ಮಂಗಳೂರು: ದ.ಕ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮತ್ತೆ ನಳಿನ್ ಕಟೀಲ್ ಅಭ್ಯರ್ಥಿ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯನ್ನ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಮತ್ತೆ ನಳಿನ್ ಕಟೀಲ್ ಗೆಲ್ಲಿಸಿ ಕೊಡಿ. ಮತ್ತೊಮ್ಮೆ ನಮ್ಮ ಪಕ್ಷದ ಅಭ್ಯರ್ಥಿಯಾದ ನಳಿನ್ ಕುಮಾರ್ ಕಟೀಲ್ ರನ್ನ ಗೆಲ್ಲಿಸುವ ಕೆಲಸ ಮಾಡಬೇಕಿದೆ ಎಂದು ಕಾರ್ಯಕರ್ತರ ಸಭೆಯಲ್ಲಿ ನಳಿನ್ ಕಟೀಲ್ ಪರ ವಿಜಯೇಂದ್ರ ಬ್ಯಾಟ್ ಬೀಸಿದ್ದಾರೆ.
ಸದ್ಯ ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಾರೀ ಗೊಂದಲದ ಗೂಡಾಗಿದೆ. ಅರುಣ್ ಪುತ್ತಿಲ ಬಂಡಾಯದಿಂದ ದ.ಕ ಸುದ್ದಿಯಲ್ಲಿದೆ. ಹಲವರಿಂದ ಮುಂದಿನ ಸಂಸದ ಸ್ಥಾನದ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಬೇಡಿಕೆಯಿದೆ. ಈ ಮಧ್ಯೆ ಮತ್ತೆ ನಳಿನ್ ಗೆಲ್ಲಿಸಿ ಕೊಡಿ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೇಳಿಕೊಂಡಿದ್ದಾರೆ.