News Karnataka Kannada
Thursday, May 09 2024
ಕ್ರೈಮ್

ಮಣಿಪುರದಲ್ಲಿ ಬೆಳಕಿಗೆ ಬಂತು ಮತ್ತೊಂದು ಘನಘೋರ ಕೃತ್ಯ

ಸ್ಪೇನ್‌ನ ವಿದೇಶಿ ಪ್ರವಾಸಿಗರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ ಘಟನೆ ಶುಕ್ರವಾರ ರಾತ್ರಿ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Photo Credit : IANS

ಇಂಫಾಲ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೊಂದು ಭೀಕರ ಅತ್ಯಾಚಾರ ಮತ್ತು ಚಿತ್ರಹಿಂಸೆಯ ಘಟನೆ ಬೆಳಕಿಗೆ ಬಂದಿದ್ದು, ಪ್ರಸ್ತುತ ಪರಿಹಾರ ಶಿಬಿರದಲ್ಲಿರುವ ಸಂತ್ರಸ್ತೆ ಮೇ 3ರಂದು ನಡೆದ ಅತ್ಯಾಚಾರ ಕುರಿತು ಸಂತ್ರಸ್ತೆ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.

37 ವರ್ಷದ ವಿವಾಹಿತೆ ತನ್ನ ಮೇಲಾದ ಪೈಶಾಚಿಕ ಘಟನೆಯನ್ನು ಹೀಗೆ ವಿವರಿಸಿದ್ದಾರೆ. ಮೇ 3 ರಂದು ಹಿಂಸಾಚಾರ ತೀವ್ರಗೊಂಡಿತು. ಈ ವೇಳೆ ನಾನೂ ಸೇರಿದಂತೆ ಜನರು ಮನೆಗಳಿಂದ ಪಲಾಯನ ಮಾಡಲು ತಯಾರಿ ನಡೆಸುತ್ತಿದ್ದೆವು. ಈ ವೇಳೆ ಮೈಟೆಯಿ ಗುಂಪಿನ ಜನರು ನನ್ನನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ಅಲ್ಲದೆ ನನ್ನನ್ನು ಬಲವಂತವಾಗಿ ಕೆಳಕ್ಕೆ ಬೀಳಿಸಿದರು. ಬಳಿಕ ನನ್ನ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಆರಂಭಿಸಿದರು. ಈ ವೇಳೆ ನಾನು ಸಹಾಯಕ್ಕಾಗಿ ಕೂಗಿಕೊಂಡರೂ ಯಾರು ಬರಲಿಲ್ಲ ಎಂದಿದ್ದಾರೆ. ನಂತರ ನಾನು ಪ್ರಜ್ಞೆ ಕಳೆದುಕೊಂಡಿದ್ದು, ಪ್ರಜ್ಞೆ ಮರಳಿದ ವೇಳೆ ನಾನು ಮೈಟೆಯಿ ಜನರು ವಾಸಿಸುವ ಮನೆಯಲ್ಲಿದ್ದು, ಹಲವರು ನನ್ನನ್ನು ಸುತ್ತುವರಿದ್ದಿದ್ದರು ಎಂದು ತಿಳಿಸಿದ್ದಾರೆ.

ಮೇ 3 ರಂದು ನಡೆದ ಭೀಕರ ಘಟನೆ ಕುರಿತು ಬಿಷ್ಣುಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್, ಪ್ರತ್ಯೇಕ ದೂರನ್ನು ದಾಖಲಿಸಿದ್ದಾರೆ. ಬಿಷ್ಣುಪುರದ ಮಹಿಳಾ ಪೊಲೀಸ್ ಠಾಣೆಯು ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಚುರಚಂದಪುರ ಪೊಲೀಸ್ ಠಾಣೆಗೆ ರವಾನಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು