ಚಂಡೀಗಢ: ಮದುಮಗ ಸಾಗುತ್ತಿದ್ದ ವಾಹನ ಟ್ರಕ್ ಗೆ ಡಿಕ್ಕಿಯಾದ ಕಾರಣ ವರ ಸೇರಿದಂತೆ ನಾಲ್ವರು ಸಾವನ್ನಪ್ಪಿದ ಘಟನೆ ಪಂಜಾಬ್ನ ಮೋಗಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
23 ವರ್ಷದ ಸುಖ್ವಿಂದರ್ ಸಿಂಗ್ ಅವರ ವಿವಾಹಕ್ಕಾಗಿ ಕುಟುಂಬವು ಫಜಿಲ್ಕಾದಿಂದ ಲುಧಿಯಾನಕ್ಕೆ ಪ್ರಯಾಣಿಸುತ್ತಿತ್ತು. ಮೃತರಲ್ಲಿ ಸುಖ್ವಿಂದರ್ ಅವರ ಸೋದರ ಸೊಸೆ, ಅವರ ಸೋದರ ಅಂಗ್ರೇಜ್ ಸಿಂಗ್ ಮತ್ತು ಸಂಬಂಧಿ ಸಿಮ್ರಾನ್ ಸೇರಿದ್ದಾರೆ. ಗಾಯಾಳುಗಳಾದ ಮೊಹಿಂದರ್ಪಾಲ್ ಸಿಂಗ್ ಮತ್ತು ಸೀಮಾ (29) ಅವರನ್ನು ಲುಧಿಯಾನದ ಆಸ್ಪತ್ರೆಗೆ ದಾಖಲಿಸಲಾಗಿದೆ.