮಾನ್ಯವಾಗಿ ಮರೆವು ಒಂದು ರೋಗವಲ್ಲ. ಆದರೆ ಅಲ್ಜೈಮರ್ ರೋಗಕ್ಕೆ ತುತ್ತಾದವರಲ್ಲಿ ನೆನಪಿನ ಶಕ್ತಿ ತುಂಬಾ ಕುಂಠಿತಗೊಳ್ಳುತ್ತದೆ. ಉದಾಹರಣೆಗೆ ಓರ್ವ ವ್ಯಕ್ತಿ ಒಂದು ಸ್ಥಲಕ್ಕೆ ಭೇಟಿ ನೀಡಿದ್ದರೆ, ಒಂದರೆಡು ದಿನಗಳಲ್ಲಿಯೇ ಆತ ಸಂಪೂರ್ಣವಾಗಿ ವಿಷಯವನ್ನು ಮರೆತುಬಿಡುತ್ತಾನೆ. ಕೆಲವು ಬಾರಿ ತಿಂದ ಆಹಾರವೇ ಆತನಿಗೆ ನೆನಪಿರುವುದಿಲ್ಲ. ಇಂತಹ ಲಕ್ಷಣಗಳು ಅಲ್ಜೈಮರ್ ಖಾಯಿಲೆಯ ಅರಂಭಿಕ ಲಕ್ಷಣಗಳಾಗಿವೆ.

ಹಣವನ್ನು ಎಣಿಸುವಲ್ಲಿ ಅಥವಾ ನಿರ್ವಹಿಸುವಲ್ಲಿ ತೊಂದರೆ: ಈ ರೋಗದ ಮತ್ತೊಂದು ಆರಂಭಿಕ ಲಕ್ಷಣವೆಂದರೆ, ವ್ಯಕ್ತಿಯು ಸಾಮಾನ್ಯ ಲೆಕ್ಕಾಚಾರ ಮಾಡುವಲ್ಲಿಯೂ ಗೊಂದಲಕ್ಕೊಳಗಾಗುತ್ತಾನೆ. ಹಣದ ಲೆಕ್ಕಾಚಾರಗಳನ್ನು ಮಾಡುವುದು ಆತನಿಗೆ ಕಷ್ಟವಾಗುತ್ತದೆ. ಹಣವನ್ನು ನಿರ್ವಹಿಸುವಲ್ಲಿ ಅಥವಾ ಬಿಲ್ ಪಾವತಿಸುವಲ್ಲಿ ಗೊಂದಲಕ್ಕೊಳಗಾಗುತ್ತಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು