ಮಂಗಳೂರು: ಮಂಗಳೂರಿನ ಬೆಂದೂರುವೆಲ್ ನಲ್ಲಿರು ಅಟ್ಲಾಂಟಿಕ್ ಅಪಾರ್ಟ್ಮೆಂಟ್ ನಿಂದ ಹಾರಿ ಬಿಲ್ಡರ್ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರದ ಬಿಲ್ಡರ್ ಮೋಹನ್ ಅಮೀನ್ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ.
ತಾನು ವಾಸಿಸುತ್ತಿದ್ದ ಅಪಾಟ್ರ್ಮೆಂಟ್ ನ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಘಟನ ಸ್ಥಳಕ್ಕೆ ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ , ಪರಿಶೀಲನೆ ನಡೆಸುತ್ತಿದ್ದಾರೆ.