ಉತ್ತರಪ್ರದೇಶ: ಯುವತಿಯನ್ನು ಅನುಚಿತವಾಗಿ ಮುಟ್ಟಿದ ಆರೋಪದ ಮೇಲೆ 75 ವರ್ಷದ ವೃದ್ಧನೊಬ್ಬನಿಗೆ ಬೂಟಿನ ಹಾರ ತೊಡಿಸಿ ತನ್ನ ಎಂಜಲನ್ನೇ ನೆಕ್ಕುವಂತೆ ಮಾಡಿದ ಘಟನೆಯ ವಿಡಿಯೋ ವೈರಲ್ ಆಗಿದೆ.
ಸಂತ್ರಸ್ತನನ್ನು ತಿಘಾರಾ ಗ್ರಾಮದ ಮೊಹಬ್ಬತ್ ಅಲಿ ಎಂದು ಗುರುತಿಸಲಾಗಿದೆ. ಈ ಘಟನೆಯ ಸಂಬಂಧ ಪೊಲೀಸರು ಜಾಫರ್, ಅಮನ್ ಪಾಂಡೆ, ಅಖಿಲೇಶ್ ಸಾಹನಿ ಮತ್ತು ಘನಶ್ಯಾಮ್ ತಿವಾರಿ ಎಂಬುವರನ್ನು ಬಂಧಿಸಲಾಗಿದೆ.
ವ್ಯಕ್ತಿಯೊಬ್ಬ ಅಲಿ ವಿರುದ್ಧ, ತನ್ನ ಮಗಳನ್ನು ಅಲಿ ಅನುಚಿತವಾಗಿ ಮುಟ್ಟಿದ ಎಂದು ಆರೋಪಿಸಿ ದೂರು ನೀಡಿದ್ದ. ಇದರ ಬೆನ್ನಲ್ಲೇ ಈಗ ಬಂಧಿತರಾಗಿರುವ ಮೂವರು ಅಲಿಗೆ ಬೂಟಿನ ಹಾರ ಹಾಕಿ ಎಂಜಲು ನೆಕ್ಕಿಸಿ ಮುಖಕ್ಕೆ ಕಪ್ಪು ಮಸಿ ಹಚ್ಚಿದ್ದರು. ವಿಡಿಯೋ ವೈರಲ್ ಆದ ನಂತರ ಮೂವರನ್ನೂ ಬಂಧಿಸಲಾಗಿದೆ.