ಈ ಬದಲಾದ ಕಾಲಘಟ್ಟದಲ್ಲಿ ಮನುಷ್ಯನ ಆಹಾರ ಪದ್ದತಿಯಲ್ಲಿ ಸಾಕಷ್ಟು ಬದಲಾವಣೆ ಅಗಿದೆ. ಇದು ನೇರವಾಗಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿರುವುದು ನಾವು ಕಾಣುತ್ತೇವೆ…
ಸಾಮಾನ್ಯವಾಗಿ ಈಗೀನ ಮಕ್ಕಳಿಂದ ವಯಸ್ಸಾದವರರಿಗೆ ಕಾಡುವ ಸಾಮಾನ್ಯ ಸಮಸ್ಯೆ ಗ್ಯಾಸ್ಟ್ರಿಕ್, ಅಜೀರ್ಣ, ತೂಕ ಹೆಚ್ಚಳ ಇತ್ಯಾದಿ. ಇದನ್ನು ನಾವು ಪ್ರಾಥಮಿಕ ಹಂತದಲ್ಲೇ ಕಂಟ್ರೋಲ್ ಮಾಡಬೇಕಾದರೆ ಬಿಸಿ ನೀರಿನ ಪಾತ್ರ ಪ್ರಮುಖವಾಗಿದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನಾವು ಬಿಸಿ ನೀರು ಸೇವಣೆ ಮಾಡಿದರೆ ನಿಧಾಮವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹತೋಟಿಗೆ ತರಬಹುದು.
ಉಗುರು ಬೆಚ್ಚಗಿನ ಬಿಸಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಯಾವೆಲ್ಲ ಲಾಭಗಳು ಉಂಟಾಗಲಿವೆ ಎಂಬುದನ್ನು ಈಗ ನೋಡೋಣ
ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ
ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಣೆ ಆಗುವುದರ ಜೊತೆಗೆ ದೇಹದಿಂದ ವಿಷಪೂರಿತ ಅಂಶಗಳು ದೂರಾಗುತ್ತವೆ.
ಆಹಾರ ಸೇವಿಸಿದ ಸಂದರ್ಭದಲ್ಲಿ ನಮ್ಮ ಅನ್ನ ನಾಳದಲ್ಲಿ ಅಳಿದುಳಿದ ಆಹಾರ ಪದಾರ್ಥಗಳು ಹಾಗೆ ಶೇಖರಣೆ ಆಗಿರುತ್ತವೆ. ಬೆಳಗ್ಗೆ ಎದ್ದು ಬಿಸಿ ನೀರು ಕುಡಿಯುವುದರಿಂದ ನಮ್ಮ ಅನ್ನನಾಳ ಸ್ವಚ್ಛವಾಗುತ್ತದೆ.
ಇನ್ನು ರಾತ್ರಿಯ ಸಮಯದಲ್ಲಿ ಒಂದು ವೇಳೆ ನೀವು ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿಂದಿದ್ದರೆ ಬೆಳಗಿನ ಸಮಯದಲ್ಲಿ ಉಗುರು ಬೆಚ್ಚಗಿನ ನೀರನ್ನು ಸೇವನೆ ಮಾಡುವುದರಿಂದ ನಿಮ್ಮ ಸಂಪೂರ್ಣ ದೇಹ ಸ್ವಚ್ಛವಾಗುತ್ತದೆ.