News Karnataka Kannada
Sunday, May 05 2024
ಕ್ರೈಮ್

ಪಾರ್ಟ್ ಟೈಮ್ ಜಾಬ್ ನಲ್ಲಿ ಹೂಡಿಕೆ ಮಾಡಿ 23 ಲಕ್ಷ ಕಳೆದುಕೊಂಡ ಟೆಕ್ಕಿ

Nelamangala: Cheated on the pretext of paying interest
Photo Credit : Pixabay

ಬೆಂಗಳೂರು: 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್​ ಪಾರ್ಟ್ ಟೈಮ್ ಜಾಬ್ ನಲ್ಲಿ ಹೂಡಿಕೆ ಮಾಡಿ 23 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೃತಿಕಾ (ಹೆಸರು ಬದಲಾಯಿಸಲಾಗಿದೆ) ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್​  ಒಬ್ಬರು  ಪಾರ್ಟ್ ಟೈಮ್ ಜಾಬ್​ನಲ್ಲಿ ಹಣ ಹೂಡಿ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನವೆಂಬರ್ 3 ರಂದು ಅಪರಿಚಿತ ಸಂಖ್ಯೆಯಿಂದ ಶೀತಲ್ ಎಂಬ ವ್ಯಕ್ತಿ ವಾಟ್ಸಾಪ್‌ ಮೂಲಕ ಕೃತಿಕಾರನ್ನು ಸಂಪರ್ಕಿಸಿ, ಪಾರ್ಟ್ ಟೈಮ್ ಜಾಬ್ ಅವಕಾಶವಿದ್ದು, ಚಟ್ನಿ ಎಂಬ ಹೆಸರಿನ ರೆಸ್ಟೊರೆಂಟ್​ಗೆ ರಿವಿವ್ ಬರೆದರೆ ಹಣ ಸಿಗುತ್ತದೆ ಎಂದು ಕರೆ ಮಾಡಿದ್ದ ಶೀತಲ್ ಕೃತಿಕಾಗೆ ಹೇಳಿದ್ದಾರೆ. ಕೃತಿಕಾ ರೆಸ್ಟೊರೆಂಟ್​ಗೆ ರಿವಿವ್ ಬರೆದು ಪೋಸ್ಟ್ ಮಾಡಿ, ಅದರ ಸ್ಕ್ರೀನ್‌ಶಾಟ್ ಅನ್ನು ಶೀತಲ್​ಗೆ ಕಳಿಸಿದ್ದಾರೆ. ಆಗ ಕೃತಿಕಾಗೆ 200 ರೂ ಪಾವತಿಸಲಾಗಿದೆ ಎಂದು ಕೃತಿಕಾ ಅವರು ಪೊಲೀಸರಿಗೆ ತಿಳಿಸಿದ್ದಾರೆ.

ಇದಾದ ನಂತರ  ಕೃತಿಕಾರನ್ನು ಐದು ಟೆಲಿಗ್ರಾಮ್ ಗುಂಪುಗಳಿಗೆ ಸೇರುವಂತೆ ಆಮಿಷವೊಡ್ಡಲಾಗಿದ್ದು ಕೃತಿಕಾ ಅವರು  5 ಟೆಲಿಗ್ರಾಮ್ ಗುಂಪುಗಳಿಗೆ ಸೇರಿದ್ದಾರೆ. ಬಳಿಕ swiccatch.com ನಲ್ಲಿ ಆನ್‌ಲೈನ್ ಕಾರ್ಯಗಳನ್ನು ಪೂರ್ಣಗೊಳಿಸಲು 1,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಿತ್ತು. ಹೋಡಿಕೆ ಮಾಡಿದ ನಂತರ ಕೃತಿಕಾಗೆ 1,300 ರೂಪಾಯಿಗಳ ಲಾಭ ಬಂದಿದೆ.

ನಂತರ ವಂಚಕರು ಕೃತಿಕಾಗೆ, ಹೆಚ್ಚು ಹೂಡಿಕೆ ಮಾಡುವ ಮೂಲಕ ಹೆಚ್ಚು ಗಳಿಸಬಹುದು ಎಂದು ನಂಬಿಕೆ ಬರುವಂತೆ ಮಾಡಿದ್ದಾರೆ. ಬಳಿಕ ಕೃತಿಕಾ, ಹಲವು ಕಂತುಗಳ ಮೂಲಕ ಐದು ಐಸಿಐಸಿಐ ಬ್ಯಾಂಕ್ ಖಾತೆಗಳು, ಒಂದು ಫೆಡರಲ್ ಬ್ಯಾಂಕ್ ಖಾತೆ ಮತ್ತು ಕೆಲವು ಯುಪಿಐ ಐಡಿಗಳಿಗೆ 23,23,315 ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ.

ಹಣ ಹಿಂಪಡೆಯುವ ಸಮಯ ಬಂದಾಗ, ವಂಚಕನು ಹೆಚ್ಚಿನ ಹೂಡಿಕೆಗೆ ಬೇಡಿಕೆ ಇಟ್ಟಿದ್ದರು ಎಂದು ಕೃತಿಕಾ ಆರೋಪಿಸಿದ್ದಾರೆ. ಹಣಕ್ಕೆ ಬೇಡಿಕೆ ಇಡುತ್ತಿದ್ದಂತೆ ತಾನು ವಂಚನೆಗೊಳಗಾಗಿರುವುದು ಕೃತಿಕಾಳ ಅರಿವಿಗೆ ಬಂದಿದೆ. ಬಳಿಕ ನವೆಂಬರ್ 9 ರಂದು ವೈಟ್‌ಫೀಲ್ಡ್ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಮ್ (ಸಿಇಎನ್) ಪೊಲೀಸರನ್ನು ಸಂಪರ್ಕಿಸಿ ಕೃತಿಕಾ ಅವರು ದೂರು ದಾಖಲಿಸಿದ್ದಾರೆ.

ಸಿಇಎನ್ ಪೊಲೀಸರು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66 (ಡಿ) ಮತ್ತು ಐಪಿಸಿ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು