ಹೈದ್ರಬಾದ್: ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಚೋಡಾವರಂನಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಮದ್ಯಪಾನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ 7ನೇ ತರಗತಿಯ ಹುಡುಗರ ಗುಂಪು ಮದ್ಯ ಸೇವಿಸುತ್ತಿರುವ ದೃಶ್ಯವೊಂದು ವೈರಲ್ ಆಗುತ್ತಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಸೆರೆಯಾಗಿರುವ ದೃಶ್ಯದಲ್ಲಿ ಹಾಸ್ಟೆಲ್ನ ಕೋಣೆಯಲ್ಲಿ ವಿದ್ಯಾರ್ಥಿಗಳು ಮದ್ಯಪಾನ ಸೇವಿಸುತ್ತ ಪಾರ್ಟಿ ಮಾಡುತ್ತಿರುವುದು ಸೆರೆಯಾಗಿದೆ. ಇನ್ನು ಈ ದೃಶ್ಯವನ್ನು ಸೆರೆಹಿಡಿಯಲು ಇತರ ಹುಡುಗರು ಮುಂದಾದಗ ಅವರಿಗೆ ಅವಾಜ್ ಹಾಕಿರುವುದು ಕೂಡ ದೃಶ್ಯದಲ್ಲಿ ಸೆರೆಯಾಗಿದೆ.
ಹಾಸ್ಟೆಲ್ ನಲ್ಲಿನ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಕ್ಕಳ ಮೇಲ್ವಿಚಾರಣೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
సినిమాలు..OTT …ట్యాబ్ ల ప్రభావం..పెద్ద కొండా గాడు చాలామందిని నాశనం చేశాడు ..
అనకాపల్లి జిల్లా చోడవరం…..సంక్షేమ హాస్టల్ లో….న్యూ ఇయర్ సెలెబ్రేషన్స్…మందు కొట్టిన 7 వ తరగతి విద్యార్థులు…
వీడియో తీసిన వ్యక్తి. పై దాడి చేసిన స్టూడెంట్స్…పట్టించుకోని హాస్టల్ వార్డెన్
1/2 pic.twitter.com/g8Nzd5bYRZ— మన ప్రకాశం (@mana_Prakasam) January 3, 2024