ದೆಹಲಿ: ಅಪ್ರಾಪ್ತ ಬಾಲಕನನ್ನು ಚಾಕುವಿನಿಂದ 50ಕ್ಕೂ ಹೆಚ್ಚು ಬಾರಿ ಮತ್ತೊರ್ವ ಬಾಲಕ ಇರಿದು ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಸ್ತುತ, ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ತನಿಖೆ ಕೈಗೊಂಡಿದ್ದಾರೆ.
ವಿಷಯ ಬೆಳಕಿಗೆ ಬಂದ ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಕೊಲೆಯಾದವನು 16 ವರ್ಷದ ಅಪ್ರಾಪ್ತ ಬಾಲಕ. ಆರೋಪಿ ಹಣ ದೋಚಲು ಯತ್ನಿಸುತ್ತಿದ್ದ. ಆದರೆ ಬಾಲಕ ಹಣ ಕೊಡಲು ನಿರಾಕರಿಸಿದಾಗ ಮೊದಲು ಕತ್ತು ಹಿಸುಕಿ, ಬಳಿಕ ಚಾಕುವಿನಿಂದ ಇರಿದಿದ್ದಾನೆ ಎಂದು ದೆಹಲಿ ಪೊಲೀಸರು ಬಾಲಕನ ವಿಚಾರಣೆ ಬಳಿಕ ತಿಳಿಸಿದ್ದಾರೆ.