ಮುಂಬೈ: 14ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ಸಂಭವಿಸಿದೆ.
ಅಂಧೇರಿಯ ಪಶ್ಚಿಮ ಉಪನಗರದ ಎಸ್ವಿ ರಸ್ತೆಯಲ್ಲಿರುವ ಮಿಲಿಯನೇರ್ ಹೆರಿಟೇಜ್ ಸೊಸೈಟಿಯಲ್ಲಿ ಈ ದುರಂತ ನಡೆದಿದೆ.
ವಿಲೆಪಾರ್ಲೆಯ ಮಿಥಿಬಾಯಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ವಿಧಿ ಪ್ರಮೋದ್ ಕುಮಾರ್ ಸಿಂಗ್ ಅವರು ಕಳೆದ ಕೆಲವು ವರ್ಷಗಳಿಂದ ಪೇಯಿಂಗ್ ಗೆಸ್ಟ್ ಆಗಿ ಕಟ್ಟಡದಲ್ಲಿ ವಾಸವಾಗಿದ್ದು, ಆಕೆಯ ಕುಟುಂಬ ಸದಸ್ಯರು ಥಾಣೆಯಲ್ಲಿ ನೆಲೆಸಿದ್ದಾರೆ ಎಂದು ಮಾಹಿತಿ ಲಭಿಸಿದೆ.
ನೆಲದ ಮೇಲೆ ಆಕೆಯ ದೇಹವನ್ನು ಗಮನಿಸಿದ ಕಟ್ಟಡದ ಸೆಕ್ಯುರಿಟಿ ಗಾರ್ಡ್ ತಕ್ಷಣವೇ ಇತರ ನಿವಾಸಿಗಳಿಗೆ ತಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.